ನಮಸ್ಕಾರ ಸ್ನೇಹಿತರೇ, ದೇಶದಲ್ಲಿ ಮಹಿಳೆಯರಿಗಾಗಿಯೇ ಅನೇಕ ರೀತಿಯ ಯೋಚನೆಗಳನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಎರಡು ಪರಿಚಯಿಸುತ್ತಿದೆ. ಅದರಲ್ಲಿ ಮುಖ್ಯವಾಗಿ ಮಹಿಳೆಯರ ಸಬಲೀಕರಣವನ್ನು ಕೇಂದ್ರ ಸರ್ಕಾರದಿಂದ ಜಾರಿಯಾಗಿರುವ ಕೆಲವು ಪ್ರಮುಖ ಯೋಜನೆಗಳು ಪ್ರೋತ್ಸಾಹಿಸುತ್ತಿವೆ. ಅದೇ ರೀತಿ ಹೆಣ್ಣು ಮಕ್ಕಳ ಸ್ವತಂತ್ರ ಬದುಕನ್ನು ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಕೂಡ ರೂಪಿಸಲಾಗಿದೆ ಎಂದು ಹೇಳಬಹುದು.
ಇದೀಗ ಇಂತಹ ಮಹಿಳೆಯರು ಕೇಂದ್ರ ಸರ್ಕಾರದಿಂದ 11,000ಗಳನ್ನು ಉಚಿತವಾಗಿ ಪಡೆದುಕೊಳ್ಳಲು ಸಾಧ್ಯವಿದೆ. ಹಾಗಾದರೆ ಕೇಂದ್ರ ಸರ್ಕಾರದಿಂದ ಯಾವ ಮಹಿಳೆಯರಿಗೆ 11000ಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಈ ಯೋಜನೆಗೆ ಸಂಬಂಧಿಸಿದಂತೆ ಮಹಿಳೆಯರು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನೋಡಬಹುದು.
ಪ್ರಧಾನ ಮಂತ್ರಿ ಮಾತೃತ್ವ ವಂದನ ಯೋಜನೆ :
ಕೇಂದ್ರ ಸರ್ಕಾರವು ಗರ್ಭಿಣಿ ಸ್ತ್ರೀಯರಿಗಾಗಿ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಆ ಯೋಜನೆಯ ಮೂಲಕ ಮಹಿಳೆಯರು ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದಾಗಿದೆ. ಹಂತ ಹಂತವಾಗಿ ಪ್ರಧಾನಮಂತ್ರಿ ಮಾತೃತ್ವ ವಂದನ ಯೋಜನೆಯ ಅಡಿಯಲ್ಲಿ ಗರ್ಭಿಣಿ ಸ್ತ್ರೀಯರು ಸರ್ಕಾರದಿಂದ 11,000ಗಳನ್ನು ಪಡೆಯಬಹುದಾಗಿದೆ. ಈ ಯೋಜನೆಯ ಫಲಾನುಭವಿಗಳು ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ಮಹಿಳೆಯರು ಆಗಿರುತ್ತಾರೆ.
- ತಮ್ಮ ಹೊಟ್ಟೆಯಲ್ಲಿ ಇರುವ ಮಗುವಿಗಾಗಿ ಅಥವಾ ಮಗು ಹುಟ್ಟಿದ ನಂತರ ಹಸು-ಗುಸಿದಾಗಲಿ, ಸರಿಯಾದ ಪೌಷ್ಟಿಕ ಆಹಾರವನ್ನು ಬಡತನದಿಂದ ಇರುವ ಗರ್ಭಿಣಿ ಸ್ತ್ರೀಯರು ಒದಗಿಸಲು ಸಾಧ್ಯವಿಲ್ಲ ಅಥವಾ ಪೌಷ್ಠಿಕ ಆಹಾರ ಸೇವನೆ ಮಾಡದೆ ಗರ್ಭಿಣಿ ಸ್ತ್ರೀ ಇದ್ದರೆ ಉತ್ತಮ ರೀತಿಯಲ್ಲಿ ಮಗು ಆರೋಗ್ಯಕರವಾಗಿ ಬೆಳವಣಿಗೆ ಆಗುವುದಿಲ್ಲ.
- ಈ ಕಾರಣದಿಂದಾಗಿ 2017ರಲ್ಲಿ ಸರ್ಕಾರವು ಗರ್ಭಿಣಿ ಸ್ತ್ರೀಯರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆ ಮೂಲಕ 11,000ಗಳನ್ನು ಗರ್ಭಿಣಿ ಸ್ತ್ರೀಯರು 3 ಹಂತಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ಹಣವನ್ನು ಗರ್ಭಿಣಿ ಎಂದು ತಿಳಿದ ನಂತರ ಮಗು ಆದ ನಂತರ ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಇದನ್ನು ಓದಿ : ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ : ತಕ್ಷಣ ಅಪ್ಲೈ ಮಾಡಿ ಇಲ್ಲಿದೆ ಲಿಂಕ್
3 ಹಂತಗಳಲ್ಲಿ ಹಣ ವರ್ಗಾವಣೆ :
ಪ್ರಧಾನಮಂತ್ರಿ ಮಾತೃತ್ವ ವಂದನ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಮೂರು ಹಂತಗಳಲ್ಲಿ 11,000ಗಳ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.
- ಗರ್ಭಿಣಿ ಸ್ತ್ರೀಯರಿಗೆ ಪ್ರಧಾನ ಮಂತ್ರಿ ಮಾತೃತ್ವ ಬಂಧನ ಯೋಜನೆಯ ಅಡಿಯಲ್ಲಿ ಎರಡು ಕಂತುಗಳಲ್ಲಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
- 5000ಗಳನ್ನು ಗರ್ಭಿಣಿ ಇರುವಾಗ ಹಾಗೂ ಆರು ಸಾವಿರ ರೂಪಾಯಿಗಳನ್ನು ಮಗು ಆದ ನಂತರ ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.
ಪ್ರಧಾನಮಂತ್ರಿ ಮಾತೃತ್ವ ವಂದನಾ ಯೋಜನೆಯ ಅರ್ಹತೆಗಳು :
- ಪ್ರಧಾನಮಂತ್ರಿ ಮಾತೃತ್ವ ವಂದನ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಸ್ತ್ರೀ ಮೊದಲು ಭಾರತೀಯ ನಾಗರಿಕಳಾಗಿರಬೇಕು.
- 19 ವರ್ಷದ ನಂತರ ಮದುವೆಯಾದ ಸ್ತ್ರೀ ಗರ್ಭಿಣಿಯಾದಾಗ ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ.
- ಗರ್ಭಿಣಿ ಸ್ತ್ರೀಯರು ಮತ್ತು ಹಾಲುಣಿಸುವ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಬಹುದು.
ನೋಂದಣಿ ಮಾಡಿಕೊಳ್ಳಲು ಬೇಕಾಗುವ ದಾಖಲೆಗಳು :
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಗೆ ಮಹಿಳೆಯರು ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬೇಕಾದರೆ ಪ್ರಮುಖ ದಾಖಲೆಗಳನ್ನು ಹೊಂದುವ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಗೆ ಮಹಿಳೆಯರು ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬೇಕಾದರೆ ಪ್ರಮುಖ ದಾಖಲೆಗಳನ್ನು ಹೊಂದಬೇಕಾಗುತ್ತದೆ ಆಗ ಮಾತ್ರ ಈ ಯೋಜನೆ ಫಲಾನುಭವಿಗಳಾಗಲು ಸಾಧ್ಯ.
- ಗರ್ಭಿಣಿ ಸ್ತ್ರೀಯ ಆಧಾರ್ ಕಾರ್ಡ್
- ಮಗು ಜನಿಸಿದ ನಂತರ ಜನನ ಪ್ರಮಾಣ ಪತ್ರ
- ವಿಳಾಸದ ಪುರಾವೆ
- ಬ್ಯಾಂಕ್ ಖಾತೆಯ ವಿವರಗಳು
- ಆದಾಯ ಪ್ರಮಾಣ ಪತ್ರ
- ಗರ್ಭಿಣಿ ಆಗಿರುವುದಕ್ಕೆ ಆಸ್ಪತ್ರೆಯಿಂದ ನೀಡಲಾದ ಧೃಡೀಕರಣ ಪ್ರಮಾಣ ಪತ್ರ
- ಗರ್ಭಿಣಿ ಸ್ತ್ರೀಯ ಪಾಸ್ಪೋರ್ಟ್ ಸೈಜ್ ಫೋಟೋ
ಹೀಗೆ ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದುವುದರ ಮೂಲಕ ಈ ಯೋಜನೆಗೆ ಮಹಿಳೆಯರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ :
ಕೇಂದ್ರ ಸರ್ಕಾರದ ಮಾತೃತ್ವ ವಂದನೆ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಮಹಿಳೆಯರು ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://pmmvy.wcd.gov.in/ಈ ವೆಬ್ಸೈಟ್ಗೆ ಭೇಟಿ ನೀಡಿದ ನಂತರ ಅದರಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಪ್ರಧಾನಮಂತ್ರಿ ಮಾತೃತ್ವ ವಂದನ ಯೋಜನೆಗೆ ಸಲ್ಲಿಸಿ ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದು.
ಒಂದು ವೇಳೆ ಈ ಯೋಜನೆಗೆ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಆಶಾ ಕಾರ್ಯಕರ್ತೆಯರ ಬಳಿ ಗರ್ಭಿಣಿ ಆಗಿರುವುದರ ಬಗ್ಗೆ ಮಾಹಿತಿಯನ್ನು ನೀಡಿ ಆಫ್ಲೈನ್ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟಾರೆ ಕೇಂದ್ರ ಸರ್ಕಾರವು ಬಡ ಕುಟುಂಬದಲ್ಲಿ ಗರ್ಭಿಣಿಯಾಗಿರುವಂತಹ ಮಹಿಳೆಯರಿಗೆ ಸರಿಯಾದ ರೀತಿಯ ಪೋಷ್ಟಿಕಾಂಶದ ಆಹಾರಗಳು ಸಿಗಬೇಕೆಂದು ದೇಶದಿಂದ ಪ್ರಧಾನಮಂತ್ರಿ ಮಾತೃತ್ವ ವಂದನ ಯೋಜನೆಗೆ ಅರ್ಜಿ ಸಲ್ಲಿಸಿ ಸರ್ಕಾರದಿಂದ 11,000 ಹಣವನ್ನು ಎರಡು ಕಂತುಗಳಲ್ಲಿ ಪಡೆಯಬಹುದಾಗಿದೆ.
ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಗರ್ಭಿಣಿ ಸ್ತ್ರೀಯರಾಗಿದ್ದರೆ ಅಥವಾ ಅವರಿಗೆ ತಿಳಿದಿರುವ ಗರ್ಭಿಣಿ ಸ್ತ್ರೀಯರಿಗೆ ಈ ಮಾಹಿತಿಯನ್ನು ಅವರು ಕೂಡ ತಿಳಿಸಲಿ ಧನ್ಯವಾದಗಳು.
ಇತರೆ ವಿಷಯಗಳು :
- ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕಾತಿ : ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ
- ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನೇಮಕಾತಿಗೆ ಅಧಿಸೂಚನೆ : ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಅಹ್ವಾನ
ಯಾರಿಗೆ ಹಣ ಸಿಗುತ್ತೆ …?
ಮಹಿಳೆಯರಿಗೆ ಮಾತ್ರ.
ಯಾವ ಸರ್ಕಾರದಿಂದ ಯೋಜನೆ ಹಣ ಸಿಗುತ್ತೆ ..?
ಕೇಂದ್ರ ಸರ್ಕಾರದಿಂದ ಯೋಜನೆ ಹಣ ಸಿಗುತ್ತೆ.