ನಮಸ್ಕಾರ ಸ್ನೇಹಿತರೆ ಕೃಷಿ ಭೂಮಿಯಲ್ಲಿ ನೀರಾವರಿ ಮಾಡಲು ಸರ್ಕಾರ ಸಬ್ಸಿಡಿ ದರದಲ್ಲಿ ಪಂಪ್ಸೆಟ್ ಒದಗಿಸಲು ಯೋಜನೆಯೊಂದನ್ನು ಸರ್ಕಾರ ರೈತರಿಗೆ ಪ್ರಾರಂಭಿಸಿದೆ.
ರಾಜ್ಯ ಸರ್ಕಾರ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದ್ದು ತಮ್ಮ ಕೃಷಿ ಭೂಮಿಯಲ್ಲಿ ಹಗಲು ಸಮಯದಲ್ಲಿ ನೀರಾವರಿ ಮಾಡಲು ಸಬ್ಸಿಡಿ ದರದಲ್ಲಿ ಸೋಲಾರ್ ಪಂಪ್ಸೆಟ್ ಅನ್ನು ಒದಗಿಸಲು ರಾಜ್ಯ ಸರ್ಕಾರ ಯೋಜನೆಯನ್ನು ರೂಪಿಸಿದೆ. ರೈತರು ಸುಲಭವಾಗಿ ಈ ಯೋಜನೆಯ ಅಡಿಯಲ್ಲಿ ಸೋಲಾರ್ ಪಂಪ್ಸೆಟ್ಗಳನ್ನು ಸಬ್ಸಿಡಿ ದರದಲ್ಲಿ ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.
ಕುಸುಮ್ ಬಿ ಯೋಜನೆ :
ಸೋಲಾರ್ ಪಂಪ್ ಸೆಟ್ ಗಳನ್ನೂ ತಮ್ಮ ಜಮೀನಿಗೆ ರೈತರು ಅತಿ ಕಡಿಮೆ ಬೆಲೆಗೆ ಇನ್ನು ಮುಂದೆ ಅಳವಡಿಸಿಕೊಳ್ಳಬಹುದಾಗಿದೆ ಈ ಯೋಧನೆಯಲ್ಲೂ ಸರ್ಕಾರ ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ರೈತರಿಗೆ 40,000 ಸೋಲಾರ್ ಪಂಪ್ಸೆಟ್ ಗಳನ್ನು ಒದಗಿಸುವ ಗುರಿ ಹೊಂದಿದೆ. ಈ ಯೋಜನೆಯಡಿಯಲ್ಲಿ ಸೌರಪಂಸೆ ತಗತಿ ಇರುವವರು ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನು ಓದಿ : ಸ್ವಂತ ಉದ್ಯೋಗಕ್ಕಾಗಿ ಹೊಸ ಐಡಿಯಾ : ಲಕ್ಷಗಟ್ಟಲೆ ಆದಾಯ ಪಡೆಯಿರಿ ಹೆಚ್ಚಿನ ಮಾಹಿತಿ ನೋಡಿ !
ಸಬ್ಸಿಡಿ ಮೊತ್ತ :
ರೈತರಿಗೆ ಕುಸುಮ್ ಬಿ ಯೋಜನೆಯ ಅಡಿಯಲ್ಲಿ ಸೋಲಾರ್ ಪಂಪ್ಸೆಟ್ಗೆ ಸಬ್ಸಿಡಿಯನ್ನು ನೀಡುತ್ತಿದ್ದು ಎಷ್ಟು ಸಬ್ಸಿಡಿ ಸಿಗಲಿದೆ ಎಂಬುದರ ಬಗ್ಗೆ ನೋಡುವುದಾದರೆ,
ಮೂರು ಹೆಚ್ ಪಿ ಪವರ್ ನಿಂದ 10 ಹೆಚ್ ಪಿ ಪವರ್ ಒಳಗಿನ ಸೋಲಾರ್ ಪಂಪ್ಸೆಟ್ಟುಗಳನ್ನು ರೈತರು ಅಳವಡಿಸಿಕೊಳ್ಳಲು ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ
30% ಈ ಹಿಂದೆ ಸಹಾಯಧನವನ್ನು ನೀಡಲಾಗುತ್ತಿತ್ತು ಆದರೆ ಇದೀಗ 50% ಏರಿಕೆ ಮಾಡಲಾಗಿದೆ ಇದರ ಜೊತೆಗೆ 30% ಸಬ್ಸಿಡಿ ಎಂದು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ ಅಂದರೆ ನಿಜವಾಗಿಯೂ ರೈತರು ಸೋಲಾರ್ ಪಂಪ್ಸೆಟ್ ಅನ್ನು ಖರೀದಿ ಮಾಡಲು 20 % ರಷ್ಟು ಪಾವತಿಯನ್ನು ಮಾಡಬೇಕಾಗುತ್ತದೆ.
ಅಂದರೆ ಶೇಕಡ 80 ರಷ್ಟು ಸತ್ಯದಿಯನ್ನು ಸರ್ಕಾರದಿಂದ ಸೋಲಾರ್ ಪಂಪ್ಸೆಟ್ ಅಳವಡಿಸಿಕೊಳ್ಳಲು ರೈತರು ಪಡೆಯಬಹುದು. ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸಬ್ಸಿಡಿ ನೀಡುವುದರಿಂದ ಒಂದು ಲಕ್ಷ ರೂಪಾಯಿಯ ವೆಚ್ಚದಲ್ಲಿ ಅಳವಡಿಸಬಹುದಾದಂತಹ ಪಂಪ್ಸೆಟ್ ಅನ್ನು ಕೇವಲ ರೈತರು 20 ಸಾವಿರ ರೂಪಾಯಿಗಳಷ್ಟು ತಮ್ಮ ಕೈಯಿಂದ ಪಾವತಿ ಮಾಡಿದರೆ ಸಾಕು ಅದನ್ನು ಸರ್ಕಾರವೇ ನೀಡುತ್ತದೆ ಎಂದು ಹೇಳಬಹುದು.
ಸೋಲಾರ್ ಪಂಪ್ಸೆಟ್ ಸಬ್ಸಿಡಿ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ :
ಸೋಲಾರ್ ಪಂಪ್ಸೆಟ್ಗೆ ಸಬ್ಸಿಡಿಯನ್ನು ಪಡೆಯಬೇಕಾದರೆ ರೈತರು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://souramitra.com/solar/beneficiary/register/Kusum-Yojana-Component-B ಈ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ಆನ್ಲೈನ್ ನಲ್ಲಿ ಸೋಲಾರ್ ಪಂಪ್ಸೆಟ್ ಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಒಟ್ಟಾರೆ ರಾಜ್ಯ ಸರ್ಕಾರವು ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ರೈತರಿಗೆ ಸಬ್ಸಿಡಿಯನ್ನು ನೀಡುತ್ತಿದೆ ಇದರಿಂದ ತಮ್ಮ ಜಮೀನಿನಲ್ಲಿ ರೈತರು ಸುಲಭವಾಗಿ ಸೋಲಾರ್ ಪಂಪ್ಸೆಟ್ ಅನ್ನು ಅಳವಡಿಸಿಕೊಳ್ಳುವುದರ ಮೂಲಕ ಯಾವಾಗ ಬೇಕಾದರೂ ಕೂಡ ನೀರನ್ನು ಬಳಸಬಹುದಾಗಿದೆ.
ಹಾಗಾಗಿ ಈ ಮಾಹಿತಿಯನ್ನು ಎಲ್ಲ ರೈತರಿಗೆ ಶೇರ್ ಮಾಡುವ ಮೂಲಕ ಸೋಲಾರ್ ಪಂಪ್ಸೆಟ್ ಅನ್ನು ಒಂದು ಕುಟುಂಬಕ್ಕೆ ಒಂದು ಸಾವಿರ ಸೋಲಾರ್ ಪಂಪ್ಸೆಟ್ ಮಾತ್ರ ನೀಡಲಾಗುತ್ತದೆ ಎಂದು ತಿಳಿಸಿ ಧನ್ಯವಾದಗಳು.