ಮಹಿಳೆಯರಿಗೆ ಸಿಗುತ್ತೆ 1,50,000 ರೂಪಾಯಿ! ಮಹತ್ವದ ಯೋಜನೆ ಘೋಷಿಸಿದ ಸರ್ಕಾರ

government-has-announced-an-important-scheme-for-women

ನಮಸ್ಕಾರ ಸೇಹಿತರೇ ರಾಜ್ಯದಲ್ಲಿಯೂ ಕೂಡ ಸಾಕಷ್ಟು ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಂಡು ಸ್ವಂತ ಉದ್ಯಮ ಆಂರಭಿಸಿದ್ದಾರೆ.

government-has-announced-an-important-scheme-for-women
government-has-announced-an-important-scheme-for-women

ಮಹಿಳೆಯರು ಇಂದು ಪುರುಷರಿಗೆ ಸಮಾನವಾಗಿ ಬೆಳೆದು ನಿಂತಿದ್ದಾರೆ ಎನ್ನಬಹುದು. ಯಾಕೆಂದರೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಮಹಿಳೆಯರ ತೊಡಗಿಸಿಕೊಳ್ಳುವಿಕೆ ಇದ್ದೆ ಇರುತ್ತೆ. IT ಕ್ಷೇತ್ರ ಆಗಿರಬಹುದು, ಬ್ಯಾಂಕಿಂಗ್ ವ್ಯಾಪಾರ,ವ್ಯವಹಾರ,ಹೆಣ್ಣುಮಕ್ಕಳು ಹೀಗೆ ಯಾವ ಕ್ಷೇತ್ರದಲ್ಲೂ ಇಲ್ಲ ಎನ್ನುವ ಹಾಗಿಲ್ಲ.

ಇನ್ನೂ ವ್ಯಾಪಾರ ಸ್ವಂತ ಉದ್ಯೋಗ (Own business )ಎಂಬ ವಿಷಯಕ್ಕೆ ಬಂದರೆ ಇಂದು ಮಹಿಳೆಯರು ಸ್ವಾವಲಂಬಿಯಾಗಿ ಜೀವನ (Independence life of women ) ನಡೆಸುತ್ತಿರುವುದು ಮಾತ್ರವಲ್ಲದೆ ಆರ್ಥಿಕವಾಗಿಯು ಪುರುಷರ ಸರಿ ಸಮಾನ ದುಡಿಯುತ್ತಿದ್ದಾರೆ. ಇದಕ್ಕೆ ಸರ್ಕಾರದ ಹಾಲು ಯೋಜನೆಗಳು ಪೂರಕವಾಗಿವೆ ಎಂದರೆ ಅತಿಶಯೋಕ್ತಿಯಲ್ಲ.

ಮಹಿಳೆಯರಿಗಾಗಿಯೇ ಆರಂಭವಾಗಿರುವ ಉದ್ಯೋಗಿನಿ ಯೋಜನೆ! (Udyogini scheme) ರಾಜ್ಯದಲ್ಲಿ ವಾಸಿಸುವ ಮಹಿಳೆಯರು ಸ್ವಾವಲಂಬನೆ ಜೀವನ ನಡೆಸುವ ಸಲುವಾಗಿ ಉದ್ಯೋಗಿನಿ ಯೋಜನೆಯನ್ನು ಜಾರಿಗೆ ತರಲಾಗಿದೆ.

ಕೇಂದ್ರ ಸರಕಾರ (Central government )ಮತ್ತು ರಾಜ್ಯ ಸರ್ಕಾರ ಎರಡು ಸರ್ಕಾರಗಳು ಸೇರಿ ಸಬ್ಸಿಡಿಯನ್ನು ನೀಡುತ್ತವೆ. ಮೂರು ಲಕ್ಷ ರೂಪಾಯಿಗಳವರೆಗೆ ಯಾವುದೇ ಅಡಮಾನವಿಲ್ಲದೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು ಹಾಗೂ ಇದಕ್ಕೆ 50%ನಷ್ಟು ಸರ್ಕಾರ ಸಬ್ಸಿಡಿ ನೀಡುತ್ತದೆ.

ಉದ್ಯೋಗಿನಿ ಯೋಜನೆಯ ಪ್ರಯೋಜನ! (Benefits )

ಮಹಿಳೆಯರು ಸ್ವಂತ ಉದ್ಯಮ ಮಾಡುವುದರ ಮೂಲಕ ಕೈತುಂಬಾ ಹಣ ಸಂಪಾದನೆ ಮಾಡಬೇಕು ಎನ್ನುವ ಉದ್ದೇಶದಿಂದ ಉದ್ಯೋಗಿನಿ ಯೊಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಕರ್ನಾಟಕ ರಾಜ್ಯದಲ್ಲಿಯೂ ಕೂಡ ಸಾಕಷ್ಟು ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಂಡು ಸ್ವಂತ ಉದ್ಯಮ ಆಂರಭಿಸಿದ್ದಾರೆ.

ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಮಹಿಳೆ ಸ್ವಂತ ಉದ್ಯಮ ಮಾಡುವುದಿದ್ದರೆ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. 3 ಲಕ್ಷ ರೂಪಾಯಿಗಳವರೆಗೆ ಅಡಮಾನ ರಹಿತ ಸಾಲ ನೀಡಲಾಗುವುದು ಹಾಗೂ ಇದಕ್ಕೆ 50% ಸಬ್ಸಿಡಿ ಇರುವುದರಿಂದ ಮಹಿಳೆಯರು 3 ಲಕ್ಷ ಸಾಲಕ್ಕೆ ಕೇವಲ 1,50,000 ರೂ ಗಳನ್ನು ಮಾತ್ರ ಪಾವತಿ ಮಾಡಿದರೆ ಸಾಕು.

ಇದನ್ನು ಓದಿ : ಈ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಜಮಾ ನಿಮಗೆ ಬಂದಿದೆಯಾ ಒಮ್ಮೆ ಸ್ಟೇಟಸ್ ಚೆಕ್ ಮಾಡಿ

ಉದ್ಯೋಗಿನಿ ಸಾಲ ಪಡೆಯಲು ಬೇಕಾಗಿರುವ ಅರ್ಹತೆಗಳು (Eligibility)

  1. ವಾರ್ಷಿಕ ಆದಾಯ 1.5 ಲಕ್ಷ /ಅದಕ್ಕಿಂತ ಕಡಿಮೆ ಇರಬೇಕು ಎಂದು ತಿಳಿಸಲಾಗಿದೆ.
  2. ಒಂಟಿ ಮಹಿಳೆಯಾಗಿದ್ದರೆ /ಅಂಗವಿಕಲ ಮಹಿಳೆ ಆಗಿದ್ದರೆ ಅಂಥವರಿಗೆ ಆದಾಯದ ಮಿತಿ ಇಲ್ಲ.
  3. ಉದ್ಯೋಗಿನಿ ಸಾಲ ಪಡೆಯಲು 18 ರಿಂದ 55 ವಯಸ್ಸಿನವರಾಗಿರಬೇಕು.
  4. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗದ ಮಹಿಳೆಯರಿಗೆ ಮೊದಲ ಆದ್ಯತೆ.

ಈಗಾಗಲೇ ಸ್ವಂತ ಉದ್ಯಮ ಮಾಡುತ್ತಿರುವ ಮಹಿಳೆಯರು ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸಾಲ ಪಡೆದುಕೊಳ್ಳಬಹುದು ಅಥವಾ ಹೊಸದಾಗಿ ವ್ಯಾಪಾರ ಮಾಡುವವರು ಸಾಲ ಪಡೆದುಕೊಳ್ಳಬಹುದು.

ಆದರೆ ಈಗಾಗಲೇ ಸರ್ಕಾರದಿಂದ ಯಾವುದೇ ಯೋಜನೆಯ ಅಡಿಯಲ್ಲಿ ಸಾಲ ಪಡೆದು ಅದನ್ನು ಹಿಂತಿರುಗಿಸದೆ ಇದ್ದರೆ ಅಂತಹ ಮಹಿಳೆಯರಿಗೆ ಸಾಲ ದೊರೆಯುವುದಿಲ್ಲ.

ಅರ್ಜಿ ಸಲ್ಲಿಸಲು ಈ ದಾಖಲೆಗಳು ಸಾಕು (Documents )

  • ರೇಷನ್ ಕಾರ್ಡ್
  • ಪಾನ್ ಕಾರ್ಡ್
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್ ಸೈಜ್ ಫೋಟೋ
  • ಬ್ಯಾಂಕ್ ಖಾತೆಯ ವಿವರ
  • ಉದ್ಯೋಗದ ಬಗ್ಗೆ ಮಾಹಿತಿ
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಸ್ವಯಂ ಘೋಷಣಾ ಪ್ರಮಾಣ ಪತ್ರ
  • ಈ ಎಲ್ಲಾ ದಾಖಲೆಗಳು 2024ನೇ ವರ್ಷಕ್ಕೆ ಅನ್ವಯವಾಗುವಂತೆ ಇರಬೇಕು.

ಅರ್ಜಿ ಎಲ್ಲಿ ಸಲ್ಲಿಸಬೇಕು? (Where to apply) ಹತ್ತಿರದ ಜಿಲ್ಲಾ /ತಾಲೂಕು ಮಹಿಳಾ ಅಭಿವೃದ್ದಿ ಇಲಾಖೆಗೆ ಹೋಗಿ ಅರ್ಜಿ ಸಲ್ಲಿಸಬಹುವುದು ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಅಲ್ಲಿಯೂ ಕೂಡ ಅರ್ಜಿ ಸಲ್ಲಿಸಬಹುವುದು ಸರ್ಕಾರದ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಸಿಬ್ಬಂದಿಗಳನ್ನು ಭೇಟಿ ಮಾಡಿ ಮಾಹಿತಿಯನ್ನು ಪಡೆಯಬಹುದು.

ಇತರೆ ವಿಷಯಗಳು :

ಯೋಜನೆ ಹೆಸರು ಏನು ..?

ಉದ್ಯೋಗಿನಿ ಯೋಜನೆ.

ಯೋಜನೆ ಲಾಭ ಯಾರಿಗೆ ಸಿಗುತ್ತೆ ..?

ಮಹಿಳೆಯರಿಗೆ ಸಿಗುತ್ತೆ.

Leave a Reply

Your email address will not be published. Required fields are marked *