ರೇಷನ್ ಕಾರ್ಡ್ ನಂಬರ್ ಹಾಕಿ ಗೃಹಲಕ್ಷ್ಮಿ ಹಣ ಚೆಕ್ ಮಾಡಿ : 8ನೇ ಕಂತಿನ ಹಣ !

put-the-ration-card-number-and-do-gruhalkshmi-money-check

ನಮಸ್ಕಾರ ಸ್ನೇಹಿತರೆ ನಿಮಗೆಷ್ಟು ಹಣ ಜಮಾ ಆಗಿದೆ ಎಂಬುದನ್ನು ರೇಷನ್ ಕಾರ್ಡ್ ನಂಬರ್ ಹಾಕುವುದರ ಮೂಲಕ ಫಲಾನುಭವಿಗಳು ಮೊಬೈಲ್ ನಲ್ಲಿಯೇ ಚೆಕ್ ಮಾಡಬಹುದಾಗಿದೆ. ರೇಷನ್ ಕಾರ್ಡ್ ನಂಬರ್ ಮೂಲಕ ಹಣ ಚೆಕ್ ಮಾಡಲು ಯಾರು ಸಹಾಯ ಅಗತ್ಯವಿಲ್ಲ ನಿಮ್ಮ ಬಳಿ ಇರುವಂತಹ ಮೊಬೈಲ್ನಲ್ಲಿಯೇ ಸುಲಭವಾಗಿ ಚೆಕ್ ಮಾಡಬಹುದು.

put-the-ration-card-number-and-do-gruhalkshmi-money-check
put-the-ration-card-number-and-do-gruhalkshmi-money-check

ಅದೇ ರೀತಿ ಹೇಗೆ ಮೊಬೈಲ್ ನಲ್ಲಿ ರೇಷನ್ ಕಾರ್ಡ್ ನಂಬರ್ ಹಾಕುವುದರ ಮೂಲಕ ಹಣ ಜಮಾ ಆಗಿರುವುದರ ಬಗ್ಗೆ ತಿಳಿಯಬೇಕು ಎಂಬುದರ ಮಾಹಿತಿಯನ್ನು ಸಂಪೂರ್ಣವಾಗಿ ಇವತ್ತಿನ ಲೇಖನದಲ್ಲಿ ತಿಳಿಯಬಹುದು.

ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಹೇಗೆ ಮಾಡುವ ವಿಧಾನ :

ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯೇ ಇಲ್ಲವೇ ಹಾಗೂ ಯಾವ ತಿಂಗಳಲ್ಲಿ ಹಣ ಅಪ್ರವಾಗಿದೆ ಹಾಗೂ ಎಷ್ಟು ಕಂತುಗಳು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈಗ ಮೊಬೈಲ್ ನಲ್ಲಿ ಚೆಕ್ ಮಾಡಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಈಗಾಗಲೇ ನೊಂದಣಿ ಮಾಡಿಸಿಕೊಂಡ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮೂರು ಕಂತುಗಳ ಹಣ ಜಮಾ ಆಗಿದ್ದು ಇದೀಗ ಇದೆ ತಿಂಗಳು 4ನೇ ಕಂತಿನ ಹಣವು ಕೂಡ ಜಮಾ ಆಗುವ ಸಾಧ್ಯತೆ ಇದೆ ಹಾಗಾಗಿ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಹೇಗಿದೆ ಎಂಬುದನ್ನು ಒಂದು ಬಾರಿ ಚೆಕ್ ಮಾಡಬೇಕು. ಕೇವಲ ರೇಷನ್ ಕಾರ್ಡ್ ನಂಬರ್ ಹಾಕುವುದರ ಮೂಲಕ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ಸುಲಭವಾಗಿ ಮಾಡಬಹುದು.

ಇದನ್ನು ಓದಿ : ಚಿನ್ನದ ಬೆಲೆ ಏರಿಕೆ : ಇಂದಿನ ದರ ನೋಡಿ ಫುಲ್ ಶಾಕ್ ..!

ರೇಷನ್ ಕಾರ್ಡ್ ನಂಬರ್ ಮೂಲಕ ಚೆಕ್ ಮಾಡುವ ವಿಧಾನ :

ತಮಗೆ ಹಣ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿಸಿದ ಫಲಾನುಭವಿಗಳು ಚೆಕ್ ಮಾಡಬೇಕಾದರೆ ಮಾಹಿತಿ ಕಣಜ ವೆಬ್ಸೈಟ್ಗೆ ನೀಡಬೇಕು.

  1. https://mahitikanaja.karnataka.gov.in/Gruhalakshmi/GuhalakshmiStatus?ServiceId=5630&Type=SP&DepartmentId=3136
  2. ಈ ವೆಬ್ಸೈಟ್ಗೆ ಭೇಟಿ ಮಾಡಿದ ನಂತರ ಅದರಲ್ಲಿ ನಿಮಗೆ ಡೀಟೇಲ್ಸ್ ಆಫ್ ಗೃಹಲಕ್ಷ್ಮಿ ಸ್ಟೇಟಸ್ ಕೆಳಗೆ ನೀವು ನಿಮ್ಮ ರೇಷನ್ ಕಾರ್ಡ್ ಅನ್ನು ನಮೂದಿಸಬೇಕಾಗುತ್ತದೆ.
  3. ಅದಾದ ನಂತರ ಸಬ್ಮಿಟ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು
  4. ಅದಾದ ನಂತರ ನೀವು ಯಾವ ದಿನಾಂಕದಂದು ಅರ್ಜಿ ಸಲ್ಲಿಸಿದ್ದೀರಿ ನಿಮ್ಮ ಅರ್ಜಿ ಸ್ವೀಕೃತವಾಗಿದೆಯೇ ಇಲ್ಲವೇ ಹಾಗೂ ಸ್ವೀಕೃತವಾಗಿದ್ದರೆ ಯಾವ ದಿನಾಂಕದಂದು ನಿಮ್ಮ ಅರ್ಜಿ ಸ್ವೀಕೃತವಾಗಿದೆ ಎಂಬುದರ ಮಾಹಿತಿಯನ್ನು ತಿಳಿಯಬಹುದು.
  5. ಅದಾದ ನಂತರ ನೀವು ಡೀಟೇಲ್ಸ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮಗೆ ಎಷ್ಟು ಕಂತುಗಳಲ್ಲಿ ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ ಹಾಗೂ ಯಾವ ಯಾವ ತಿಂಗಳಲ್ಲಿ ಯಾವ ಯಾವ ದಿನಾಂಕದಂದು ಹಣ ಜಮಾ ಆಗಿದೆ ಎಷ್ಟು ಹಣ ಜಮಾ ಆಗಿದೆ ಎಂಬುದರ ಮಾಹಿತಿಯನ್ನು ಕೆಲವೇ ನಿಮಿಷಗಳಲ್ಲಿ ಮೊಬೈಲ್ ನಲ್ಲಿ ಚೆಕ್ ಮಾಡಬಹುದಾಗಿದೆ. ಕೇವಲ ನಿಮ್ಮ ಮೊಬೈಲ್ ಅಲ್ಲದೆ ಬೇರೆಯವರ ಮೊಬೈಲ್ ಕೂಡ ಬಳಸಿ ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಬಹುದು.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು :

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು ಕೇವಲ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಿದರೆ ಸಾಲದು. ಆ ಯೋಜನೆಯ ಸೌಲಭ್ಯವನ್ನು ಪಡೆಯಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು.

  1. ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿಸಿಕೊಳ್ಳಲು ಅಭ್ಯರ್ಥಿಗಳು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿತರಿಸುವಂತಹ ಅಂತ್ಯೋದಯ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನೀಯ ಹೆಸರು ಮಹಿಳೆಯರದ್ದಾಗಿರಬೇಕು. ಆಗ ಮಾತ್ರ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
  2. ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚಿನ ಮಹಿಳೆಯರು ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ ಕೇವಲ ಒಂದು ಮಹಿಳೆ ಮಾತ್ರ ಈ ಯೋಜನೆಯ ಲಾಭ ಲಭಿಸುತ್ತದೆ.

ಯೋಜನೆಗೆ ಇರುವ ಅನರ್ಹತೆಗಳು :

ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಅನರ್ಹತೆಗಳನ್ನು ಕೂಡ ನೋಡಬಹುದಾಗಿದೆ.

  1. ಗೃಹಲಕ್ಷ್ಮಿ ಯೋಜನೆಗೆ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ ಗ್ರುಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಒಂದು ವೇಳೆ ಅರ್ಜಿಯನ್ನು ಸಲ್ಲಿಸಿದ್ದಾರೆ ಅವರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುವುದಿಲ್ಲ.
  2. ಜಿಎಸ್ಟಿ ರಿಟರ್ನ್ ಪಾವತಿ ದಾರರು ಕುಟುಂಬದ ಯಜಮಾನಿ ಅಥವಾ ಪತಿಯಾಗಿದ್ದರೆ ಅವರಿಗೆ ಹಣ ಜಮಾ ಆಗುವುದಿಲ್ಲ.

ಹೀಗೆ ಕೆಲವೊಂದು ಅನರ್ಹತೆಗಳನ್ನು ಹೊಂದುವುದರ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವರು ಅರ್ಹರಾಗಿರುವುದಿಲ್ಲ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಗೃಹಲಕ್ಷ್ಮಿ ಯೋಜನೆ ಯ ಹಣವನ್ನು ಕೇವಲ ರೇಷನ್ ಕಾರ್ಡ್ ನಂಬರ್ ಹಾಕುವುದರ ಮೂಲಕವೂ ಕೂಡ ಚೆಕ್ ಮಾಡಬಹುದಾಗಿದೆ ಎಂದು ತಿಳಿಸಿ.

ಇದರಿಂದ ಪ್ರತಿಯೊಬ್ಬರೂ ಕೂಡ ಸುಲಭವಾಗಿ ಮೊಬೈಲ್ ನಲ್ಲಿಯೇ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ಚೆಕ್ ಮಾಡಬಹುದು.

ಇತರೆ ವಿಷಯಗಳು :

ಎಷ್ಟನೇ ಕಂತಿನ ಹಣ ಜಮಾ ಆಗಬೇಕು ..?

ಏಳು ಕಂತಿನ ಹಣ ಜಮಾ ಆಗ್ಬೇಕು .

ಹಣ ಪರಿಶೀಲನೆ ಮಾಡುವ ಲಿಂಕ್ ಯಾವುದು ..?

ಮಾಹಿತಿ ಕಣಜ .

Leave a Reply

Your email address will not be published. Required fields are marked *