ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹಲವರು ಯೋಜನೆಗಳ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದ್ದು ಇದೀಗ ಪ್ರಸ್ತುತ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಪ್ರಸ್ತುತ ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿರುವ ಮಹಿಳೆಯರ ಉಚಿತ ಬಸ್ ಪ್ರಯಾಣದ ಯೋಜನೆಯದ ಶಕ್ತಿ ಯೋಜನೆ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಶಕ್ತಿ ಯೋಜನೆಗೆ ಸಂಬಂಧಿಸಿ ದಂತೆ ಇಲ್ಲಸಲ್ಲದ ವದಂತಿಗಳು ಕೇಳಿ ಬರುತ್ತಿದ್ದು ಗ್ಯಾರಂಟಿ ಯೋಜನೆಗಳಲ್ಲ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಬಂದ ಆಗಲಿವೆ ಎಂಬ ಸುಳ್ಳು ಮಾಹಿತಿಗಳು ಹರಿದಾಡುತ್ತಿವೆ ಅದರಿಂದ ಶಕ್ತಿ ಯೋಜನೆ ಉಚಿತ ಬಸ್ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಕಡ್ಡಾಯವಿಲ್ಲ ಎಂಬ ವರೆಗೂ ಕೂಡ ಹಲವಾರು ಸುದ್ದಿಗಳು ಹರಿದಾಡುತ್ತಿವೆ ಎಂದು ಹೇಳಬಹುದು.
ಇದೀಗ ಉಚಿತ ಬಸ್ ಪ್ರಯಾಣಕ್ಕೆ ಸಂಬಂಧಿಸಿದಂತೆ ಸರಿಯಾದ ಮಾಹಿತಿಗಳನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ.
ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ :
ಶಕ್ತಿ ಯೋಜನೆಯ ಅಡಿಯಲ್ಲಿ ಇನ್ನು ಮುಂದೆ ಸಾರಗಿ ಸಂಸ್ಥೆಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಮಹಿಳೆಯರು ಆಧಾರ್ ಕಾರ್ಡ್ ಅನ್ನು ಬಳಸುವ ಬದಲು ಸ್ಮಾರ್ಟ್ ಕಾರ್ಡ್ ಅನ್ನು ತೋರಿಸಿ ಟಿಕೆಟ್ ಗಳನ್ನು ಪಡೆದುಕೊಂಡು ಪ್ರಯಾಣಿಸಬೇಕಾಗುತ್ತದೆ. ಇದೀಗ ಆಧಾರ್ ಕಾರ್ಡ್ ಬದಲಿಗೆ ಸ್ಮಾರ್ಟ್ ಕಾರ್ಡ್ ಅಗತ್ಯವೆಂದು ಹೇಳಲಾಗುತ್ತಿದೆ. ಹಾಗಾಗಿ ಸಾರಿಗೆ ಇಲಾಖೆಯು ಮಹಿಳೆಯರು ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಬೇಕೆಂಬ ಆದೇಶ ಹೊರಡಿಸಿದೆ ಎಂಬ ಸುದ್ದಿಯು ವೈರಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಇದೀಗ ಮಹಿಳೆಯರಿಗೆ ಸ್ಪಷ್ಟನೆ ನೀಡಿದೆ.
ಉಚಿತ ಬಸ್ ಪ್ರಯಾಣ ಮಾಡಲು ಸ್ಮಾರ್ಟ್ ಕಾರ್ಡ್ ಕಡ್ಡಾಯವಲ್ಲ :
ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸದ್ಯ ಇದೀಗ ಪ್ರಯಾಣಿಸುವ ಮಹಿಳೆಯರು ತಮ್ಮ ವಾಸ ಸ್ಥಳದ ದಾಖಲೆಯಾಗಿರುವಂತಹ ಆಧಾರ್ ಕಾರ್ಡ್ ಮತದಾರರ ಗುರುತಿನ ಚೀಟಿ ಚಾಲನಾ ಪರವಾನಗಿ ಪತ್ರ ಹೀಗೆ ಭಾರತ ಸರ್ಕಾರದ ಕರ್ನಾಟಕ ಸರ್ಕಾರದ ಸಂಸ್ಥೆಗಳು ನೀಡಿರುವಂತಹ ಗುರುತಿನ ಚೀಟಿ ಗಳನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಲು ರಾಜ್ಯ ಸರ್ಕಾರ ಅವಕಾಶ ನೀಡಿದೆ.
ಸಾರಿಗೆ ಇಲಾಖೆ ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದಲೇ ಸ್ಮಾರ್ಟ್ ಕಾರ್ಡ್ ಅಗತ್ಯತೆಯನ್ನು ಹೇಳಿತು ಆದರೆ ಅಲ್ಲಿಯವರೆಗೂ ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ನಂತಹ ಗುರುತಿನ ಚೀಟಿಯನ್ನು ತೋರಿಸಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಈ ಹಿನ್ನೆಲೆಯಲ್ಲಿ ಶೂನ್ಯ ದರದ ಟಿಕೆಟನ್ನು ನೀಡಲು ಮಹಿಳೆಯರಿಗೆ ಸರ್ಕಾರವು ಸೂಚಿಸಲಾಗಿದೆ 11 ತಿಂಗಳು ಕಳೆದಿದೆ ಈಗಲೂ ಕೂಡ ಯಾವುದೇ ರೀತಿಯ ಸ್ಮಾರ್ಟ್ ಕಾರ್ಡ್ ಕಡ್ಡಾಯದ ಬಗ್ಗೆ ರಾಜ್ಯ ಸರ್ಕಾರದ ಸಾಲಿಗೆ ಇಲಾಖೆಯ ಅಧಿಕೃತ ಆದೇಶವನ್ನು ಪ್ರಕಟಿಸಿಲ್ಲ.
ಹಾಗಾಗಿ ಮಹಿಳೆಯರು ಶಕ್ತಿ ಯೋಜನೆಯ ಅಡಿಯಲ್ಲಿ ಉಚಿತ ಬಸ್ ಪ್ರಯಾಣ ಮಾಡುವ ಸಂದರ್ಭದಲ್ಲಿ ಸ್ಮಾರ್ಟ್ ಕಾರ್ಡ್ ಅಗತ್ಯವಿಲ್ಲ ಎಂಬುದನ್ನು ರಾಜ್ಯ ಸರ್ಕಾರ ತಿಳಿಸಿದೆ ಎಂದು ಹೇಳಬಹುದು
ಪಿಂಕ್ ಟಿಕೆಟ್ ಜಾರಿಯಾಗಲಿದೆ :
ಮಹಿಳೆಯರ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಬದಲು ಪಿಂಕ್ ಟಿಕೆಟ್ ನೀಡಲು ಸಾರಿಗೆ ಇಲಾಖೆಯ ಮುಂದಾಗಿದ್ದು ಇದಕ್ಕೆ ಫಲಾನುಭವಿ ಮಹಿಳೆಯರಿಗೆ ಪಿಂಕ್ ಕಲರ್ ಟಿಕೆಟ್ ಅನ್ನು ಪ್ರಯಾಣಿಸುವ ಸಂದರ್ಭದಲ್ಲಿ ನೀಡಲಾಗುತ್ತದೆ ಇದನ್ನು ಪಿಂಕು ಬಣ್ಣಕ್ಕೆ ಬದಲಾಯಿಸಿ ಸಾರಿಗೆ ಇಲಾಖೆ ವಿತರಿಸಲು ನಿರ್ಧರಿಸಿದೆ. ಶೂನ್ಯ ಮುತ್ತವವನ್ನು ಪಿಂಕ್ ಬಣ್ಣದ ಟಿಕೆಟ್ ನಲ್ಲಿ ಪ್ರಯಾಣದ ಮಾಹಿತಿಯ ಜೊತೆಗೆ ನಮೂದಿಸಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಇದರಲ್ಲಿ ಇರುವಂತಹ ಇನ್ನೊಂದು ವಿಶೇಷತೆ ಏನೆಂದರೆ ಪ್ರಯಾಣ ಉಚಿತವಾದರೂ ಕೂಡ ಮಹಿಳೆಯರಿಗೆ ಮಹಿಳೆಯರು ಸಾಗಿಸುವ ಲಗ್ಗೇಜ್ ಗೆ ನಿಗದಿತ ಬೆಲೆಯನ್ನು ಕೆಎಸ್ಆರ್ಟಿಸಿ ನಿಗದಿಪಡಿಸಿದೆ ಎಂದು ಹೇಳಬಹುದು. 30 ಕೆಜಿ ತೂಕದವರೆಗೂ ಬಸ್ಕಳಲ್ಲಿ ಲಗ್ಗೇಜ್ಗೆ ವಿನಾಯಿತಿ ಇದೆ 30 ಕೆ.ಜಿ ಗಿಂತ ಮೇಲ್ಪಟ್ಟ ಯಾವುದೇ ಲಗೇಜ್ ಗಳನ್ನು ಮಹಿಳೆಯರು ಅದಕ್ಕೆ ಟಿಕೆಟ್ ಅನ್ನು ಪಡೆಯಲೇಬೇಕು.
ಒಟ್ಟಾರೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಸಂಬಂಧಿಸಿ ದಂತೆ ಹಲವಾರು ಸುದ್ದಿಗಳು ಹರಿದಾಡುತ್ತಿದ್ದು ಇದೀಗ ರಾಜ್ಯ ಸರ್ಕಾರ ಇಂತಹ ಸುದ್ದಿಗಳಿಗೆ ಸ್ಪಷ್ಟವಾಗಿ ಉತ್ತರವನ್ನು ನೀಡಿದೆ ಎಂದು ಹೇಳಬಹುದು.
ಹಾಗಾಗಿ ಇನ್ನು ಮುಂದೆ ಉಚಿತ ಬಸ್ ಪ್ರಯಾಣ ಮಾಡಲು ಸ್ಮಾರ್ಟ್ ಕಾರ್ಡ್ ಕಡ್ಡಾಯ ವೆಂಬುದು ಸುಳ್ಳು ಸುದ್ದಿಯಾಗಿದೆ ಎಂಬುದನ್ನು ಎಲ್ಲರಿಗೂ ತಿಳಿಸುವ ಮೂಲಕ ಯಾವುದೇ ರೀತಿಯ ಗೊಂದಲಕ್ಕೆ ಮಹಿಳೆಯರು ಒಳಗಾಗದಂತೆ ಸಾರಿಗೆ ಬಸ್ಸುಗಳಲ್ಲಿ ಎಂದಿನಂತೆ ವೋಟರ್ ಐಡಿ ಆಧಾರ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ತೋರಿಸಿ ಪ್ರಯಾಣ ಬೆಳೆಸಬಹುದು ಎಂದು ಸಾರಿಗೆ ಇಲಾಖೆಯು ಸ್ಪಷ್ಟಪಡಿಸಿದೆ ಎಂಬುದರ ಬಗ್ಗೆ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.