ನಮಸ್ಕಾರ ಸ್ನೇಹಿತರೆ ಮೋದಿ ಸರ್ಕಾರ ದೇಶದಲ್ಲಿ ಇರುವಂತಹ ಬಡ ಜನರಿಗಾಗಿ ಪ್ರಧಾನಮಂತ್ರಿ ಜ್ವರ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಅನ್ನು ನೀಡುತ್ತಿದೆ ದೇಶದ ಕೋಟ್ಯಂತರ ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಈ ಯೋಜನೆಯ ಅಡಿಯಲ್ಲಿ ಪ್ರತಿ ಸಿಲಿಂಡರ್ಗಳ ಮೇಲೆ ಮಹಿಳೆಯರು ಮುನ್ನೂರು ರೂಪಾಯಿಗಳ ಸಬ್ಸಿಡಿಯನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ.
ಇದೀಗ ಈ ಯೋಜನೆಯ ಅಡಿಯಲ್ಲಿ ಇನ್ನೊಂದು ವಿಶೇಷ ಸೌಲಭ್ಯವನ್ನು ಮೋದಿ ಸರ್ಕಾರ ನೀಡಲು ಮುಂದಾಗಿದೆ. ಇನ್ನು ಮುಂದೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು ಹೊಸ ಸೌಲಭ್ಯವನ್ನು ಕೂಡ ಪಡೆದುಕೊಳ್ಳಬಹುದು. ಹಾಗಾದರೆ ಕೇಂದ್ರದಿಂದ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಯಾವ ಹೊಸ ಸೌಲಭ್ಯ ಸಿಗಲಿದೆ ಎಂಬುದರ ಬಗ್ಗೆ ನೋಡುವುದಾದರೆ.
ಉಚಿತ ಗ್ಯಾಸ್ ಸ್ಟವ್ ಮತ್ತು ಗ್ಯಾಸ್ ಸಿಲಿಂಡರ್ :
2016ರಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವಂತಹ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕದ ಜೊತೆಗೆ ಗ್ಯಾಸ್ ಸಿಲಿಂಡರ್ ಗೆ ಸಬ್ಸಿಡಿ ಹಣವನ್ನು ಕೂಡ ನೀಡುತ್ತಿದೆ. ಸದ್ಯ ಇದೀಗ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಮತ್ತು ಗ್ಯಾಸ್ ಸ್ಟವ್ ಅನ್ನು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಗ್ರಾಮೀಣ ಭಾರತದಲ್ಲಿ ಹೆಚ್ಚಾಗಿ ಬಳಸುವ ಶುದ್ಧ ಅಡುಗೆ ಇಂಧನಗಳನ್ನು ಶುದ್ಧ ಮತ್ತು ಹೆಚ್ಚು ಪರಿಣಾಮಕಾರಿಯಾದ ಎಲ್ಪಿಜಿ ಯೊಂದಿಗೆ ಬದಲಾಯಿಸುವ ಗುರಿಯನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆಯು ಹೊಂದಿದೆ. ಈ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ಬಡವರಿಗೆ ಉಚಿತ ರಿಫೀಲ್ ಮತ್ತು ಸ್ಟವ್ ನೊಂದಿಗೆ ಸುಮಾರು 10 ಮಿಲಿಯನ್ ಗ್ಯಾಸ ಸಂಪರ್ಕಗಳನ್ನು ವಿತರಿಸಲು ಮುಂದಾಗಿದೆ.
ಇದನ್ನು ಓದಿ : 1000 ರೂ ನಿಮ್ಮ ಖಾತೆಗೆ ಪ್ರತಿ ತಿಂಗಳು ಬರಬೇಕಾ ? ಹಾಗಾದರೆ ಈ ಯೋಜನೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ
ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಶರತ್ತು ಗಳು :
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತಹ ಸಂದರ್ಭದಲ್ಲಿ ಅರ್ಜಿದಾರರ ಕೆಲವೊಂದು ಶರತ್ತುಗಳನ್ನು ಪಾಲಿಸಬೇಕು ಅವುಗಳೆಂದರೆ,
- ಕನಿಷ್ಠ 18 ವರ್ಷ ವಯಸ್ಸಿನವರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು.
- ಯಾವುದೇ ಓಎಂಸಿಯಿಂದ ಒಂದೇ ಮನೆಯಲ್ಲಿ ಬೇರೆ ಎಲ್ ಪಿ ಜಿ ಸಂಪರ್ಕವನ್ನು ಹೊಂದಿರಬಾರದು.
- ಎಸ್ಸಿ ಎಸ್ಟಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳು ಅಂತ್ಯೋದಯ ಅನ್ನ ಯೋಜನೆಯ ಫಲಾನುಭವಿಗಳು ಅತ್ಯಂತ ಹಿಂದುಳಿದ ವರ್ಗಗಳು ಚಹಾ ಮತ್ತು ಮಾಜಿ ಚಹಾ ತೋಟದ ಬುಡಕಟ್ಟು ಗಳು ದ್ವೀಪಗಳು ಮತ್ತು ನದಿ ದ್ವೀಪಗಳಲ್ಲಿ ವಾಸಿಸುವ ಜನರು ಅರಣ್ಯವಾಸಿಗಳು ಎಸ್ ಇ ಸಿ ಸಿ ಕುಟುಂಬದ ಅಡಿಯಲ್ಲಿ ಪಟ್ಟಿ ಮಾಡಲಾದಂತಹ ಯಾವುದೇ ಬಡ ಕುಟುಂಬಕ್ಕೆ ಸೇರಿದ ವಯಸ್ಕರ ಮಹಿಳೆಯರು ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುತ್ತಾರೆ.
ಹೀಗೆ ಈ ಅರ್ಹತೆಗಳನ್ನು ಹೊಂದುವುದರ ಮೂಲಕ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಿ, ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು.
ಹೀಗೆ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿರುವುದರ ಮೂಲಕ ಈ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣವು ಮಾತ್ರವಲ್ಲದೆ ಇದೀಗ ಉಚಿತವಾಗಿ ಗ್ಯಾಸ ಸಿಲಿಂಡರ್ ಮತ್ತು ಗ್ಯಾಸ್ ಸ್ಟವ್ ನೀಡಲು ಮುಂದಾಗಿದೆ ಹಾಗಾಗಿ ಈ ಯೋಜನೆಯ ಪ್ರಯೋಜನವನ್ನು ಮೇಲೆ ತಿಳಿಸಲಾದ ಅರ್ಹರು ಪಡೆದುಕೊಳ್ಳುವಂತೆ ತಿಳಿಸಿ ಧನ್ಯವಾದಗಳು.