ಸರ್ಕಾರದಿಂದ ಹೊಸ ಆದೇಶ : ಪಹಣಿ ಜೊತೆಗೆ ಆಧಾರ್ ಕಾರ್ಡ್ Link ಕಡ್ಡಾಯವಾಗಿದೆ

Aadhaar Card Link is mandatory along with Pahani

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರೈತರಿಗೆ ಸರ್ಕಾರವು ಒಂದು ಹೊಸ ಆದೇಶ ಹೊರಡಿಸಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ತಮ್ಮ ಪಹಣಿಯೊಂದಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡುವುದು ರೈತರಿಗೆ ಕಡ್ಡಾಯಗೊಳಿಸಲಾಗಿದೆ ಆ ಕಾರಣದಿಂದಾಗಿ ಯಾವ ರೀತಿಯಾಗಿ ಈ ಲಿಂಕನ್ನು ಮಾಡಬೇಕು ಎಂಬುದರ ಬಗ್ಗೆ ಹಾಗೂ ಸರ್ಕಾರದ ಈ ಒಂದು ನಿಯಮ ಯಾರಿಗೆಲ್ಲ ಅನ್ವಯವಾಗಲಿದೆ ಎಂಬುದರ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಯಬಹುದು.

Aadhaar Card Link is mandatory along with Pahani
Aadhaar Card Link is mandatory along with Pahani

ರೈತರಿಗೆ ಸರ್ಕಾರದಿಂದ ಹೊಸ ಆದೇಶ :

ಒಂದು ವೇಳೆ ನೀವೇನಾದರೂ ರೈತರಾಗಿದ್ದರೆ ಹಾಗೂ ಜಮೀನನ್ನು ಹೊಂದಿದ್ದರೆ ಕಡ್ಡಾಯವಾಗಿ ಪಹಣಿಯೊಂದಿಗೆ ಆಧಾರ್ ಕಾರ್ಡ್ಗಳನ್ನು ಲಿಂಕ್ ಮಾಡಿಸಬೇಕಾಗುತ್ತದೆ. ಸರ್ಕಾರವು ಈ ಒಂದು ಆದೇಶವನ್ನು ಹೊರಡಿಸಿದ್ದು ಸುಲಭವಾಗಿ ಸರ್ಕಾರವು ಜಾರಿಗೊಳಿಸುವ ಯೋಜನೆಗಳ ಪ್ರಯೋಜನವೆಂದು ರೈತರು ಪಡೆಯಬೇಕೆನ್ನುವ ಉದ್ದೇಶದಿಂದ ಈ ಒಂದು ಹೊಸ ಆದೇಶವನ್ನು ಹೊರಡಿಸಲಾಗಿದೆ.

ಸರ್ಕಾರ ಹೊರಡಿಸಿರುವ ಈ ಒಂದು ಹೊಸ ಆದೇಶದ ಪ್ರಕಾರ ಪಹಣಿಯೊಂದಿಗೆ ಆಧಾರ್ ಕಾರ್ಡ್ಗಳನ್ನು ಜೋಡಣೆ ಮಾಡುವುದು ಕಡ್ಡಾಯಗೊಳಿಸಲಾಗಿದೆ. ಈ ರೀತಿಯಾಗಿ ಪಹಣಿಗಳೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದರ ಮೂಲಕ ಸರ್ಕಾರದ ಯೋಜನೆಗಳ ಎಲ್ಲಾ ಪ್ರಯೋಜನಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

ಯಾವುದೇ ರೀತಿಯ ಜಮೀನಿನ ಸರ್ಕಾರಿ ಸೌಲಭ್ಯಗಳು ಕೂಡ ಈ ರೀತಿ ಲಿಂಕ್ ಮಾಡಿಸದಿದ್ದರೆ ದೊರೆಯುವುದಿಲ್ಲ ಆ ಕಾರಣದಿಂದಾಗಿ ತಕ್ಷಣವೇ ಎಲ್ಲಾ ರೈತರು ಪಹಣಿ ಜೊತೆಗೆ ಆಧಾರ್ ಕಾರ್ಡ್ ಅನ್ನು ಚಮ್ಮ ಜಮೀನಿಗೆ ಮಾಡಿಸಬೇಕು.

ಇದನ್ನು ಓದಿ : ಪಾನ್ ಕಾರ್ಡ್ ಹೊಂದಿರುವವರಿಗೆ ಪ್ರಮುಖ ಸೂಚನೆ : ಸರ್ಕಾರದ ಹೊಸ ಆದೇಶ

ಪಹಣಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ :

ಸರ್ಕಾರವು 7 ವರ್ಷಗಳ ಹಿಂದೆಗೆ ಈ ರೀತಿಯಾದಂತಹ ಒಂದು ಹೊಸ ಆದೇಶವನ್ನು ಹೊರಡಿಸಿತು ಅಂದರೆ ಈ ರೀತಿಯ ಒಂದು ಲಿಂಕ್ ಮಾಡಿಸುವುದು ಕಡ್ಡಾಯಗೊಳಿಸಿತ್ತು ಆ ಸಂದರ್ಭದಲ್ಲಿ ಕೆಲ ರೈತರು ತಮ್ಮ ಪಹಣಿಯೊಂದಿಗೆ ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಿಸಿ ಸರ್ಕಾರವು ಜಾರಿಗೊಳಿಸುವ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಅಂದರೆ ಅವರು ಹೊಂದಿರುವ ಜಮೀನಿನ ಮೇಲೆ ಯಾವೆಲ್ಲ ಸರ್ಕಾರಿ ಯೋಜನೆಗಳು ಲಭ್ಯವಿರುತ್ತವೆಯೋ ಎಂಬುದನ್ನು ನೋಡಿ ಆ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಸುಲಭವಾಗಿ ಪಡೆದಿದ್ದಾರೆ.

ಹಾಗಾಗಿ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಕಡ್ಡಾಯವಾಗಿ ಪಹಣಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಬೇಕು. ಈ ರೀತಿಯಾದಂತಹ ಮತ್ತೊಂದು ಹೊಸ ಆದೇಶವನ್ನು ಇದೀಗ ರಾಜ್ಯ ಸರ್ಕಾರ ಹೊರಡಿಸಿದ್ದು ಈ ಬಗ್ಗೆ ಎಲ್ಲ ರೈತರಿಗೂ ತಿಳಿಸಬೇಕು.

ಪಹಣಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವ ವಿಧಾನ :

ಸರ್ಕಾರವು ಹೊರಡಿಸಿರುವ ಈ ಒಂದು ಹೊಸ ಆದೇಶದ ಮೂಲಕ ಯಾವ ರೀತಿ ಪಹಣಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಬೇಕೆಂದು ನೋಡುವುದಾದರೆ,

  1. ಆಧಾರ್ ಕಾರ್ಡ್ ನೊಂದಿಗೆ ಪಹಣಿಯನ್ನು ಮೀಂಟ್ ಮಾಡಿಸಬೇಕಾದರೆ ಮೊದಲು ಎಲ್ಲಾ ರೈತರು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  2. ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ಅದರಲ್ಲಿ ಮೊಬೈಲ್ ಸಂಖ್ಯೆ ಹಾಗೂ ಕ್ಯಾಪ್ಚಾ ಕೊಡನ್ನು ಹಾಕುವ ಮುಖಾಂತರ ಓಟಿಪಿಯನ್ನು ಪಡೆದುಕೊಳ್ಳಬೇಕು.
  3. ಅದಾದ ನಂತರ ಓಟಿಪಿ ಎಂದು ನಮೂದಿಸಿ ಲಾಗಿನ್ ಆಗಬೇಕಾಗುತ್ತದೆ.
  4. ಹೀಗೆ ನಿಮ್ಮ ಪಹಣಿಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಎಂಬುದರ ಆಯ್ತು ನಿಮಗೆ ಕಾಣುತ್ತದೆ.
  5. ಅದರಲ್ಲಿ ನೀವು ಕ್ಲಿಕ್ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್ ಕೂಡ ಆರ್ ಟಿ ಸಿ ಗೆ ಜೋಡಣೆ ಆಗಿರುತ್ತದೆ.
  6. ಆಫ್ಲೈನ್ ವಿಧಾನದಲ್ಲಿಯೂ ಕೂಡ ಆಧಾರ್ ಕಾರ್ಡ್ ಅನ್ನು ಪಹಣಿಗೆ ಲಿಂಕ್ ಮಾಡಬಹುದಾಗಿತ್ತು ತಮ್ಮ ಊರಿನ ಗ್ರಾಮಾಂತರ ಆಡಳಿತ ಅಧಿಕಾರಿ ಕಚೇರಿಗೆ ಭೇಟಿ ನೀಡುವುದರ ಮುಖಾಂತರ ಆಫ್ಲೈನ್ ಮೂಲಕ ಪಹಣಿಗಳಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಬಹುದಾಗಿದೆ. ಆಧಾರ್ ಕಾರ್ಡ್ ಜೊತೆಗೆ ಮೊಬೈಲ್ ನಂಬರ್ ಅನ್ನು ಕೂಡ ನೀಡುವುದರ ಮೂಲಕ ಮೊಬೈಲ್ ನಲ್ಲಿ ಓಟಿಪಿ ರವಾನಿ ಆಗುತ್ತದೆ ಆ ಕಾರಣದಿಂದಾಗಿ ಮೊಬೈಲ್ ಅಗತ್ಯವಾಗಿದೆ.
    ಹೀಗೆ ಆಫ್ ಲೈನ್ ಹಾಗು ಆನ್ಲೈನ್ ಮೂಲಕವೂ ಕೂಡ ಪಹಣಿ ಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಎಲ್ಲ ರೈತರಿಗೆ ಸರ್ಕಾರ ಆದೇಶ ನೀಡಿದ್ದು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಒಟ್ಟಾರೆ ಜಮೀನು ಹೊಂದಿರುವ ರೈತರು ಸರ್ಕಾರವು ಜಾರಿಗೊಳಿಸುವ ಎಲ್ಲ ಯೋಜನೆಗಳ ಪ್ರಯೋಜನವನ್ನು ಆ ಜಮೀನಿಗೆ ಸಂಬಂಧಿಸಿದಂತೆ ಪಡೆದುಕೊಳ್ಳಲು ತಮ್ಮ ಪಹಣಿಯ ಜೊತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸುವುದು ಕಡ್ಡಾಯಗೊಳಿಸಲಾಗಿದೆ.

ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಬಗ್ಗೆ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಇದರ ಪ್ರಯೋಜನವನ್ನು ಎಲ್ಲಾ ರೈತರು ಪಡೆದುಕೊಳ್ಳಲಿ. ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಬಂಧು ಮಿತ್ರರು ಹಾಗೂ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Reply

Your email address will not be published. Required fields are marked *