ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಎರಡು ರಾಜ್ಯದ ಜನತೆಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಹಲವರು ಯೋಜನೆಗಳನ್ನು ಹಾಗೂ ಹೊಸ ಹೊಸ ಸೂಚನೆಗಳನ್ನು ಜಾರಿಗೆ ತರುತ್ತಿರುತ್ತವೆ. ಅದರಂತೆ ಇದೀಗ ಮೋಸ ಹೋಗುವವರ ಪ್ರಮಾಣ ರಾಜ್ಯದಲ್ಲಿ ಹೆಚ್ಚಾಗಿರುವ ಕಾರಣದಿಂದ ಮೋಸ ಮಾಡುವವರು ಕೂಡ ಅಧಿಕವಾಗುತ್ತಲೇ ಪ್ರಯಾಣಿಸುವ ಇರುತ್ತಾರೆ.
ಇಂದಿನ ದಿನಗಳಲ್ಲಿ ಮನೆಗೆ ಬಂದು ಕಳ್ಳತನ ಮಾಡುವ ಪ್ರಮಾಣಕ್ಕಿಂತಲೂ ಇದೀಗ ನಮಗೆ ಅರಿವಿಲ್ಲದಂತೆ, ಚಿನ್ನ ಫೋನ್ ಹಾಗೂ ನಗದು ದೋಚವ ಪ್ರಮಾಣ ಅಧಿಕವಾಗಿದೆ ಎಂದು ಹೇಳಬಹುದು ಹೀಗೆ ಮೋಸ ಹೋಗುವುದನ್ನು ತಡೆಯುವ ಉದ್ದೇಶದಿಂದ ಅನೇಕ ರೀತಿಯ ಸಂದೇಶಗಳನ್ನು ಆಗಾಗ ಸರ್ಕಾರ ಸಾರ್ವಜನಿಕರಿಗೆ ನೀಡುತ್ತಿದ್ದು ಇದೀಗ ಬಸ್ಸಿನಲ್ಲಿ ಪ್ರಯಾಣ ಮಾಡುವಂತಹ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರುವಂತೆ ಸರ್ಕಾರ ಸೂಚನೆ ನೀಡಿದೆ.
ಬಸ್ಸಿನಲ್ಲಿ ಪ್ರಯಾಣಿ ಮಾಡುವವರಿಗೆ ಅಪಾಯ ತಪ್ಪಿದ್ದಲ್ಲ :
ಸಾರ್ವಜನಿಕರು ದೂರದ ಊರುಗಳಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ಇಲ್ಲದಿದ್ದರೆ ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರಯಾಣ ಮಾಡುವಂತಹ ಸಂದರ್ಭದಲ್ಲಿ ನಮ್ಮ ಕುಟುಂಬಸ್ಥರು ಮನೆಯವರು ಸ್ನೇಹಿತರು ಹಾಗೂ ಪರಿಚಯಿಸ್ತರೊಂದಿಗೆ ಮಾತನಾಡುವುದು ಮಾತ್ರವೇ ಉತ್ತಮವಾಗಿದ್ದು ಅಪರಿಚಿತರು ಎಲ್ಲರೂ ಕೆಟ್ಟವರಲ್ಲ ಎಂದರ್ಥ ಆದರೆ ಎಲ್ಲರೂ ಒಳ್ಳೆಯವರು ಎಂದು ಕೂಡ ಹೇಳಲು ಸಾಧ್ಯವಿಲ್ಲ .
ಹಾಗಾಗಿ ಪ್ರಯಾಣ ಮಾಡುವಂತಹ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರುವುದು ಅತಿ ಅವಶ್ಯಕವಾಗಿದೆ ಇಲ್ಲದಿದ್ದರೆ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇದನ್ನು ಓದಿ : ಕೇಂದ್ರ ಸರ್ಕಾರದ ಈ ಒಂದು ಯೋಜನೆಯಲ್ಲಿ ಬಡವರಿಗೆ ಸಿಗಲಿದೆ 10 ಲಕ್ಷ ಈ ಕೂಡಲೇ ಅರ್ಜಿ ಸಲ್ಲಿಸಿ
ಮೋಸದ ಸಂಖ್ಯೆ ರೈಲಿನಲ್ಲಿಯೂ ಹೆಚ್ಚಾಗುತ್ತಿದೆ :
ಟ್ರೈನಿನಲ್ಲಿ ಆಗಾಗ ಕರ್ನಾಟಕದಿಂದ ಗೋವಾಕ್ಕೆ ಹೋಗುವ ಪ್ರಯಾಣಿಕರಿಗೆ ಮೋಸ ಆಗುತ್ತದೆ ಅದರಲ್ಲಿಯೂ ಪ್ರಯಾಣಿಕರಿಗೆ ಚಾಕಲೇಟ್ ನೀಡಿ ಪ್ರಜ್ಞೆ ತಪ್ಪಿಸಿ ಅವರ ನಗದು ಚಿನ್ನವನ್ನು ಎಸ್ಕೇಪ್ ಮಾಡಲಾಗುತ್ತಿದ್ದು ಇದಕ್ಕೆ ಚಾಕಲೇಟ್ ಗ್ಯಾಂಗ್ ಎಂದು ಸಹ ಹೆಸರನ್ನು ಇಡಲಾಗಿದೆ. ಕೇಂದ್ರ ಸರ್ಕಾರವು ಈ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದು ಅಪರಿಚಿತರಿಂದ ಆಹಾರ ಪದಾರ್ಥಗಳನ್ನು ಗೋವಾ ಹಾಗೂ ಇತರ ಭಾಗಗಳಲ್ಲಿ ಪ್ರಯಾಣ ಮಾಡುವಂತಹ ಸಂದರ್ಭದಲ್ಲಿ ಸ್ವೀಕಾರ ಮಾಡುವಾಗ ಎಚ್ಚರ ವಹಿಸಬೇಕೆಂದು ತಿಳಿಸಲಾಗಿದೆ.
ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ಮತ್ತೊಂದು ಹೊಸ ತೊಂದರೆ :
ಸದ್ಯದೀಗ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ದಿನದಿಂದ ಪ್ರಯಾಣ ಮಾಡುವವರ ಸಂಖ್ಯೆ ಸರ್ಕಾರಿ ಬಸ್ಗಳಲ್ಲಿ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಸರ್ಕಾರಿ ಮಸಾಲ ಕೆಎಸ್ಆರ್ಟಿಸಿಯಲ್ಲಿ ಪ್ರಯಾಣ ಮಾಡುವಂತಹ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರ ವಹಿಸುವುದು ಅಗತ್ಯವಾಗಿದ್ದು.
ಇದೀಗ ಜ್ಯೂಸ್ ಗ್ಯಾಂಗ್ ಒಂದು ಬೆಳಗಾವಿ ಯಾಕೆ ಕೆಎಸ್ಆರ್ಟಿಸಿ ಬಸ್ ನಲ್ಲಿ ಪತ್ತೆಯಾಗಿದ್ದು ಜ್ಯೂಸ್ ಮತ್ತು ಬಾಳೆಹಣ್ಣುಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ನಶೆ ಪದಾರ್ಥಗಳನ್ನು ಅದರಲ್ಲಿ ಮಿಕ್ಸ್ ಮಾಡಿ ಪ್ರಯಾಣಿಕರಿಗೆ ಪ್ರಜ್ಞೆ ತಪ್ಪಿಸಿ ಪ್ರಯಾಣಿಕರ ಹಣ ಬಂಗಾರ ಇತ್ಯಾದಿ ಬೆಲೆಬಾಳುವಂತಹ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದು ಸರ್ಕಾರದ ಗಮನಕ್ಕೆ ಬಂದಿದೆ. ಹಾಗಾಗಿ ಸಾರ್ವಜನಿಕರಿಗೆ ಇದೀಗ ಎಚ್ಚರಿಕೆಯ ಸಂದೇಶ ಒಂದನ್ನು ರಾಜ್ಯ ಸರ್ಕಾರ ಹೊರಡಿಸಿದೆ.
ಪ್ರಕರಣದ ವಿವರಣೆ ನೋಡುವುದಾದರೆ :
ಸಂಜೀವಕೋತ ಎನ್ನುವವರು ಬೆಳಗಾವಿಯ ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಬಾಳೆಹಣ್ಣು ಮತ್ತು ಜ್ಯೂಸ್ ಮಾರಾಟ ಮಾಡುವವರಿಂದ ಪದಾರ್ಥಗಳನ್ನು ಖರೀದಿಸಿ ಸೇವಿಸಿ ಮೂರ್ಚೆ ಹೋಗಿದ್ದಾರೆ, ಕೇವಲ ಇವರು ಮಾತ್ರವಲ್ಲದೆ ಇವರೊಂದಿಗೆ ಮತ್ತೊಬ್ಬರು ಕೂಡ ಸೇರಿ 14 ಗಂಟೆಗಳವರೆಗೆ ಪ್ರಜ್ಞೆ ಗೆ ತಪ್ಪಿದ್ದು ಅದಾದ ನಂತರ ಪ್ರಗ್ನೆ ಬಂದಿದೆ ಆದರೆ ಅವರ ಬಳಿ ಇದ್ದಂತಹ ಬೆಲೆಬಾಳುವಂತಹ ಫೋನ್ ಹಣ ಪರ್ಸ್ ಚೈನ್ ಎಲ್ಲವೂ ಕೂಡ ಕಾಣೆಯಾಗಿದ್ದು ತಿಳಿದು ಬಂದಿದ್ದು .
ಇದು ಜ್ಯೂಸ್ ಗ್ಯಾಂಗ್ ನ ಕರಾಮತ್ತು ಎಂಬುದು ಎಲ್ಲರಿಗೂ ತಿಳಿದು ಬಂದಿದೆ ಹಾಗಾಗಿ ಸಂಜೀವ್ ಹೋತ ಮತ್ತು ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಇದೀಗ ಪೊಲೀಸರು ಎಲ್ಲಾ ಆಯಾಮದಲ್ಲಿಯೂ ಕೂಡ ಜ್ಯೂಸ್ ಗ್ಯಾಂಗ್ ಪರಿಶೀಲನೆ ನಡೆಸಲು ಚಿಂತಿಸುತ್ತಿದ್ದಾರೆ.
ಒಟ್ಟಾರೆ ರಾಜ್ಯದಲ್ಲಿ ಇದೀಗ ಕೆ ಎಸ್ ಆರ್ ಟಿ ಸಿ ಯಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಕಳ್ಳತನ ಮಾಡುವವರಿಗೆ ಇದೊಂದು ರೀತಿಯಲ್ಲಿ ಸುದ್ದಿಯಾಗಿದೆ.
ಹಾಗಾಗಿ ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣ ಮಾಡುವ ಪ್ರತಿಯೊಬ್ಬರು ಕೂಡ ಬಹಳ ಎಚ್ಚರಿಕೆಯಿಂದ ಪ್ರಯಾಣ ಮಾಡಬೇಕೆಂದು ಸರ್ಕಾರವು ತಿಳಿಸಿದೆ ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಬಸ್ಗಳಲ್ಲಿ ಇದೀಗ ಕಳ್ಳತನ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿ ಧನ್ಯವಾದಗಳು.