PUC ಪಾಸಾದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ : ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಪ್ರಾರಂಭ

Job opportunities for PUC passed candidates

ನಮಸ್ಕಾರ ಸ್ನೇಹಿತರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಇರುವಂತಹ 2500 ನಿರ್ವಾಹಕ ಹುದ್ದೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೇಮಕಾತಿ ನಡೆಸಲು ಅರ್ಜಿಯನ್ನು ಆಹ್ವಾನಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 19ರಿಂದ ಮೇ 18 ರವರೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ.

Job opportunities for PUC passed candidates
Job opportunities for PUC passed candidates

ಹಾಗಾದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳು :

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಒಟ್ಟು 2500 ನಿರ್ವಾಹಕ ಹುದ್ದೆಗಳು ಖಾಲಿ ಇದ್ದು ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅನುಸೂಚನೆಯನ್ನು ಹೊರಡಿಸಿದೆ. ಹುದ್ದೆಗಳಿಗೆ ಸಂಬಂಧಿಸಿದಂತೆ ವಿವರವನ್ನು ನೋಡುವುದಾದರೆ,

  1. ಉದ್ಯೋಗದ ಸಂಸ್ಥೆ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
  2. ನೇಮಕಾತಿ ಸಂಸ್ಥೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ
  3. ಒಟ್ಟು ಕಾಲಿ ಹುದ್ದೆಗಳು : 2500
  4. ಖಾಲಿ ಇರುವ ಹುದ್ದೆಯ ಹೆಸರು : ಬಸ್ಸು ನಿರ್ವಾಹಕ
  5. ಉದ್ಯೋಗದ ಸ್ಥಳ : ಬೆಂಗಳೂರು
  6. ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಆನ್ಲೈನ್ ಮುಖಾಂತರ
  7. ಮಿಕ್ಕು ಉಳಿದ ವೃಂದದ ಹುದ್ದೆಗಳು : 2286
  8. ಸ್ಥಳೀಯ ವೃಂದದ ಹುದ್ದೆಗಳು :214

ಹೀಗೆ ಒಟ್ಟು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2500 ಹುದ್ದೆಗಳು ಖಾಲಿಯಿದ್ದು ಈ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿ ಸೂಚನೆಯನ್ನು ಹೊರಡಿಸಿದೆ.

ಅರ್ಜಿ ಸಲ್ಲಿಸಲು ಇರುವ ಅರ್ಹತೆ :

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು ಅವುಗಳೆಂದರೆ,

  1. ಪಿಯುಸಿ ಅಥವಾ ತತ್ಸಮನ ವಿದ್ಯಾರ್ಥಿಯನ್ನು ಪಡೆದವರು ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ
  2. ಸಿಬಿಎಸ್ ಅಥವಾ ಐಸಿಎಸ್ಇ ಓದಿದ್ದರು ಕೂಡ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
  3. ಮೂರು ವರ್ಷಗಳ ಡಿಪ್ಲೋಮಾದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ತೆರ್ಗಡೆಯಾಗಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
  4. ಮುಕ್ತ ಬೇಬಿ ಇಂದ ಪಡೆದ ಪಿಯುಸಿ ಅಥವಾ 12ನೇ ತರಗತಿಯ ಅಥವಾ ಜೆ ಓ ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪರಿಗಣಿಸಲಾಗುವುದಿಲ್ಲ.
  5. ಮಾನ್ಯತೆ ಹೊಂದಿರುವ ಮೋಟಾರ್ ವಾಹನ ನಿರ್ವಾಹಕ ಪರವಾನಗಿ ಹಾಗೂ ಬ್ಯಾಡ್ಜನ್ನು ಕೂಡ ಅಭ್ಯರ್ಥಿಗಳು ಹೊಂದಿರಬೇಕು.
  6. 18 ರಿಂದ 35 ವರ್ಷದ ಒಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವೇತನ ಶ್ರೇಣಿ :

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವಂತಹ ಬಸ್ ಕಂಡಕ್ಟರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 18660 ಇಂದ 25300 ರೂಪಾಯಿಗಳವರೆಗೆ ವೇತನ ನಿಗದಿಪಡಿಸಲಾಗಿದ್ದು ಇದರ ಜೊತೆಗೆ ವಿವಿಧ ರೀತಿಯ ಸೌಲತ್ತುಗಳು ಕೂಡ ಅನ್ವಯವಾಗುತ್ತವೆ.

ಇದನ್ನು ಓದಿ : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಿಗ್ ಅಪ್ಡೇಟ್ ! ಈ ತಪ್ಪು ಮಾಡಬೇಡಿ

ವಯಸ್ಸಿನ ಮಿತಿ :

ಬಿಎಂಟಿಸಿ ಬಸ್ ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷಗಳಾಗಿದ್ದು ಗರಿಷ್ಠ ವಯಸ್ಸಿನ ಮಿತಿಯನ್ನು ವರ್ಗಗಳಿಗೆ ಅನುಸಾರವಾಗಿ ನಿಗದಿಪಡಿಸಲಾಗಿದೆ.

  1. 35 ವರ್ಷ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ
  2. 38 ವರ್ಷ 2ಎ 2ಬೀ 3ಎ 3ಬಿ ಅಭ್ಯರ್ಥಿಗಳಿಗೆ.
  3. 45 ವರ್ಷ ಮಾಜಿ ಸೈನಿಕರಿಗೆ
  4. 40 ವರ್ಷಗಳು ಎಸ್ ಸಿ ಎಸ್ ಟಿ ಹಾಗೂ ಪ್ರವರ್ಗವನ್ನು ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿಯಲ್ಲಿ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕದ ವಿವರ :

ಬಿ ಎಂ ಟಿ ಸಿ ಅಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಸಲ್ಲಿಸಬೇಕು ಅರ್ಜಿ ಶುಲ್ಕವನ್ನು ವರ್ಗಗಳಿಗೆ ಅನುಸಾರವಾಗಿ ನಿಗದಿಪಡಿಸಲಾಗಿದೆ.

  1. ಸಾಮಾನ್ಯ ವರ್ಗ ಮತ್ತು 2a 2b 3a 3b ಅಭ್ಯರ್ಥಿಗಳಿಗೆ 750
  2. ಎಸ್ಸಿ ಎಸ್ಟಿ ಪ್ರವರ್ಗ ಒಂದು ಮಾಜಿ ಸೈನಿಕರು ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 500.

ಪ್ರಮುಖ ದಿನಾಂಕಗಳು :

ಬಿಎಂಟಿಸಿ ಅಲ್ಲಿ ಖಾಲಿ ಇರುವ ಬಸ್ ಕಂಡಕ್ಟರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಪ್ರಮುಖ ದಿನಾಂಕಗಳು,

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 19.04.2024
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18-05.2024

ಒಟ್ಟರೆ ಕರ್ನಾಟಕ ಸರ್ಕಾರವು ವಿವಿಧ ಸಂಸ್ಥೆಗಳಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಹಂತ ಹಂತವಾಗಿ ಅರ್ಜಿಗಳನ್ನು ಆಹ್ವಾನ ಮಾಡಲಾಗುತ್ತಿದೆ ಅದರಂತೆ ಇವತ್ತಿನ ಲೇಖನದಲ್ಲಿ ಬಿಎಂಟಿಸಿಯಲ್ಲಿ ಖಾಲಿ ಇರುವಂತಹ ಬಸ್ ಕಂಡಕ್ಟರ್ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು ಈ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಈ ಹುದ್ದೆಗಳ ಬಗ್ಗೆ ಆಸಕ್ತಿಯನ್ನು ಹೊಂದಿದ್ದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

Leave a Reply

Your email address will not be published. Required fields are marked *