ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವಂತಹ ವಿಷಯ ಏನೆಂದರೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ನಲ್ಲಿ ಇರುವಂತಹ ಮಾಹಿತಿಗಳು ಏನಾದರೂ ಒಂದು ವೇಳೆ ತಪ್ಪಿದ್ದರೆ ಆಗ ಮೂರು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ತಕ್ಷಣವೇ ನವೀಕರಣ ಮಾಡುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ಭಾರತದಲ್ಲಿ ಇಂದು ವಾಸಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಆಧಾರ್ ಕಾರ್ಡ್ ಹೊಂದಿರಬೇಕು ಅಲ್ಲದೆ ಇದೊಂದು ಪ್ರಮುಖ ದಾಖಲೆಯಾಗಿದೆ ಯಾವುದೇ ಸರಕಾರಿ ಕೆಲಸ ಅಥವಾ ಖಾಸಗಿ ಕೆಲಸವನ್ನು ಆಧಾರ್ ಕಾರ್ಡ್ ಇಲ್ಲದೆ ಮಾಡಲು ಸಾಧ್ಯವಿಲ್ಲ. ಸರ್ಕಾರ ಜಾರಿಗೆ ತರುವಂತಹ ಯೋಜನೆಗಳು ಅಥವಾ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಅಥವಾ ಮಗುವನ್ನು ಶಾಲೆಗೆ ಸೇರಿಸುವುದು ಒಳಗೊಂಡಂತೆ ಆಧಾರ್ ಕಾರ್ಡ್ ನಲ್ಲಿ ಇರುವಂತಹ ವಿವರಗಳನ್ನು ನಾವು ಸರಿಯಾಗಿ ಹೊಂದಿರುವುದು ಅತ್ಯಂತ ಪ್ರಮುಖ ವಿಷಯವಾಗಿದೆ.
ಆಧಾರ್ ಕಾರ್ಡ್ ನಲ್ಲಿ ಮಾಹಿತಿಗಳು ತಪ್ಪಾಗಿದ್ದರೆ ಮೂರು ವರ್ಷ ಜೈಲು ಶಿಕ್ಷೆ :
ಸರ್ಕಾರದ ಯೋಜನೆಗಳು ಹಾಗೂ ಅನೇಕ ರೀತಿಯ ಕೆಲಸಗಳನ್ನು ಮಾಡಬೇಕಾದರೆ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿ ಕೆಲಸ ನಿರ್ವಹಿಸುತ್ತದೆ ಹಾಗಾಗಿ ಆಧಾರ್ ಕಾರ್ಡ್ ನಲ್ಲಿ ಇರುವಂತಹ ವಿವರಗಳು ಸರಿಯಾಗಿರುವುದು ಅತ್ಯಂತ ಪ್ರಮುಖವಾಗಿದ್ದು ಇದಷ್ಟೇ ಇಲ್ಲದೆ ಆಧಾರ್ ಕಾರ್ಡ್ ಅನ್ನು ಮಾಡಿಸುವಂತಹ ಸಂದರ್ಭದಲ್ಲಿ ತಪ್ಪು ಬಯೋಮೆಟ್ರಿಕ್ ನೀಡುವುದು ಕೂಡ ಅಪರಾಧವಾಗಿದೆ. ಆಧಾರ್ ಕಾರ್ಡ್ ನಲ್ಲಿ ಇರುವಂತಹ ಹೆಸರು ಜನ್ಮ ದಿನಾಂಕ ಮತ್ತು ಲಿಂಗವನ್ನು ನೀವೇನಾದರೂ ತಪ್ಪಾಗಿ ತಿಳಿಸಿದ್ದರೆ ಆಗ ಮೂರು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಇಲ್ಲದಿದ್ದರೆ ಹತ್ತು ಸಾವಿರ ರೂಪಾಯಿಗಳವರೆಗೆ ದಂಡವನ್ನು ಅಥವಾ ಈ ಎರಡನ್ನು ಎದುರಿಸಬೇಕಾಗುತ್ತದೆ.
ಅಂತಹ ಪರಿಸ್ಥಿತಿಯಲ್ಲಿ ಯಾವುದಾದರೂ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಏನಾದರೂ ವಿವರಗಳು ತಪ್ಪಾಗಿದ್ದರೆ ತಕ್ಷಣವೇ ಆಧಾರ್ ಕಾರ್ಡ್ ಅನ್ನು ನವೀಕರಿಸುವುದು ಉತ್ತಮ. ಆಧಾರ್ ಕಾರ್ಡ್ ನಲ್ಲಿ ಯುಐಡಿಎಐ ಹೆಸರು ಜನ್ಮ ದಿನಾಂಕ ಮತ್ತು ಲಿಂಗದಲ್ಲಿ ಬದಲಾವಣೆ ಮಾಡುವಂತಹ ಪ್ರಕ್ರಿಯೆಯನ್ನು ಸುಲಭಗೊಳಿಸಲಾಗಿದ್ದು ಆನ್ಲೈನ್ ಮೂಲಕವೇ ಈ ಕೆಲಸವನ್ನು ಮನೆಯಲ್ಲಿಯೇ ಕುಳಿತು ಮಾಡಬಹುದಾಗಿದೆ ಈ ಕೆಲಸಕ್ಕಾಗಿ ಎಲ್ಲಿಯೂ ಹೊರಗಡೆ ಹೋಗುವ ಅಗತ್ಯವಿಲ್ಲ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸುವುದರ ಮೂಲಕ ಆನ್ಲೈನಲ್ಲಿ ಮನೆಯಲ್ಲಿಯೇ ಕುಳಿತು ಆಧಾರ್ ಕಾರ್ಡ್ ನಲ್ಲಿ ಇರುವಂತಹ ವಿವರಗಳನ್ನು ಸರಿಪಡಿಸಬಹುದು.
ಇದನ್ನು ಓದಿ : Post Office : ದೇಶದ ಎಲ್ಲಾ ಜನರು ತಪ್ಪದೆ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು
ಆಧಾರ್ ಕಾರ್ಡ್ ನಲ್ಲಿ ಹೆಸರನ್ನು ಬದಲಾವಣೆ ಮಾಡುವ ವಿಧಾನ :
ಆಧಾರ್ ಕಾರ್ಡ್ ನಲ್ಲಿ ಇರುವಂತಹ ವಿವರಗಳನ್ನು ಸರಿಯಾದ ರೀತಿಯಲ್ಲಿ ನವೀಕರಿಸಬೇಕಾದರೆ ಅಥವಾ ಹೆಸರು ಜನ್ಮ ದಿನಾಂಕ ಮತ್ತು ಲಿಂಗ ದಲ್ಲಿ ಬದಲಾವಣೆ ಮಾಡುವ ಪ್ರಕ್ರಿಯೆಯನ್ನು ಮಾಡಬೇಕಾದರೆ ಮೊದಲು ಯುಐಡಿಎಐನಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ಆಧಾರ್ ವೆಬ್ ಸೈಟ್ ಗೆ ಮೊದಲು ಭೇಟಿ ನೀಡಬೇಕು.
- https://ssup.uidai.gov.in
- ಈ ವೆಬ್ ಸೈಟ್ಗೆ ಭೇಟಿ ನೀಡಿದ ನಂತರ ಆಧಾರದ ನವೀಕರಿಸಿ ಎಂಬ ಆಯ್ಕೆಯ ನಿಮಗೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.
- ಅದಾದ ನಂತರ ನಿಮಗೆ ಮತ್ತೊಂದು ಪುಟ ತೆಗೆಯುತ್ತದೆ ಅದರಲ್ಲಿ 12 ಅಂಕಿಯ ಆಧಾರ ಸಂಖ್ಯೆಗಳನ್ನು ಲಾಗಿನ್ ಮಾಡಬೇಕು.
- ಅದಾದ ನಂತರ ಪರಿಧಿಯ ಮೇಲೆ ನೀಡಲಾದಂತಹ ಕ್ಯಾಪ್ಚ ಕೂಡನ್ನು ಭರ್ತಿ ಮಾಡಿ ಸೆಂಡ್ ಒಟಿಪಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
- ನೊಂದಾಯಿತ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ.
- ಓಟಿಪಿಯನ್ನು ನಮೂದಿಸಿದ ನಂತರ ನಿಮಗೆ ಮತ್ತೊಂದು ಹೊಸ ಪುಟ ತೆರೆಯುತ್ತದೆ.
- ಹೊಸ ಪುಟ್ಟ ತೆರೆದ ನಂತರ ಅದರಲ್ಲಿ ನಿಮ್ಮ ವಿಳಾಸ ಹುಟ್ಟಿದ ದಿನಾಂಕ ಹೆಸರು ಮತ್ತು ಲಿಂಗ ಹಾಗೂ ಇತರ ಹಲವು ಮಾಹಿತಿಗಳನ್ನು ಒಳಗೊಂಡಂತೆ ನಿಮ್ಮ ವೈಯಕ್ತಿಕ ವಿವರಗಳನ್ನು ನೀವು ನೋಡಬಹುದು.
- ಅದಾದ ನಂತರ ನಿಮ್ಮ ಸಂಖ್ಯೆಯ ಮೇಲೆ ಪರಿಶೀಲಿಸಿ ಓಟಿಪಿ ಬರುತ್ತದೆ ಅದನ್ನು ಪರಿಶೀಲಿಸಿ ಮತ್ತು ಬದಲಾವಣೆಯನ್ನು ಉಳಿಸಬಹುದು.
ಹೀಗೆ ಈ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ ನೀವು ಆಧಾರ್ ಕೇಂದ್ರದಲ್ಲಿ ಇರುವಂತಹ ಅಧಿಕಾರಿಗಳಿಗೆ ಭೇಟಿ ನೀಡುವುದರ ಮೂಲಕ ನಿಮ್ಮ ಬಯೋಮೆಟ್ರಿಕ್ ವಿವರಗಳನ್ನು ತೆಗೆದುಕೊಳ್ಳಲಾಗುತ್ತದೆ ನಂತರ ಅವರು ಅವುಗಳನ್ನು ಪರಿಶೀಲಿಸುತ್ತಾರೆ. ಅದಾದ ನಂತರ ನಿಮ್ಮ ಬೆರಳಚ್ಚು ಸ್ಕ್ಯಾನ್ ಅನ್ನು ಸೇರಿಸಿರುತ್ತಾರೆ. ಅದಾದ ನಂತರ ನಿಮ್ಮ ಫಾರ್ಮ್ ಅನ್ನು ಪರಿಶೀಲಿಸಿ, ದೃಢೀಕರಣ ಮಾಡಲಾಗುತ್ತದೆ. ಹೀಗೆ ಡಾಕುಮೆಂಟ್ ಎಲ್ಲವು ಸರಿಯಾಗಿದ್ದರೆ ನಿಮ್ಮ ಜನ್ಮ ದಿನಾಂಕ ಹೆಸರು ಲಿಂಗವನ್ನು ನವೀಕರಿಸಲಾಗುತ್ತದೆ ಇದಕ್ಕೆ ನೀವು ರೂ.50 ಶುಲ್ಕವನ್ನು ಪಾವತಿ ಮಾಡಬೇಕು.
ಒಟ್ಟಾರೆ ಆಧಾರ್ ಕಾರ್ಡ್ ನಲ್ಲಿ ಇರುವಂತಹ ವಿವರಗಳನ್ನು ಸರಿಯಾದ ರೀತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಹೊಂದಿರಬೇಕು ಒಂದು ವೇಳೆ ಆಧಾರ್ ಕಾರ್ಡ್ ನಲ್ಲಿ ಇರುವಂತಹ ಹೆಸರು ಜನ್ಮ ದಿನಾಂಕ ತಪ್ಪಾಗಿದ್ದರೆ ಖಂಡಿತವಾಗಿಯೂ 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಹಾಗಾಗಿ ತಕ್ಷಣವೇ ನಿಮ್ಮ ಆಧಾರ್ ಕಾರ್ಡ್ ಏನಾದರೂ ಹಳೆಯದಾಗಿದ್ದರೆ ನವೀಕರಿಸುವುದು ಉತ್ತಮ ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರು ಕೂಡ ಆಧಾರ್ ಕಾರ್ಡ್ ನಲ್ಲಿ ಇರುವಂತಹ ವಿವರಗಳನ್ನು ನವೀಕರಿಸಲಿ ಇದರಿಂದ ಅವರು ಕೂಡ ಯಾವುದೇ ರೀತಿಯ ತೊಂದರೆಯನ್ನು ಅನುಭವಿಸದಂತೆ ಆಗುತ್ತದೆ ಧನ್ಯವಾದಗಳು.