ರಾಜ್ಯದಲ್ಲಿ ಈ ದಿನದಿಂದ ಮಾನ್ಸೂನ್ ಆರ್ಭಟ : ಹವಾಮಾನ ಇಲಾಖೆಯಿಂದ ಮುಂಗಾರು ಮಳೆ ಪ್ರಾರಂಭದ ಮುನ್ಸೂಚನೆ
ನಮಸ್ಕಾರ ಸ್ನೇಹಿತರೆ , ಇವತ್ತಿನ ಲೇಖನದಲ್ಲಿ ಭಾರತೀಯ ಹವಾಮಾನ ಇಲಾಖೆಯೂ ಮುಂಗಾರು ಮಳೆ ಯಾವಾಗ ಪ್ರಾರಂಭವಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿರುವುದರ ಬಗ್ಗೆ ಹೇಳಲಾಗುತ್ತಿದೆ. ಸಾಮಾನ್ಯಕ್ಕಿಂತ ಹೆಚ್ಚು ಮುಂಗಾರು ಮಳೆ, ಈ ಬಾರಿ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮುಂಗಾರು ಮಾರುತಗಳು ಕಳೆದ ವರ್ಷ 2023ರಲ್ಲಿ ಜೂನ್ 8ರಂದು ಕೇರಳ ಪ್ರವೇಶ ಮಾಡಿದ್ದವು ಅಂದರೆ ಸಾಮಾನ್ಯ ಪ್ರವೇಶದ ದಿನಕ್ಕಿಂತ ಏಳು ದಿನಗಳ ವಿಳಂಬವಾಗಿ ಮುಂಗಾರುಮಳೆಯ ಆಗಮನವಾಗಿತ್ತು. ಆ ಸಂದರ್ಭದಲ್ಲಿ ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ಬಿಪ…