Headlines

ರಾಜ್ಯದಲ್ಲಿ ಈ ದಿನದಿಂದ ಮಾನ್ಸೂನ್ ಆರ್ಭಟ : ಹವಾಮಾನ ಇಲಾಖೆಯಿಂದ ಮುಂಗಾರು ಮಳೆ ಪ್ರಾರಂಭದ ಮುನ್ಸೂಚನೆ

Monsoon rain forecast by Meteorological Department

ನಮಸ್ಕಾರ ಸ್ನೇಹಿತರೆ , ಇವತ್ತಿನ ಲೇಖನದಲ್ಲಿ ಭಾರತೀಯ ಹವಾಮಾನ ಇಲಾಖೆಯೂ ಮುಂಗಾರು ಮಳೆ ಯಾವಾಗ ಪ್ರಾರಂಭವಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿರುವುದರ ಬಗ್ಗೆ ಹೇಳಲಾಗುತ್ತಿದೆ. ಸಾಮಾನ್ಯಕ್ಕಿಂತ ಹೆಚ್ಚು ಮುಂಗಾರು ಮಳೆ, ಈ ಬಾರಿ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮುಂಗಾರು ಮಾರುತಗಳು ಕಳೆದ ವರ್ಷ 2023ರಲ್ಲಿ ಜೂನ್ 8ರಂದು ಕೇರಳ ಪ್ರವೇಶ ಮಾಡಿದ್ದವು ಅಂದರೆ ಸಾಮಾನ್ಯ ಪ್ರವೇಶದ ದಿನಕ್ಕಿಂತ ಏಳು ದಿನಗಳ ವಿಳಂಬವಾಗಿ ಮುಂಗಾರುಮಳೆಯ ಆಗಮನವಾಗಿತ್ತು.

Monsoon rain forecast by Meteorological Department
Monsoon rain forecast by Meteorological Department

ಆ ಸಂದರ್ಭದಲ್ಲಿ ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ಬಿಪ ಜೋರ್ಯ್ ಚಂಡಮಾರುತ ರಾಜ್ಯಕ್ಕೆ ಮುಂಗಾರು ಮಾರುತಗಳು ಒಂದು ವಾರ ತಡವಾಗಿ ಆಗಮಿಸಲು ಕಾರಣವಾಗಿತ್ತು. ಇದರಿಂದಾಗಿ ಮುಂಗಾರು ಮಳೆಯ ಮೇಲೆ ಪರಿಣಾಮ ಬೀರಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡುವಂತಹ ಆಗಿದೆ. ಆದರೆ ಇದೀಗ ಭಾರತೀಯ ಹವಾಮಾನ ಇಲಾಖೆಯು ಮುಂಗಾರು ಮಳೆ ಯಾವಾಗ ಪ್ರಾರಂಭವಾಗಲಿದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿದೆ.

ಹವಾಮಾನ ಇಲಾಖೆಯಿಂದ ಮಾನ್ಸೂನ್ ಮಾರುತದ ವಿವರ :

ನೈರುತ್ಯ ಮಾನ್ಸೂನ್ ಮಾರುತಗಳು ಭಾರತಕ್ಕೆ ಜೀವಾಳ ವಿದ್ದಂತೆ. ದೇಶದಲ್ಲಿ ಈ ಮಾರುತಗಳು ಸುರಿಯಬಹುದಾದ ವಾರ್ಷಿಕ ಮಳೆಯ ಬಹುಪಾಲನ್ನು ಉದಯಿಸುತ್ತವೆ ಎಂದು ಹೇಳಿದರೆ ತಪ್ಪಾಗಲಾರದು ಹಾಗಾಗಿ ಆ ವರ್ಷ ಮಾನ್ಸೂನ್ ಮಾರುತಗಳ ಆಗಮನ ಬೀಳುವ ಮಳೆ ಪ್ರಮಾಣಕ್ಕೆ ದಿಕ್ಸೂಚಿ ಆಗಿರುತ್ತದೆ.

ಮಾನ್ಸೂನ್ ಮಾರುತಗಳ ಪ್ರವೇಶದ ದಿನಾಂಕ ಇತ್ತೀಚಿನ ವರ್ಷಗಳಲ್ಲಿ ಗಮನಿಸುವುದಾದರೂ ಕರ್ನಾಟಕಕ್ಕೆ 2018ರಲ್ಲಿ ಮೇ 29 ಮಾನ್ಸೂನ್ ಮಾರುತಗಳು ಆಗಮ ನೀಡಿತ್ತು ಅದೇ ರೀತಿ ಜೂನ್ ಎಂಟು 2019 ರಂದು ಜೂನ್ 1 2020 ರಂದು ಜೂನ್ 3 2021 ರಂದು ಮೇ 29 2022ರಂದು ಹಾಗೂ ಜೂನ್ ಎಂಟು 2023 ರಂದು ರಾಜ್ಯವನ್ನು ಮುಂಗಾರು ಮಾರುತಗಳು ಪ್ರವೇಶಿಸಿದ್ದವು. ಅದರಂತೆ ಈ ವರ್ಷ ಮುಂಗಾರು ಮಳೆ ಪ್ರವೇಶ ಕರ್ನಾಟಕಕ್ಕೆ ಯಾವಾಗ ಆಗಲಿದೆ ಎಂಬುದರ ಮಾಹಿತಿಯನ್ನು ಹವಾಮಾನ ಇಲಾಖೆಯು ನೀಡಿದೆ.

ಇದನ್ನು ಓದಿ : ಗೃಹಲಕ್ಷ್ಮಿ 10ನೇ ಕoತಿನ ಹಣವನ್ನು ಬಿಡುಗಡೆ ಮಾಡಿದ ರಾಜ್ಯ ಸರ್ಕಾರ : ಫಲಾನುಭವಿಗಳಿಗೆ ಸಿಹಿ ಸುದ್ದಿ

ಮುಂಗಾರು ಮಳೆ ಪ್ರವೇಶ ಈ ವರ್ಷ ಯಾವಾಗ ಪ್ರಾರಂಭವಾಗಲಿದೆ ?

ಮಾನ್ಸೂನ್ ಆರಂಭ ಸಾಮಾನ್ಯವಾಗಿ ಜೂನ್ ನಲ್ಲಿ ಆಗುತ್ತದೆ ಸೆಪ್ಟೆಂಬರ್ ತಿಂಗಳಿನಲ್ಲಿ ಕೊನೆಗೊಳ್ಳುತ್ತದೆ. ಮುಂಗಾರು ಮಾರುತಗಳು ಜೂನ್ 1 ರಂದು ಕೇರಳ ಪ್ರವೇಶಿಸುವ ವಾಡಿಕೆ ಹೊಂದಿದ್ದು, ಕರ್ನಾಟಕ ರಾಜ್ಯಕ್ಕೆ ಒಂದೆರಡು ದಿನಗಳಲ್ಲಿ ಮುಂಗಾರು ಮಾರುತಗಳು ಪ್ರವೇಶವಾಗಲಿವೆ. ಹೆಚ್ಚು ಕಮ್ಮಿ ಅದೇ ಸಮಯವೇ ಈ ವರ್ಷವೂ ಕೂಡ ಪಾಲನೆ ಯಾಗಬಹುದೆಂದು ಭಾರತೀಯ ಹವಾಮಾನ ಇಲಾಖೆಯಿಂದ ಮಾಹಿತಿ ನೀಡಿದೆ.

ಜೂನ್ ಮತ್ತು ಜುಲೈ ತಿಂಗಳ ಅವಧಿಯ ನೈರುತ್ಯ ನಾನ್ ಸುಮ್ ಭಾರತ ಕ್ಯಾತಿ ಮಹತ್ವದ್ದು ಎಂದು ಹೇಳಲಾಗುತ್ತದೆ ಮೇ 31ರ ವೇಳೆಗೆ ಈ ವರ್ಷ ಮುಂಗಾರು ಮಾರುತಗಳು ದೇಶದ ದಕ್ಷಿಣದ ತುತ್ತ ತುದಿ ರಾಜ್ಯವಾದ ಕೇರಳದ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆ ಹೆಚ್ಚಾಗಿದೆ. ನಾಲ್ಕು ದಿನ ಈ ದಿನಾಂಕದಲ್ಲಿ ವ್ಯತ್ಯಾಸವಾಗಬಹುದೆಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ. ಈ ವರ್ಷ ಪ್ರತಿ ವರ್ಷದ ಬಾಡಿಗೆಯಂತೆಯೇ ಮೇ 19ಕ್ಕೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಿಂದ ಮುಂಗಾರು ಮಾರುತಗಳು ಪ್ರಾರಂಭವಾಗಲಿವೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಪ್ರಬಲವಾಗಿ ಮಾರುತಗಳು ಪ್ರಾರಂಭವಾದರೆ ಕೇರಳಕ್ಕೆ ಮೇ ಕೊನೆಗೆ ಪ್ರವೇಶ ಮಾಡಲಿವೆ ಅದಾದ ನಂತರ ಕೇರಳದಲ್ಲಿ ಮಾನ್ಸೂನ್ ಮಾರುತಗಳು ಪ್ರಬಲವಾದರೆ ಅದೇ ದಿನದಂದು ಕರ್ನಾಟಕಕ್ಕೂ ಕೂಡ ಆಗಮಿಸಲಿದೆ ಇಲ್ಲದಿದ್ದರೆ ಒಂದೆರಡು ದಿನಗಳವರೆಗೆ ವಿಳಂಬವಾಗಬಹುದೆಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ತಜ್ಞರು ತಿಳಿಸಿದ್ದಾರೆ.

ಹೀಗೆ ಮಾನ್ಸೂನ್ ಆರ್ಭಟ ರಾಜ್ಯದಲ್ಲಿ ಈ ದಿನದಿಂದ ಪ್ರಾರಂಭವಾಗಲಿದೆ ಎಂಬುದರ ಮಾಹಿತಿಯನ್ನು ಭಾರತೀಯ ಹವಾವಮಾನ ಇಲಾಖೆಯು ರಾಜ್ಯದ ಜನತೆಗೆ ತಿಳಿಸಿದೆ. ಈ ಬಾರಿ ಹೆಚ್ಚು ಮುಂಗಾರು ಮಳೆ ಆಗಲಿದೆ ಎಂಬ ಮಾಹಿತಿಯನ್ನು ಕೂಡ ಹವಾಮಾನ ಇಲಾಖೆ ತಿಳಿಸಿದ್ದು ಈ ಬಗ್ಗೆ ಶೇರ್ ಮಾಡುವ ಮೂಲಕ ಈ ಬಾರಿ ಉತ್ತಮ ಮಳೆ ಆಗಲಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Reply

Your email address will not be published. Required fields are marked *