ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಒಂದು ಹೊಸ ವಿಚಾರವನ್ನು ತಿಳಿಸಲಾಗುತ್ತಿದೆ. ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ನೋಂದಣಿ ಸಂದರ್ಭದಲ್ಲಿ ಸಾಕಷ್ಟು ಜನರು ತಪ್ಪು ಜನಸಂಖ್ಯಾ ಅಥವಾ ಬಯೋಮೆಟ್ರಿಕ್ ಮಾಹಿತಿಯನ್ನು ಒದಗಿಸುವ ಮೂಲಕ ತಪ್ಪುಗಳು ಇದರಿಂದ ತೊಂದರೆಗೆ ಕಾರಣವಾಗಬಹುದು.
ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ವಿಶೇಷವಾಗಿ ಹೇಳುವಾಗ ಅಗತ್ಯವಿಲ್ಲ ಆಧಾರ್ ಕಾರ್ಡ್ ದೇಶದ ಪ್ರಮುಖ ದಾಖಲೆಯಾಗಿದೆ ಅಲ್ಲದೆ ವ್ಯಾಪಕವಾಗಿ ಅಂಗವಿಕರಿಸಲ್ಪಟ್ಟ ಧನ್ಯವಾದ ಐಡಿ ಮತ್ತು ವಿಳಾಸ ಪರಿಶೀಲನೆ ಡಾಕ್ಯುಮೆಂಟ್ ಎಂದು ಹೇಳಿದರೆ ತಪ್ಪಾಗಲಾರದು. ಆಧಾರ್ ಕಾರ್ಡನ್ನು ವಿವಿಧ ಸೇವೆಗಳಿಗೆ ಬಳಕೆ ಮಾಡಲು ಅನುಮತಿಸಲಾಗುತ್ತದೆ ಗುರುತಿನ ಚೀಟಿಯಾಗಿ ಆಧಾರ್ ಕಾರ್ಡ್ ಅನ್ನು ಬಳಸುವುದರಿಂದ ತಮ್ಮ ಹಕ್ಕುಗಳನ್ನು ತರಿತವಾಗಿ ಪಡೆಯಲು ಜನರಿಗೆ ಇದು ಅನುಮತಿಸುತ್ತದೆ.
ಆದರೆ ಇದೀಗ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಸಾಕಷ್ಟು ಅಪರಾಧಗಳು ನಡೆಯುತ್ತಿದ್ದು ಈ ರೀತಿ ತಪ್ಪು ಮಾಡುವುದರ ಮೂಲಕ ಆಧಾರ್ ಕಾರ್ಡ್ ವಿಚಾರದಲ್ಲಿ ದಂಡ ಮತ್ತು ಜೈಲಿಗೆ ಸೇರುವುದು ಗ್ಯಾರಂಟಿಯಾಗಿದೆ.
ಪ್ರಮುಖ ದಾಖಲೆಯಾಗಿ ಆಧಾರ್ ಕಾರ್ಡ್ :
ಆಧಾರ್ ಕಾರ್ಡ್ ಇತ್ತೀಚಿನ ದಿನಗಳಲ್ಲಿ ಪ್ರಮುಖ ದಾಖಲೆಯಾಗಿದೆ ಎಂದು ಹೇಳಬಹುದು. ಗುರುತಿನ ಚೀಟಿಯಾಗಿ ಆಧಾರ್ ಕಾರ್ಡ್ ಅನ್ನು ಬಳಸುವುದರಿಂದ ತಮ್ಮ ಹಕ್ಕುಗಳನ್ನು ಜನರು ತೋರಿದವಾಗಿ ಪಡೆಯಬಹುದಾಗಿದೆ ಆದರೆ ಕೆಲವೊಂದು ವಿಷಯಗಳನ್ನು ಆಧಾರ್ ಕಾರ್ಡ್ ಹೊಂದಿರುವವರು ನೆನಪಿನಲ್ಲಿಟ್ಟುಕೊಳ್ಳಬೇಕು.
ಕ್ರಿಮಿನಲ್ ಅಪರಾಧಗಳು ಮತ್ತು ದಂಡಗಳನ್ನು ಆಧಾರ್ ಕಾರ್ಡ್ ಕಾಯ್ದೆ 2016ರ ಅಡಿಯಲ್ಲಿ ನೋಡಬಹುದಾಗಿದೆ. ಅದರಂತೆ ಇವತ್ತಿನ ಲೇಖನದಲ್ಲಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಕೆಲವೊಂದು ವಿಷಯಗಳ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ಇದನ್ನು ಓದಿ : ಪೋಸ್ಟ್ ಆಫೀಸ್ ನಿಂದ ಸಿಗಲಿದೆ 17 ಲಕ್ಷ ರೂಪಾಯಿ : ಪೋಸ್ಟ್ ಆಫೀಸ್ನ ಹೊಸ ಸ್ಕೀಮ್
ಆಧಾರ್ ಕಾಯ್ದೆ 2016ರ ಅಡಿಯಲ್ಲಿ :
ಆಧಾರ್ ಕಾರ್ಡ್ ಹೊಂದಿರುವವರು ಕೆಲವೊಂದು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುತ್ತದೆ ಅದಕ್ಕೆ ಸಂಬಂಧಿಸಿದಂತೆ ಆಧಾರ್ ಕಾಯ್ದೆ 2016ರ ಅಡಿಯಲ್ಲಿ ಕ್ರಿಮಿನಲ್ ಅಪರಾಧಗಳು ಮತ್ತು ದಂಡಗಳ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದ್ದು ಆ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳಬಹುದು.
2016ರ ಆಧಾರ್ ಕಾಯ್ದೆಯ ಅಡಿಯಲ್ಲಿ ಎಂಟು ಆಧಾರ್ ಸಂಬಂಧಿತ ಅಪರಾಧಗಳು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಪ್ರಕಾರ ಈ ಕೆಳಗಿನಂತೆ ನೋಡಬಹುದು,
- ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ನೋಂದಣಿಯ ಸಂದರ್ಭದಲ್ಲಿ ತಪ್ಪು ಬಯೋಮೆಟ್ರಿಕ್ ಅಥವಾ ಜನಸಂಖ್ಯೆ ಮಾಹಿತಿಯನ್ನು ಒದಗಿಸುವ ಮೂಲಕ ಇಂತಹ ತಪ್ಪುಗಳು ತೊಂದರೆಗೆ ಕಾರಣವಾಗಬಹುದೆಂದು ಹೇಳಬಹುದು ಹಾಗೆ ಮಾಡುವುದು ಅಪರಾಧವಾಗಿದ್ದು ಈ ಅಪರಾಧಕ್ಕೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಹತ್ತು ಸಾವಿರ ರೂಪಾಯಿಗಳ ತಂಡವನ್ನು ತೆಗೆದುಕೊಳ್ಳಲಾಗುತ್ತದೆ ಅಥವಾ ಎರಡು ಆಗಬಹುದು.
- ಜನಸಂಖ್ಯಾ ಬಯೋಮೆಟ್ರಿಕ್ ಮಾಹಿತಿಯನ್ನು ಆದರ್ ಸಂಖ್ಯೆ ಹೊಂದಿರುವವರು ಬದಲಾಯಿಸುವ ಮೂಲಕ ಅಥವಾ ಬದಲಾಯಿಸಲು ಪ್ರಯತ್ನಿಸುವ ಮೂಲಕ ಆಧಾರ ಸಂಖ್ಯೆ ಹೊಂದಿರುವವರ ಗುರುತನ್ನು ಒಂದು ವೇಳೆ ದುರ್ಬಳಕೆ ಮಾಡಿಕೊಂಡರೆ ಅದು ಅಪರಾಧವಾಗುತ್ತದೆ ಆ ತಪ್ಪಿಗೆ ಶಿಕ್ಷೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 10,000 ದಂಡವನ್ನು ವಿಧಿಸಬಹುದು.
- ಅಧಿಕೃತ ಏಜೆನ್ಸಿಯ ಸೋಗು ಹಾಕುವುದು ನಿವಾಸಿಯ ಗುರುತಿನ ಮಾಹಿತಿಯನ್ನು ಸಂಗ್ರಹಿಸಲು ಅಪರಾಧವಾಗಿದೆ ಇದಕ್ಕೆ ಸಂಬಂಧಿಸಿದಂತೆ 10000 ಗಂಡ ಅಥವಾ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
- ಅನಧಿಕೃತ ವ್ಯಕ್ತಿಗೆ ನೊಂದಣಿ ಅಥವಾ ದೃಢೀಕರಣದ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಸಂಗ್ರಹಿಸಿದ ಮಾಹಿತಿಯನ್ನು ರವಾನಿಸುವುದು ಅಥವಾ ಬಹಿರಂಗಪಡಿಸುವುದು ಅಥವಾ ಯಾವುದೇ ಒಪ್ಪಂದ ಅಥವಾ ಒಪ್ಪಂದವನ್ನು ಈ ಕಾಯ್ದೆಯ ಅಡಿಯಲ್ಲಿ ಉಲಂಘಿಸುವುದು ಅಪರಾಧವಾಗಿದೆ. ಈ ಅಪರಾಧಕ್ಕೆ 10000 ದಂಡ ಪ್ರತಿ ವ್ಯಕ್ತಿಗೆ ಹಾಗೂ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಎರಡು ಶಿಕ್ಷೆಯನ್ನು ನೀಡಬಹುದು.
- ಸೆಂಟ್ರಲ್ ಐಡೆಂಟಿಟಿ ಪ್ರೊಸೆಸಿಟರಿ ಗೆ ಅನಧಿಕೃತ ಪ್ರವೇಶ ಹಾಗೂ ಹ್ಯಾಕಿಂಗ್ ಅಪರಾಧ ಇದಕ್ಕೆ ಸಂಬಂಧಿಸಿದಂತೆ ಕನಿಷ್ಠ 10 ಲಕ್ಷ ದಂಡ ಹಾಗೂ 10 ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
- ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 10,000 ದಂಡವನ್ನು ಸೆಂಟ್ರಲ್ ಐಡೆಂಟಿಟಿಸ್ ಡೇಟಾ ರಿಪೋಸ್ ಸೀಟರಿ ಯಲ್ಲಿನ ದತ್ತಾಂಶವನ್ನು ತಿದ್ದುವುದು ಅಪರಾಧವಾಗಿರುವುದರಿಂದ ಇದಕ್ಕೆ ಈ ಶಿಕ್ಷೆಯನ್ನು ವಿಧಿಸಲಾಗುತ್ತದೆ.
- ಅನಧಿಕೃತವಾಗಿ ಆಫ್ ಲೈನ್ ಪರಿಶೀಲನೆಯನ್ನು ಬಯಸುವ ಸಂಸ್ಥೆಯು ವ್ಯಕ್ತಿಯ ಗುರುತಿನ ಮಾಹಿತಿಯನ್ನು ಬಳಸುವುದು ಸಹ ಅಪರಾಧವಾಗಿದೆ ಈ ಅಪರಾಧಕ್ಕೆ ವ್ಯಕ್ತಿಗೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ಅಥವಾ 10,000 ದಂಡ ಅಥವಾ ಒಂದು ಲಕ್ಷದವರೆಗೆ ಕಂಪನಿಗೆ ದಂಡ ವಿಧಿಸಲಾಗುತ್ತದೆ.
- ನಿರ್ದಿಷ್ಟ ತಂಡದೊಂದಿಗೆ ಅಪರಾಧವು ಶಿಕ್ಷಾ ಅರ್ಹವಾಗಿಲ್ಲದಿದ್ದರೆ ಮೂರು ವರ್ಷಗಳವರೆಗೆ ಅಥವಾ 25,000 ದಂಡದೊಂದಿಗೆ ಅಥವಾ ಒಂದು ಲಕ್ಷ ದಂಡವನ್ನು ಕಂಪನಿಯ ಸಂದರ್ಭದಲ್ಲಿ ಒಬ್ಬ ವ್ಯಕ್ತಿಗೆ ವಿಧಿಸಲಾಗುತ್ತದೆ.
ಹೀಗೆ ಆಧಾರ ಕಾರ್ಡ್ ವಿಚಾರದಲ್ಲಿ ಈ ರೀತಿಯಾದಂತಹ ತಪ್ಪುಗಳನ್ನು ಮಾಡಿದರೆ ದಂಡ ಮತ್ತು ಜೈಲನ್ನು ಸೇರುವುದು ಗ್ಯಾರಂಟಿಯಾಗಿದೆ.
ಒಟ್ಟಾರೆ ಭಾರತ ಸರ್ಕಾರವು ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳನ್ನು ಜಾರಿಗೆ ತಂದಿದ್ದು ಆಧಾರ್ ಕಾರ್ಡ್ ವಿಚಾರದಲ್ಲಿ ಈ ರೀತಿಯಾದಂತಹ ಅಪರಾಧಗಳನ್ನು ಮಾಡಿದರೆ ಅಂತಹ ವ್ಯಕ್ತಿಗಳಿಗೆ ಕಠಿಣವಾದ ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಹೇಳಬಹುದು .
ಹಾಗಾಗಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಈ ಮಾಹಿತಿಗಳನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ 2016ರ ಆಧಾರ್ ಕಾಯ್ದೆಯ ಅಡಿಯಲ್ಲಿ ಯಾವೆಲ್ಲಾ ಅಪರಾಧಗಳನ್ನು ಮಾಡಿದರೆ ಎಂತಹ ಶಿಕ್ಷೆ ವಿಧಿಸಲಾಗುತ್ತದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.