ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಜೂನಿಯರ್ ಅಸಿಸ್ಟೆಂಟ್ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಾರ್ಚ್ 224 ರಲ್ಲಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಹಾಗೂ ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳು ಈ ಸದಾ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಹುದ್ದೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದಾಗಿತ್ತು ಹುದ್ದೆಗಳ ವಿವರ ಅರ್ಜಿ ಶುಲ್ಕದ ವಿವರ ವಯಸ್ಸಿನ ಮಿತಿ ವೇತನ ಶ್ರೇಣಿ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ಸೇರಿದಂತೆ ಹುದ್ದೆಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನೇಮಕಾತಿ :
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜೂನಿಯರ್ ಅಸಿಸ್ಟೆಂಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಿಗದಿತ ದಿನಾಂಕ ದೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆಯ ಹೆಸರು | ಕರ್ನಾಟಕ ಪರೀಕ್ಷಾ ಪ್ರಾಧಿಕಾರ |
ಖಾಲಿ ಇರುವ ಹುದ್ದೆಗಳ ಸಂಖ್ಯೆ | 44 |
ಉದ್ಯೋಗದ ಸ್ಥಳ | ಬೆಂಗಳೂರು ಕರ್ನಾಟಕ |
ವೇತನ ಶ್ರೇಣಿ | 21400-83900 |
ಖಾಲಿ ಇರುವ ಹುದ್ದೆಗಳ ಹೆಸರು | ಜೂನಿಯರ್ ಅಸಿಸ್ಟೆಂಟ್ ಮತ್ತು ಸಹಾಯಕ |
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ
- ಜೂನಿಯರ್ ಪ್ರೋಗ್ರಾಮ್ ಗುಂಪು ಬಿ -5
- ಸಹಕ ಇಂಜಿನಿಯರಿಂಗ್ ಗ್ರೂಪ್ ಬಿ -1
- ಸಹಾಯಕ ಗ್ರಂಥಪಾಲಕ ಗ್ರೂಪ್ ಸಿ- 1
- ಸಹಾಯಕ ಗ್ರೂಪ್ ಸಿ -12
- ಕಿರಿಯ ಸಹಾಯಕ ಗ್ರೂಪ್ ಸಿ -25
ಹೀಗೆ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಖಾಲಿ ಇದ್ದು ಈ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ವಿದ್ಯಾರ್ಹತೆ :
ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಕೆಲವೊಂದು ವಿದ್ಯಾರ್ಥಿಯನ್ನು ಹೊಂದುವುದರ ಮೂಲಕ ಹುದ್ದೆಗಳಿಗೆ ಅನುಸಾರವಾಗಿ ಅರ್ಜಿಯನ್ನು ಸಲ್ಲಿಸಬಹುದು.
- ಎಲೆಕ್ಟ್ರಾನಿಕ್ಸ್ ಅಥವಾ ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಅಥವಾ ಎಂಸಿಎಯನ್ನು ಜೂನಿಯರ್ ಪ್ರೋಗ್ರಾಮ್ ಹುದ್ದೆಗೆ
- ಸಿವಿಲ್ ನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಸಹಾಯಕ ಇಂಜಿನಿಯರಿಂಗ್ ಹುದ್ದೆಗೆ
- ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಸಹಾಯಕ ಗ್ರಂಥಪಾಲಕ ಹುದ್ದೆಗೆ
- ಪಿಯುಸಿಯನ್ನು ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ
ವಿದ್ಯಾರ್ಹತೆಯನ್ನು ಹೊಂದಿರಬೇಕೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ ತಿಳಿಸಲಾಗಿದೆ.
ಇದನ್ನು ಓದಿ : ಗ್ರಾಮ ಪಂಚಾಯಿತಿಯಲ್ಲಿ ನೇರ ನೇಮಕಾತಿ : ಅರ್ಜಿ ಶುಲ್ಕ ಇಲ್ಲ ,ತಕ್ಷಣ Apply ಮಾಡಿ
ವಯಸ್ಸಿನ ಮಿತಿ :
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳು ಹೊಂದಿರಬೇಕು ಹಾಗೂ ವಯಸ್ಸಿನ ಮಿತಿಯಲ್ಲಿ ವರ್ಗಗಳಿಗೆ ಅನುಸಾರವಾಗಿ ಸಡಲಿಕ್ಕೆ ಮಾಡಲಾಗಿದೆ.
- ಐದು ವರ್ಷಗಳು ಎಸ್ ಸಿ ಎಸ್ ಟಿ ಮತ್ತು ಕೆಟಗರಿ 1 ಅಭ್ಯರ್ಥಿಗಳಿಗೆ
- ಮೂರು ವರ್ಷಗಳು 2a 2b 3a 3b ಅಭ್ಯರ್ಥಿಗಳಿಗೆ
ಅರ್ಜಿ ಶುಲ್ಕದ ವಿವರ :
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ನಿಗದಿಪಡಿಸಿದೆ.
- 500 ಎಸ್ಸಿ ಎಸ್ಟಿ ಕೆಟಗರಿ ಒನ್ ಮತ್ತು ಪಿ ಡಬ್ಲ್ಯೂ ಅಭ್ಯರ್ಥಿಗಳಿಗೆ.
- 750 ಗಳು ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ
ನಿಗದಿಪಡಿಸಲಾಗಿದ್ದು ಆನ್ಲೈನ್ ಮುಖಾಂತರ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
ಆಯ್ಕೆ ಪ್ರಕ್ರಿಯೆ :
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ ಶ್ರೇಣಿ :
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರವಾಗಿ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.
- ಜೂನಿಯರ್ ಪ್ರೋಗ್ರಾಮ್ ಹುದ್ದೆಗೆ 43100-83900
- ಸಹಾಯಕ ಇಂಜಿನಿಯರಿಂಗ್ ಹುದ್ದೆಗೆ ಮತ್ತು ಸಹಾಯಕ ಗ್ರಂಥ ಪಾಲಕ ಹುದ್ದೆಗೆ 30350-58250
- ಸಹಾಯಕ ಹುದ್ದೆಗೆ 37900-70850
- ಕಿರಿಯ ಸಹಾಯಕ ಹುದ್ದೆಗೆ 21400-42000
ಅರ್ಜಿ ಸಲ್ಲಿಸುವ ವಿಧಾನ :
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಬೇಕು.
- ಮೊದಲನೆಯದಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಆದಿ ಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಅರ್ಹತಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಮಾತ್ರ ಹುದ್ದೆಗೆ ಅರ್ಜಿ ಸಲ್ಲಿಸಬೇಕು.
- ಆನ್ಲೈನ್ ಮುಖಾಂತರ ಅರ್ಜಿಯನ್ನು ಅಭ್ಯರ್ಥಿಗಳು ಭರ್ತಿ ಮಾಡಬೇಕು.
- ಅರ್ಜಿ ಯನ್ನ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳು ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಅನ್ನು ಕೂಡ ಸಲ್ಲಿಸಬೇಕು.
- ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು https://cetonline.karnataka.gov.in ಈ ವೆಬ್ಸೈಟ್ ಗೆ ಭೇಟಿ ನೀಡಬೇಕು.
ಹೀಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ನಿಗದಿಗ ದಿನಾಂಕದೊಳಗೆ ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು :
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 26-03-2024
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25.04.2024
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 26.4.2024
ಈ ದಿನಾಂಕದೊಳಗೆ ಅರ್ಜಿಯನ್ನು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಸಲ್ಲಿಸಬಹುದಾಗಿದೆ.
ಒಟ್ಟಾರೆ ಕರ್ನಾಟಕ ಸರ್ಕಾರವು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಖಾಲಿ ಇರುವ 44 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಸರ್ಕಾರ ಉದ್ಯೋಗವನ್ನು ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.