ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ಮಕ್ಕಳಿಗೆ ಸಿಹಿ ಸುದ್ದಿಯನ್ನು ನೀಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಇದೀಗ ಇಷ್ಟು ದಿನಗಳವರೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಬೇಸಿಗೆ ರಜೆ ಘೋಷಣೆ ಮಾಡಿರುವುದರ ಬಗ್ಗೆ ಮಾಹಿತಿಯನ್ನು ನೋಡಬಹುದು. ಸದ್ದೇಧಿಗ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನೇಕ ನಿಯಮಗಳ ಜೊತೆಗೆ ವಿವಿಧ ಸೌಲಭ್ಯಗಳನ್ನು ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಜಾರಿಗೆ ತಂದಿದ್ದಾರೆ.
ಪ್ರಸ್ತುತ 2023 ಮತ್ತು 24ರ ಶೈಕ್ಷಣಿಕ ಸಾಲಿನ ವಿದ್ಯಾಭ್ಯಾಸದ ಕೊನೆಯ ಹಂತದಲ್ಲಿ ಶಾಲಾ ವಿದ್ಯಾರ್ಥಿಗಳು ಇದ್ದಾರೆ. ಸದ್ಯದೀಗ ಶಾಲಾ ಶಿಕ್ಷಣ ಇಲಾಖೆಯು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಬೇಸಿಗೆ ರಜೆ ಕುರಿತು ಮಹತ್ವದ ಆದೇಶವನ್ನು ಹೊರಡಿಸಿದೆ. ಹಾಗಾದರೆ ರಾಜ್ಯ ಸರ್ಕಾರದಿಂದ ಹೊರಡಿಸಿರುವ ಆದೇಶ ಯಾವುದು ಎಂಬುದರ ಈ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ :
2023 ಮತ್ತು 24ರ ಶೈಕ್ಷಣಿಕ ಸಾಲಿನ ವಿದ್ಯಾಭ್ಯಾಸದ ಕೊನೆಯ ಹಂತದಲ್ಲಿ ಶಾಲಾ ವಿದ್ಯಾರ್ಥಿಗಳು ಇದ್ದಾರೆ ಎಂದು ಹೇಳಬಹುದು ಸದ್ಯ ಇದೀಗ ಶಾಲಾ ಶಿಕ್ಷಣ ಇಲಾಖೆಯ ಮಹತ್ವದ ಆದೇಶವೊಂದನ್ನು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬೇಸಿಗೆ ರಜೆ ಕುರಿತಂತೆ ಹೊರಡಿಸಿದೆ. ಈ ಬಾರಿ ಎಷ್ಟು ದಿನಗಳ ಕಾಲ ಶಾಲಾ ಮಕ್ಕಳಿಗೆ ರಜೆ ಇರಲಿದೆ ಎನ್ನುವುದರ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಮಾಹಿತಿ ನೀಡಿದೆ.
ಇದನ್ನು ಓದಿ : ಮನೆ ಬಾಡಿಗೆ ನೀಡಲು ಕರೆಂಟ್ ಅಗ್ರಿಮೆಂಟ್ ಅಲ್ಲದೆ ಪೊಲೀಸ್ ವೆರಿಫಿಕೇಶನ್ ಬೇಕು !
ಬೇಸಿಗೆ ರಜೆ ದಿನ ಘೋಷಣೆ :
ಕರ್ನಾಟಕ ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ ಶೈಕ್ಷಣಿಕ ಮಾರ್ಗದರ್ಶಿ 2023 ಮತ್ತು 24ರ ಪ್ರಕಾರ ವಾರ್ಷಿಕ ಪರೀಕ್ಷೆ ಶೈಕ್ಷಣಿಕ ವರ್ಷದ ಒಂದನೇ ತರಗತಿಯಿಂದ 9ನೇ ತರಗತಿಯ ವರೆಗಿನ ಮಕ್ಕಳಿಗೆ ಮುಗಿದ ನಂತರ ಏಪ್ರಿಲ್ ಒಂದರಿಂದ ಐದರ ನಡುವೆ ಮೌಲ್ಯಮಾಪನ ಕಾರ್ಯ ನಡೆಯುತ್ತದೆ.
ಪ್ರಾಥಮಿಕ ಶಾಲಾ ತರಗತಿಗಳ ಫಲಿತಾಂಶ ಏಪ್ರಿಲ್ 8ರಂದು ಪ್ರಕಟವಾಗಲಿದೆ. ಏಪ್ರಿಲ್ 10 ರಂದು 8 ಮತ್ತು 9ನೇ ತರಗತಿಯ ಮೌಲ್ಯಮಾಪನ ಕಾರ್ಯ ಮುಗಿದ ನಂತರ ಫಲಿತಾಂಶಗಳು ಪ್ರಕಟವಾಗಲಿದ್ದು ಕರ್ನಾಟಕ ರಾಜ್ಯದ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಏಪ್ರಿಲ್ 11 ರಿಂದ ಮೇ 28 ರವರೆಗೆ ಈ ಬಾರಿ ಬೇಸಿಗೆ ರಜೆಯನ್ನು ಶಾಲಾ ಶಿಕ್ಷಣ ಇಲಾಖೆಯ ಘೋಷಣೆ ಮಾಡಿದೆ.
ಏಪ್ರಿಲ್ ಹನ್ನೊಂದರಿಂದ ಮೇ 28 ರವರೆಗೆ ಶಾಲಾ ಶಿಕ್ಷಣ ಇಲಾಖೆಯ ಆದೇಶದಂತೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದ್ದು ಮೇ 29 ರಿಂದ ಎಲ್ಲಾ ಶಾಲೆಗಳು ಪುನರ್ ಆರಂಭವಾಗಲಿವೆ. ಇದಷ್ಟೇ ಅಲ್ಲದೆ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲಿಯೂ ಕೂಡ ಬಿಸಿ ಊಟ ಇನ್ನು ಮುಂದೆ ನೀಡಲಾಗುತ್ತದೆ.
ಶಾಲಾ ಮಕ್ಕಳಿಗೆ ಬೇಸಿಗೆ ರಜೆಯನ್ನು ಬಿಸಿ ಊಟ :
ಬೇಸಿಗೆ ರಜೆಯಲ್ಲಿಯೂ ಕೂಡ ಇನ್ನು ಮುಂದೆ ಶಾಲಾ ವಿದ್ಯಾರ್ಥಿಗಳಿಗೆ ಬಿಸಿಊಟ ನೀಡಲಾಗುತ್ತದೆ. ಅಂದರೆ ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೇಸಿಗೆ ರಜೆಯಲ್ಲಿಯೂ ಕೂಡ ಮಧ್ಯಾನದ ಬಿಸಿಊಟ ಮುಂದುವರಿಸಲು ಚಿಂತನೆ ನಡೆಸುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪನವರು ತಿಳಿಸಿದ್ದಾರೆ.
ಸದ್ಯ ಇದೀಗ ಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯನ್ನು ಬಿಸಿ ಊಟ ಮುಂದುವರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಜೊತೆ ಚರ್ಚೆ ನಡೆಸಿ ಅನುಮೋದನೆ ಪಡೆದ ನಂತರವೇ ಈ ಆದೇಶ ಹೊರಡಿಸಲಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.
ಒಟ್ಟಾರೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ಏಪ್ರಿಲ್ 11 ರಿಂದ ಮೇ 29 ರವರೆಗೆ ತಮ್ಮ ಬೇಸಿಗೆ ರಜೆಯನ್ನು ಕಳೆಯಬಹುದಾಗಿದೆ ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರು ಮಕ್ಕಳ ಪೋಷಕರಾಗಿದ್ದರೆ ಬೇಸಿಗೆ ರಜೆ ಯಾವ ದಿನಾಂಕದವರೆಗೆ ಇರಲಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಲಿ ಹಾಗೂ ಬೇಸಿಗೆಯ ರಜೆಯಲ್ಲಿಯೂ ಕೂಡ ಇನ್ನು ಮುಂದೆ ಬಿಸಿ ಊಟ ಸಿಗಲಿದೆ ಎಂಬುದರ ಬಗ್ಗೆಯೂ ಕೂಡ ಅವರು ತಿಳಿದುಕೊಳ್ಳಲಿ.
ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಏನೆಲ್ಲ ಸೌಲಭ್ಯಗಳು ದೊರೆಯಲಿವೆ ಎಂಬುದರ ಬಗ್ಗೆ ತಿಳಿದುಕೊಂಡು ಪ್ರತಿಯೊಬ್ಬರೂ ಕೂಡ ಸರ್ಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಪಡೆದುಕೊಳ್ಳುವಂತಾಗಲಿ ಧನ್ಯವಾದಗಳು.