ನಮಸ್ಕಾರ ಸ್ನೇಹಿತರೆ ಮಹಿಳೆಯರ ಬ್ಯಾಂಕ್ ಖಾತೆಗೆ ಹಣವನ್ನು ರಾಜ್ಯ ಸರ್ಕಾರ ಜಮಾ ಮಾಡಿದೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆ ಒಂದು ವೇಳೆ ನೀವೇನಾದರೂ ಆಗಿದ್ದರೆ ಈ ಲೇಖನದ ಮಾಹಿತಿ ಹೆಚ್ಚು ಉಪಯುಕ್ತವಾಗಲಿದೆ. ಬ್ಯಾಂಕ್ ಖಾತೆಗೆ ಎಷ್ಟು ಜನರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತಿದೆ ಆದರೆ ಸರ್ಕಾರ ಸರಿಯಾದ ಸಮಯಕ್ಕೆ ಬಿಡುಗಡೆ ಮಾಡಿದಾಗ ತವಗಾತೆಗೆ ಬಂದಿದೆಯಾ ಇಲ್ಲವಾ ಎಂಬುದು ತಿಳಿದುಕೊಳ್ಳಲು ಸಾಕಷ್ಟು ಜನರಿಗೆ ಸಾಧ್ಯವಾಗುತ್ತಿಲ್ಲ.
ನಮ್ಮ ಬ್ಯಾಂಕ್ ಖಾತೆಗೆ ಯಾವುದೇ ಹಣ ಬಂದರೆ ಸಾಮಾನ್ಯವಾಗಿ ಅಥವಾ ಯಾವುದೇ ಹಣ ಖಾತೆಯಿಂದ ಕಡಿತಗೊಂಡರೆ ರಿಜಿಸ್ಟರ್ ಆಗಿರುವಂತಹ ಮೊಬೈಲ್ ನಂಬರ್ ಗೆ ಬ್ಯಾಂಕ್ ನ ವತಿಯಿಂದ ಒಂದು ಸಂದೇಶವನ್ನು ಕಳುಹಿಸಲಾಗುತ್ತದೆ. ಒಂದು ವೇಳೆ ನಿಮಗೆ ನಿಮ್ಮ ಖಾತೆಯ ಬಗ್ಗೆ ಬ್ಯಾಂಕಿನಿಂದ ಮಾಹಿತಿಯನ್ನು ನೀಡುವ ಸಂದೇಶ ಬಂದಿಲ್ಲ ಎಂದು ಆತಂಕ ಪಡುವಂತಹ ಅಗತ್ಯವಿಲ್ಲ ಏಕೆಂದರೆ ನಿಮ್ಮ ಖಾತೆಯ ಡಿ ಬಿ ಟಿ ಹಣದ ಬಗ್ಗೆ ಆನ್ಲೈನ್ ಮೂಲಕವೇ ಮಾಹಿತಿ ಪಡೆಯಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆಯ ಹಣ ಬರಲು E-KYC ಕಡ್ಡಾಯ :
ನಿಮ್ಮ ಬ್ಯಾಂಕ್ ಖಾತೆಗೆ ಒಂದು ವೇಳೆ ಕೆವೈಸಿ ಆಗಿದ್ದರು ಸಹ ಅದು ಕಾರ್ಯನಿರ್ವಹಿಸುತ್ತಿಲ್ಲ ಎಂದಾದರೆ ಕೆವೈಸಿ ಅಪ್ಡೇಟ್ ಅನ್ನು ತಕ್ಷಣವೇ ನಿಮ್ಮ ಬ್ಯಾಂಕಿಗೆ ಭೇಟಿ ನೀಡಿ ಮಾಡಿಸಬಹುದು. ಈ ರೀತಿ ಅಪ್ಡೇಟ್ ಮಾಡಿಸುವುದರ ಮೂಲಕ ಮಿಸ್ ಆಗದಂತೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುವಂತೆ ಮಾಡಬಹುದಾಗಿದೆ.
ಆನ್ಲೈನ್ ಮೂಲಕ ಚೆಕ್ ಮಾಡಬಹುದು :
ಈಗಾಗಲೇ ಏಳು ಕಂತುಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ತಲ 2,000ಗಳಂತೆ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಅಂದರೆ ಒಟ್ಟು 14,000ಗಳನ್ನು ಸಾಕಷ್ಟು ಮಹಿಳೆಯರು ಉಚಿತವಾಗಿ ಸರ್ಕಾರದಿಂದ ಕಳೆದ ಏಳು ತಿಂಗಳಲ್ಲಿ ಪಡೆದುಕೊಂಡಿದ್ದಾರೆ. ಮಾರ್ಚ್ ತಿಂಗಳ 15ನೇ ತಾರೀಖಿನಿಂದ ಫೆಬ್ರವರಿ ತಿಂಗಳ ಹಣ ಬಿಡುಗಡೆಯಾಗಿದೆ ಹಂತ ಹಂತವಾಗಿ ಬಿಡುಗಡೆ ಮಾಡಲಾದ ಹಣವನ್ನು ಪ್ರತಿಯೊಂದು ಜಿಲ್ಲೆಗೂ ಸರ್ಕಾರ ವರ್ಗಾವಣೆ ಮಾಡಲಾಗುತ್ತಿದೆ.
ಹಾಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲದಿದ್ದರೆ ಮಾರ್ಚ್ 31 ರ ವರೆಗೂ ಟೆನ್ಶನ್ ಮಾಡಿಕೊಳ್ಳುವಂತಹ ಅಗತ್ಯವಿಲ್ಲ ಕಾಯಬೇಕಾಗುತ್ತದೆ. ನಿಮ್ಮ ಖಾತೆಗೆ ಹಣ ಬಂದಿದೆ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಮೊಬೈಲ್ನಲ್ಲಿ ಸೇವಾ ಸಿಂಧು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಅದರ ಮೂಲಕ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.
- ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡಬೇಕಾದರೆ ಮೊದಲು ಮೊಬೈಲ್ ನಲ್ಲಿ ಸೇವಾ ಸಿಂಧು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
- ಅದಾದ ನಂತರ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಲು ಗೃಹಲಕ್ಷ್ಮಿ ಸ್ಟೇಟಸ್ ಎನ್ನುವ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಯಬಹುದು.
- ಗೃಹಲಕ್ಷ್ಮಿ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕಾದರೆ ಮಾಹಿತಿ ಕಣಜ ವೆಬ್ಸೈಟ್ ಗೆ ಭೇಟಿ ನೀಡಿ ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಅದರಲ್ಲಿ ನೀವು ರೇಷನ್ ಕಾರ್ಡ್ ಸಂಖ್ಯೆಯನ್ನು ನಮಗಿಸುವ ಮೂಲಕ ನಿಮ್ಮ ರೇಷನ್ ಕಾರ್ಡ್ ಆಕ್ಟಿವಿದೆಯೇ ಇಲ್ಲವೋ ಹಾಗೂ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆ ಇಲ್ಲವೇ ಎಂಬುದರ ವಿವರವನ್ನು ಕಾಣಬಹುದಾಗಿದೆ.
- ಇನ್ನು ಮೂರನೇಯದಾಗಿ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ಚೆಕ್ ಮಾಡಬೇಕಾದರೆ ಕರ್ನಾಟಕ ಸರ್ಕಾರದ ಅದರಲ್ಲಿಯೂ ವಿಶೇಷವಾಗಿ ಡಿಬಿಟಿ ಕರ್ನಾಟಕ ಆಪನ್ನು ಡೌನ್ಲೋಡ್ ಮಾಡುವ ಮೂಲಕ ಡಿ ಬಿ ಟಿ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆಯೇ ಇಲ್ಲವೇ ಎಂಬುದನ್ನು ಮೊಬೈಲ್ ಮೂಲಕ ತಿಳಿಯಬಹುದಾಗಿದೆ.
- ಡಿ ಬಿ ಟಿ ಕರ್ನಾಟಕ ಎನ್ನುವ ಮೊಬೈಲ್ ಮೂಲಕ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಅನ್ನು ಚೆಕ್ ಮಾಡಬೇಕಾದರೆ ಮೊದಲು ನೀವು ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಅದರಲ್ಲಿ ಡಿ ಬಿ ಟಿ ಕರ್ನಾಟಕ ಎನ್ನುವ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಬೇಕು. ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿದ ನಂತರ ಎಂಪಿನ್ ಅನ್ನು ರಚಿಸಿ ಲಾಗಿನ್ ಆಬೇಕಾಗುತ್ತದೆ. ಅದಾದ ನಂತರ ನೀವು ಅದರಲ್ಲಿ ಪ್ರೊಫೈಲ್ ವಿಭಾಗದಲ್ಲಿ ಡಿ ಬಿ ಟಿ ಆಗಿರುವ ಎಲ್ಲಾ ಹಣದ ಬಗ್ಗೆ ಮಾಹಿತಿಯನ್ನು ಸುಲಭವಾಗಿ ತಿಳಿಯಬಹುದು.
ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮಾಹಿತಿ :
ಒಂದು ವೇಳೆ ನೀವೇನಾದರೂ ಹೊಸದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದರೆ ಈ ಮಾಹಿತಿಯನ್ನು ತಿಳಿಯಬೇಕಾಗುತ್ತದೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಎಂದಾದರೆ ಅಥವಾ ಈ ಹಿಂದೆ ಸಲ್ಲಿಸಿರುವಂತಹ ಅರ್ಜಿಯಿಂದ ನಿಮ್ಮ ಬ್ಯಾಂಕ್ ಖಾತೆಗೆ ಒಂದು ರೂಪಾಯಿ ಹಣವು ಕೂಡ ಜಮಾ ಆಗಿಲ್ಲದಿದ್ದರೆ ಸರ್ಕಾರ ಮತ್ತೆ ಅವಕಾಶವನ್ನು ಅರ್ಜಿ ಸಲ್ಲಿಸಲು ನೀಡಿದೆ. ಅಂತಹ ಸಂದರ್ಭದಲ್ಲಿ ಪ್ರಮುಖ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದರ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕು.
- ರೇಷನ್ ಕಾರ್ಡ್ ಆಧಾರ್ ಕಾರ್ಡ್ ನಲ್ಲಿ ಇರುವಂತಹ ಹೆಸರು ಹಾಗೂ ಬ್ಯಾಂಕ್ ಖಾತೆಯಲ್ಲಿ ಇರುವಂತಹ ಹೆಸರುಗಳು ಒಂದಕ್ಕೊಂದು ಹೊಂದಾಣಿಕೆ ಆಗಬೇಕು.
- E-KYCಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಗಿರಬೇಕು.
- ನಿಮ್ಮ ಬ್ಯಾಂಕ್ ಖಾತೆ ಆಕ್ಟಿವ್ ಆಗಿರಬೇಕು.
- ಎಲ್ಲ ದಾಖಲೆಗಳು ಸರಿ ಇದ್ದಾಗ ಮಾತ್ರ ಸುಲಭವಾಗಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಅದಾದ ನಂತರ ಮುಂದಿನ ತಿಂಗಳಿನಿಂದ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸುಲಭವಾಗಿ ಪಡೆಯಬಹುದು.
ಹೀಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆಯೇ ಇಲ್ಲದೆ ಎಂಬುದರ ಬಗ್ಗೆ ಈ ವಿಧಾನಗಳ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು.
ಹಾಗಾಗಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತಹ ಈ ಮಾಹಿತಿಯನ್ನು ರಾಜ್ಯದಲ್ಲಿರುವ ಎಲ್ಲಾ ಫಲಾನುಭವಿಗಳಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಕೇಂದ್ರ ಸರ್ಕಾರದಿಂದ 11,000 ಉಚಿತ : ಮೋದಿ ಯಾರಿಗೆ ಹಣ ನೀಡುತ್ತಿದ್ದಾರೆ ತಿಳಿದುಕೊಳ್ಳಿ ಹಾಗೆ ಪಡೆದುಕೊಳ್ಳಿ
- ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನೇಮಕಾತಿಗೆ ಅಧಿಸೂಚನೆ : ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಅಹ್ವಾನ
ಕರ್ನಾಟಕದಲ್ಲಿ ಎಷ್ಟು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಕೊಡುತ್ತಾ ಇದ್ದಾರೆ ,,?
ಸತತ ಏಳು ತಿಂಗಳಿನಿಂದ ಕೊಡುತ್ತಾ ಇದ್ದಾರೆ.
ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಕೊಡುವ ಉದ್ದೇಶ ..?
ಮಹಿಳೆಯರನ್ನು ಆರ್ಥಿಕವಾಗಿ ಸದೃಢರನಾಗಿ ಮಾಡಲು.