ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಸಾಲದ ಮೋರೆ ಹೋಗುತ್ತಾನೆ. ಇಂದು ಮದುವೆ, ಶಿಕ್ಷಣ, ಮನೆ ನಿರ್ಮಾಣ ಇತ್ಯಾದಿಗಳಿಗೆ ಸಾಲದ ಅವಶ್ಯಕತೆ ಹೆಚ್ಚು ಇದ್ದೇ ಇರುತ್ತದೆ. ಇಂದು ಹೆಚ್ಚಿನ ಜನರು ಸಾಲ ಬೇಕು ಎಂದು ಇದ್ದಾಗ ತುರ್ತು ಹಣ ಬೇಕು ಎಂದು ಇದ್ದಾಗ ವೈಯಕ್ತಿಕ ಸಾಲದ ಆಯ್ಕೆ ಮಾಡುತ್ತಾರೆ.
ಇನ್ನೂ ಕೆಲವರು ತಮ್ಮ ಪಾಲಿಸಿಯನ್ನು ಅರ್ಧಕ್ಕೆ ನಿಲ್ಲಿಸಿ ಹಣವನ್ನು ಹಿಂಪಡೆದುಕೊಳ್ಳುತ್ತಾರೆ. ಆದರೆ ಹೀಗೆ ಮಾಡಬೇಕಿಲ್ಲ. ನಿಮ್ಮಲ್ಲಿ ಎಲ್.ಐ.ಸಿ ಪಾಲಿಸಿ (LIC policy) ಇದ್ದರೆ ಆ ಪಾಲಿಸಿಯ ಮೇಲೆ ಸುಲಭವಾಗಿ ನೀವು ಸಾಲವನ್ನು ಪಡೆಯಬಹುದು.
ಉತ್ತಮ ಆಯ್ಕೆ ಇದು :
ಇಂದು ವೈಯಕ್ತಿಕ ಸಾಲದಲ್ಲಿ ಬಡ್ಡಿಯು ಅಧಿಕವಾಗಿದ್ದು ಸಾಲ ಮರುಪಾವತಿ ಕಷ್ಟವೇ ಆಗಿದೆ. ಇನ್ನೂ ವೈಯಕ್ತಿಕ ಸಾಲ (Personal Loan) ಗಳ ಮೇಲಿನ ಬಡ್ಡಿ ದರವು ಬ್ಯಾಂಕ್ಅನ್ನು ಅವಲಂಬಿಸಿ ಬದಲಾಗುತ್ತದೆ. ಅದಕ್ಕಾಗಿ ನಾವು ಮಾಡಿದ ಜೀವ ವಿಮೆ (Life Insurance) ಎನ್ನುವುದು ಜೀವಕ್ಕೆ ವಿಮೆ ಒದಗಿಸುವುದಲ್ಲದೆ, ಕಷ್ಟ ಕಾಲ ಬಂದರೆ ಸಾಲದ(Loan) ಸೌಲಭ್ಯವನ್ನು ಕೂಡ ನೀಡಲಿದೆ.
ಸುರಕ್ಷಿತ ಮಾರ್ಗ :
ಈ ಸಾಲವನ್ನು ಪಡೆಯಲು ನಿಮಗೆ ಹೆಚ್ಚಿನ ದಾಖಲೆಗಳು ಅಗತ್ಯ ಕೂಡ ಇಲ್ಲ .ಮತ್ತು ನೀವು ಸುಲಭವಾಗಿ ತ್ವರಿತವಾಗಿ ಸಾಲ (Loan) ಕೂಡ ಪಡೆಯಬಹುದಾಗಿದೆ. ಗ್ರಾಹಕರು ಇಲ್ಲಿಂದ ಕೇವಲ 3ರಿಂದ6 ದಿನಗಳಲ್ಲಿ ತುರ್ತು ಸಾಲ ಪಡೆಯಬಹುದಾಗಿದೆ. ಇದು ವಿಮಾ ಮೊತ್ತ ಮತ್ತು ಅವಧಿಯ ಆಧಾರದಲ್ಲಿ ಸಾಲ ನೀಡುವ ಮೂಲಕ ಈ ಸಾಲ ಅತ್ಯಂತ ಸುರಕ್ಷಿತ ಮಾದರಿಯಾಗಿದೆ.
ಇರಲಿದೆ ಈ ಲಾಭ :
ಅದೇ ರೀತಿ ಈ ಸಾಲಕ್ಕೆ ಯಾವುದೇ ರೀತಿಯಲ್ಲಿ ಪ್ರೊಸೆಸಿಂಗ್ ಚಾರ್ಜ್ (Processing charge) ಅಥವಾ ಹಿಡನ್ ಚಾರ್ಜ್ (Hidden charge) ಕೂಡ ನೀವು ಕಟ್ಟಬೇಕಾಗಿಲ್ಲ
ಆರ್ಜಿ ಹೀಗೆ ಸಲ್ಲಿಕೆ ಮಾಡಿ :
ನೀವು ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಅರ್ಜಿ ಹಾಕಬಹುದು. ಆಫ್ಲೈನ್ ಗಾಗಿ ನೀವು LIC ಕಚೇರಿಗೆ ಹೋಗಿ KYC ದಾಖಲಾತಿಗಳೊಂದಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಬೇಕು. ಅನ್ಲೈನ್ ನಲ್ಲಿ ವೆಬ್ಸೈಟ್ ನೊಂದಣಿಗಾಗಿ LIC https://www.licindia.in/ ಇಲ್ಲಿ ಅರ್ಜಿ ಸಲ್ಲಿಸಿ.