ಹಲೋ ಸ್ನೇಹಿತರೆ, ಬ್ಯಾಂಕುಗಳಿಂದ ಲೋನ್ ಪಡೆಯುವುದರ ಮೂಲಕ ರೈತರು ಕೃಷಿಗೆಂದು ತೆಗೆದುಕೊಂಡಂತಹ ಸಾಲದ ಮೇಲಿನ ಬಡ್ಡಿಯನ್ನು ಸರ್ಕಾರವು ಮನ್ನಿಸುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಲೇಖನವನ್ನು ಕೊನೆವರೆಗೂ ಓದಿ.
ರಾಜ್ಯದಲ್ಲಿ ಸರಿಯಾದ ಸಮಯಕ್ಕೆ ಹಿಂಗಾರು ಮುಂಗಾರು ಮಳೆ ಬರದೆ ಅಕಾಲಿಕ ಸಮಯದಲ್ಲಿ ಮಳೆ ಬಂದ ಕಾರಣ ರೈತರು ಬೆಳೆದ ಎಲ್ಲಾ ಬೆಳೆಗಳು ನಾಶ ಆಗಿದ್ದು ರೈತರು ಕಂಗಾಲಾಗಿದ್ದಾರೆ. ಮತ್ತು ಪ್ರಸ್ತುತ ಬರಗಾಲ ಎದುರಾಗಿರುವ ಕಾರಣ ರಾಜ್ಯದಲ್ಲಿ ಬರದ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಸಂಕಷ್ಟದ ಪರಿಸ್ಥಿತಿ ಎದುರಾಗಿದ್ದು ಅವರಿಗೆ ನೆರವನ್ನು ನೀಡುವ ಸಲುವಾಗಿ ಸರ್ಕಾರವು ರೈತ ಸಾಲದ ಮೇಲೆ ಇರುವಂತಹ ಬಡ್ಡಿಯನ್ನು ತೆರವುಗೊಳಿಸಲು ಮುಂದಾಗಿದೆ.
ಸಾಲ ತೆಗೆದುಕೊಂಡ ರೈತರಿಗೆ ಖುಷಿ ವಿಚಾರ:
ಸರ್ಕಾರ ಹೊರಡಿಸಿರುವ ಆದೇಶದಂತೆ ಡಿಸೆಂಬರ್ 12 2023ರ ಅವಧಿಗೆ ತಕ್ಕಂತೆ ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಕೃಷಿ ಸಹಕಾರ ಸಂಘ ಸಂಸ್ಥೆಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಪ್ರಾಥಮಿಕ ಸಹಕಾರಿ ಕೃಷಿ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು ಇವುಗಳಿಂದ ರೈತರು ಕೃಷಿ ಚಟುವಟಿಕೆಗೆ ಎಂದು ಸಾಲವನ್ನು ತೆಗೆದುಕೊಂಡಿದ್ದಾರೆ. ಇನ್ನು ಈ ರೀತಿಯಾಗಿ ರೈತರು ಪಡೆದಿರುವಂತಹ ಮಾಧ್ಯಮಾವಧಿ ದೀರ್ಘಾವಧಿ ಮತ್ತು ಮಧ್ಯಂತರ ಸಾಲಗಳ ಮೇಲೆ ಇರುವಂತಹ ಬಡ್ಡಿಯನ್ನು ಮನ್ನಾ ಮಾಡುವಂತೆ ಸರ್ಕಾರವು ಆದೇಶವನ್ನು ನೀಡಿದೆ.
ಆಯುಷ್ಮಾನ್ ಕಾರ್ಡ್ ಹೊಸ ಫೀಚರ್ ಲಾಂಚ್!!
ರೈತರ ಸಾಲದ ಮೇಲಿನ ಬಡ್ಡಿ ಮನ್ನಾ?
ಸರ್ಕಾರದ ಆದೇಶ ಕ್ರಮಸಂಖ್ಯೆ (1) ರಂತೆ ರೈತರು ಬ್ಯಾಂಕ್ ಮತ್ತು ಇತರ ಸಂಘ ಸಂಸ್ಥೆಗಳಿಂದ ತೆಗೆದುಕೊಂಡಿರುವಂತಹ ಸಾಲದ ಅಸಲನ್ನು ಪಾವತಿ ಮಾಡಿದರೆ ಅಂಥವರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವಂತೆ ಸೂಚನೆ ನೀಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತಹ ಷರತ್ತಿನ ಮಂಜೂರಾತಿಯೊಂದಿಗೆ ಮೊತ್ತವನ್ನು ನೀಡುವಂತೆ ಸಹಕಾರಿ ಸಂಘಗಳಿಗೆ ಸರ್ಕಾರವು ಪತ್ರವನ್ನು ರವಾನಿಸಿದೆ.
ಇನ್ನು ಸರ್ಕಾರದ ಆದೇಶ ಕ್ರಮಸಂಖ್ಯೆ (2) ಬಗ್ಗೆ ತಿಳಿಯುವುದಾದರೆ ಸರ್ಕಾರವು ಸುಸ್ತಿಯಾಗಿರುವ ಸಾಲದ ಮೇಲೆ ಸಹಕಾರಿ ಸಂಘ ನಿಬಂಧಕರ ಪ್ರಸ್ತಾವನೆಯ ಸದರಿ ಯೋಜನೆಯಲ್ಲಿ 29-02-2024ರ ಸಹಕಾರ ಸಂಘಗಳು ನೀಡಿರುವಂತಹ ಮಾಹಿತಿಯ ಅನ್ವಯ 29,450 ರಷ್ಟು ರೈತರು ತಮ್ಮ ಸಾಲವನ್ನು ಮರುಪಾವತಿ ಮಾಡಿದ್ದು, ಅವರು ಪಡೆದಿರುವಂತಹ ಸಾಲದ ಮೇಲಿನ ಬಡ್ಡಿಯನ್ನು ತೆರೆವುಗೊಳಿಸಲಾಗಿದೆ. ಅಂದರೆ ಸುಮಾರು 214.50 ಕೋಟಿ ಗಳಷ್ಟು ಬಡ್ಡಿಯನ್ನು ಸರ್ಕಾರವು ತೆರೆವುಗಳಿಸಿದ್ದು ರೈತರು ಪಾವತಿ ಮಾಡಿರುವಂತಹ ಹಣದ ಮೊತ್ತ 281.88 ಕೋಟಿಯಷ್ಟಿದೆ.
ಇನ್ನು ರಾಜ್ಯದಲ್ಲಿ ಸದ್ಯಕ್ಕೆ ಇರುವಂತಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರು. ಇನ್ನು ಸರ್ಕಾರವು ಈ ಮನವಿಯನ್ನು ಪರಿಶೀಲಿಸಿ ನೀಡಿರುವ ಪ್ರಸ್ತಾವನೆಯಲ್ಲಿ ನೀಡಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ: ಸಿಒ 291 ಸಿಎಲ್‌ಎಸ್ 2023, ದಿನಾಂಕ:20-01-2024 ರ ಆದೇಶದಲ್ಲಿ ತಿಳಿಸಲಾಗಿರುವ ಮಾಹಿತಿಯಂತೆ, ಅಸಲನ್ನು ಪಾವತಿ ಮಾಡಿದರೆ ಬಡ್ಡಿಮನ್ನಾ ಎಂಬ ಯೋಜನೆಗೆ ನೀಡಿರುವ ಸಮಯದ ಗಡುವನ್ನು 29-02-2024 ರಿಂದ 31-03-2024 ವರೆಗೆ ವಿಸ್ತರಣೆ ಮಾಡುವಂತೆ ಆದೇಶ ನೀಡಲಾಗಿದೆ.
ಇತರೆ ವಿಷಯಗಳು:
ಕೇಂದ್ರದಿಂದ ಏಪ್ರಿಲ್ 29ರ ರಂದು ಬರ ಪರಿಹಾರ ಬಿಡುಗಡೆ : ಎಷ್ಟು ಪರಿಹಾರ ರೈತರಿಗೆ ಸಿಗಲಿದೆ ?