ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಉಚಿತ ಗ್ಯಾಸ್ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಒಂದು ಸ್ಟವ್ ಅನ್ನು ಪಡೆಯಲು ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳನ್ನು ಹೊಂದಿರಬೇಕು ಈ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
ಉಚಿತ ಗ್ಯಾಸ್ ಪಡೆಯಲು ಮಾಹಿತಿ :
ಮಹಿಳೆಯರು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಇಲ್ಲದೆ ಅಡುಗೆ ಮಾಡಲು ಇತ್ತೀಚಿನ ದಿನಗಳಲ್ಲಿ ಸಾಧ್ಯವೇ ಇಲ್ಲ ಎಂಬುವಂತೆ ತಯಾರಾಗಿದ್ದಾರೆ ಆದ್ದರಿಂದ ಸಾಕಷ್ಟು ಜನರು ಸಿಲಿಂಡರ್ ಅರ್ಜಿ ಹಾಕಲು ಮತ್ತು ಸ್ಟವ್ ಪಡೆಯಲು ಆರರಿಂದ 12 ಸಾವಿರ ರೂಪಾಯಿಗಳ ವರೆಗೆ ಹಣ ಖರ್ಚಾಗುತ್ತದೆ ಅಂತವರಿಗೆ ಇವತ್ತಿನ ಲೇಖನದಲ್ಲಿ ಗುಡ್ ನ್ಯೂಸ್ ಹೇಳಬಹುದು.
ಅದೇ ನಿಂತರೆ ಸರ್ಕಾರದ ಈ ಯೋಜನೆ ಮೂಲಕ ಅರ್ಜಿಯನ್ನು ಸಲ್ಲಿಸಿದರೆ ಒಂದು ಉಚಿತವಾದ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಅನ್ನು ಪಡೆಯಬಹುದಾಗಿದ್ದು ಈ ಯೋಜನೆಗೆ ಸಂಬಂಧಿಸಿದೆ ಸಂಪೂರ್ಣ ಮಾಹಿತಿಯನ್ನು ಇದೀಗ ನೋಡಬಹುದು.
ಒಂದು ಗ್ಯಾಸ ಸಿಲಿಂಡರ್ ಮತ್ತು ಸ್ಟವ್ ಅನ್ನು ಉಚಿತವಾಗಿ ಪಡೆಯಬೇಕಾದರೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಈ ಯೋಜನೆಯಲ್ಲಿ ಕೇವಲ ಉಚಿತ ಸ್ಟವ್ ಮತ್ತು ಗ್ಯಾಸ್ ಸಿಲಿಂಡರ್ ಮಾತ್ರವಲ್ಲದೆ ಸಬ್ಸಿಡಿಯ ದರದಲ್ಲಿ ಗ್ಯಾಸ್ ಸಿಲಿಂಡರ್ ನನ್ನು ಪಡೆಯಬಹುದಾಗಿದೆ.
ಇದನ್ನು ಓದಿ : ರೇಷನ್ ಕಾರ್ಡ್ ನಂಬರ್ ಹಾಕಿ ಗೃಹಲಕ್ಷ್ಮಿ ಹಣ ಚೆಕ್ ಮಾಡಿ : 8ನೇ ಕಂತಿನ ಹಣ !
ಪ್ರಧಾನ ಮಂತ್ರಿ ಉಜ್ವಲ ಯೋಜನೆ :
ಮೇ 1 2016 ರಂದು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಉಚಿತವಾಗಿ ಗ್ಯಾಸ್ ಕಲೆಕ್ಷನ್ ಅನ್ನು ಬಿಪಿಎಲ್ ಮತ್ತು ಬಡ ಕುಟುಂಬಗಳಿಗೆ ನೀಡಲಾಗುತ್ತದೆ. ಕೇವಲ ಉಚಿತ ಗ್ಯಾಸ್ ಸಿಲಿಂಡರ್ ಅಲ್ಲದೆ ಸ್ಟವ್ ಅನ್ನು ಕೂಡ ಒದಗಿಸುವ ಯೋಜನೆ ಇದಾಗಿದೆ.
ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ನೀಡಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿದ್ದು ಪ್ರಸ್ತುತ ಯೋಜನೆಯ ಮೂಲಕ 300 ರೂಪಾಯಿಗಳ ಸಬ್ಸಿಡಿಯನ್ನು ಯೋಜನೆಯ ಫಲಾನುಭವಿಗಳು ಪಡೆಯಬಹುದು.
ಹೊಸ ಹೆಸರನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆಗೆ 2023 ರಲ್ಲಿ ಇಡಲಾಗಿದ್ದು ಪ್ರಧಾನಮಂತ್ರಿ ಉಜ್ವಲ ಯೋಜನೆ 2.0 ಎಂದು ನಾಮಕರಣ ಮಾಡಲಾಗಿದೆ. ಈ ಯೋಜನೆ 2024 25ರ ವರೆಗೆ ಮುಂದುವರೆಯಲಿದ್ದು ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಅನ್ನು ಅರ್ಜಿ ಸಲ್ಲಿಸಿದವರು ಪಡೆಯಬಹುದು.
ಅರ್ಹತೆಗಳು :
ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಿಲಿಂಡರನ್ನು ಪಡೆಯಬೇಕಾದರೆ ಮಹಿಳೆಯರು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು.
- ಹದಿನೆಂಟು ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಬೇಕು.
- ಯಾವುದೇ ತರ ಎಲ್ಪಿಜಿ ಕನೆಕ್ಷನ್ ಮತ್ತು ಯಾವುದೇ ಓ ಎಂ ಸಿ ಯಿಂದ ಸಂಪರ್ಕವನ್ನು ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು ಹೊಂದಿರಬಾರದು.
- ವಯಸ್ಕ ಮಹಿಳೆ ಎಸ್ ಸಿ ಎಸ್ ಟಿ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅತ್ಯಂತ ಹಿಂದುಳಿದ ವರ್ಗಗಳು ಅಂತಿಯೋದಯ ಅನ್ನ ಯೋಜನೆ, ಅರಣ್ಯ ನಿವಾಸಿಗಳು ಹೀಗೆ ವಿವಿಧ ರೀತಿಯ ಜನರು ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು :
ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಗತ್ಯ ದಾಖಲೆಗಳನ್ನು ಅಭ್ಯರ್ಥಿಗಳು ಹೊಂದುವುದರ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
- ಆಧಾರ್ ಕಾರ್ಡ್
- ಗುರುತಿನಪುರಾವೆಯಾಗಿ ವೋಟರ್ ಐಡಿ
- ಪಡಿತರ ಚೀಟಿ
- ಬ್ಯಾಂಕ್ ಪಾಸ್ ಬುಕ್
ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದುವುದರ ಮೂಲಕ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟಾರೆ ಕೇಂದ್ರ ಸರ್ಕಾರವು ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಪ್ರಧಾನಮಂತ್ರಿ ಜುಲೈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಉಚಿತ ಗ್ಯಾಸ್ ಸ್ಟವ್ ಹಾಗೂ ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಪಡೆದು ನಿರಾತಂಕವಾಗಿ ಮಹಿಳೆಯರು ಅಡುಗೆ ಮಾಡಬಹುದಾಗಿದೆ.
ಹಾಗಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಸಂಬಂಧಿಸಿದೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.