ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಶಕ್ತಿ ಯೋಜನೆಯ ಬಗ್ಗೆ ಹೊಸ ನಿಯಮ ಜಾರಿಯಾಗಿರುವುದರ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಹೊಸ ನಿಯಮವನ್ನು ಶಕ್ತಿ ಯೋಜನೆಯ ಅಡಿಯಲ್ಲಿ ಜಾರಿಯಾಗಿರುವಂತೆ ಸಂಪೂರ್ಣವಾಗಿ ಇವತ್ತಿನ ಲೇಖನದಲ್ಲಿ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಕೂಡ ಒಂದಾಗಿದೆ ಶಕ್ತಿ ಯೋಜನೆಯಿಂದ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಅದರಂತೆ ಇದೀಗ ಈ ಯೋಜನೆಯಲ್ಲಿ ಹೊಸ ನಿಯಮ ಒಂದನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ್ದು ಆ ನಿಯಮ ಏನು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಬಹುದು.
ರಾಜ್ಯ ಸರ್ಕಾರದ ಶಕ್ತಿ ಯೋಜನೆ :
ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು ಅದರಂತೆ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷವು ಒಂದಾದ ನಂತರ ಒಂದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಆ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಯು ಕೂಡ ಒಂದಾಗಿದೆ. ಶಕ್ತಿ ಯೋಜನೆಯ ಮೂಲಕ ಬಸ್ಸಿನಲ್ಲಿ ಉಚಿತವಾಗಿ ಕೋಟ್ಯಾಂತರ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿಯೇ ಪ್ರಯಾಣ ಮಾಡುವಂತಹ ಅವಕಾಶವನ್ನು ರಾಜ್ಯ ಸರ್ಕಾರ ಕಲ್ಪಿಸಿದ್ದು ಈ ರೀತಿಯ ಒಂದು ಯೋಜನೆ ಸಾಕಷ್ಟು ತಿಂಗಳಿನಿಂದಲೂ ಜಾರಿಯಲ್ಲಿದೆ. ಇದುವರೆಗೂ ಕೂಡ ಕೋಟ್ಯಂತರ ಮಹಿಳೆಯರು ಸಾಕಷ್ಟು ಖಳಗಳಿಗೂ ಭೇಟಿ ನೀಡಿದ್ದಾರೆ ಏಕೆಂದರೆ ಕರ್ನಾಟಕದಲ್ಲಿ ಉಚಿತವಾಗಿ ಎಲ್ಲಿ ಬೇಕಾದರೂ ಕೂಡ ಬಸ್ಸಿನಲ್ಲಿ ಪ್ರಯಾಣ ಮಾಡಬಹುದು.
ಹಲವಾರು ತಿಂಗಳು ನಿಂದಲೇ ಉಚಿತ ಪ್ರಯಾಣವಾದ ಕಾರಣದಿಂದ ಮಹಿಳೆಯರು ಇದುವರೆಗೂ ಕೂಡ ಉಚಿತವಾಗಿಯೇ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಬಹುದು. ಉಚಿತ ಪ್ರಯಾಣವನ್ನು ಆಧಾರ್ ಕಾರ್ಡ್ ತೋರಿಸಿದರೆ ಮಾತ್ರ ಮಾಡಬಹುದಾಗಿತ್ತು ಇದುವರೆಗೂ ಈ ನಿಯಮವಿದ್ದು ಕಂಡಕ್ಟರ್ ಗಳಿಗೆ ಆಧಾರ್ ಕಾರ್ಡ್ ಗಳನ್ನು ತೋರಿಸಿ ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಬಹುದಾಗಿದೆ. ಕಂಡಕ್ಟರ್ಗಳು ಕೂಡ ಟಿಕೆಟ್ ಗಳನ್ನು ವಿತರಣೆ ಮಾಡುತ್ತಾರೆ.
ಆ ಟಿಕೆಟ್ಗಳನ್ನು ಕೂಡ ಪಡೆದು ಯಾವುದೇ ತೊಂದರೆಗಳು ಹಾಗೂ ಸಮಸ್ಯೆಗಳಿಲ್ಲದೆ ತಲುಪ ಬೇಕಾಗಿರುವಂತಹ ಸ್ಥಳದವರೆಗೂ ಉಚಿತವಾಗಿ ಪ್ರಯಾಣ ಮಾಡಬಹುದು. ಆದರೆ ಇನ್ನು ಮುಂದೆ ಈ ರೀತಿಯ ಒಂದು ನಿಯಮ ಇರುವುದಿಲ್ಲ ಸರ್ಕಾರ ಇದೀಗ ಹೊಸ ನಿಯಮದೊಂದಿಗೆ ಶಕ್ತಿ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಕೆಲವೊಂದು ಮಹಿಳೆಯರಿಗೆ ಮಾತ್ರ ಈ ನಿಯಮ ಕಡ್ಡಾಯವಾಗಿದೆ.
ಇದನ್ನು ಓದಿ : 1000 ರೂ ನಿಮ್ಮ ಖಾತೆಗೆ ಪ್ರತಿ ತಿಂಗಳು ಬರಬೇಕಾ ? ಹಾಗಾದರೆ ಈ ಯೋಜನೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ
ಶಕ್ತಿ ಯೋಜನೆಯ ಹೊಸ ನಿಯಮ :
ಆಧಾರ್ ಕಾರ್ಡ್ಗಳನ್ನು ತೋರಿಸಿ ಎಲ್ಲಿ ಬೇಕಾದರೂ ಕೂಡ ಶಕ್ತಿ ಯೋಜನೆಯ ಮೂಲಕ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣವನ್ನು ಮಾಡಬೇಕಾಗಿತ್ತು, ಆದರೆ ಇದೀಗ ರಾಜ್ಯ ಸರ್ಕಾರ ಹೊರಡಿಸಿರುವ ಈ ಒಂದು ನಿಯಮದ ಮೂಲಕ ಎಲ್ಲಿ ಬೇಕಾದರೂ ಆಧಾರ್ ಕಾರ್ಡ್ಗಳನ್ನು ತೋರಿಸಿ ಪ್ರಯಾಣ ಮಾಡುವ ಹಾಗಿಲ್ಲ. ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿಯೂ ಪ್ರಯಾಣ ಮಾಡುವಂತಿಲ್ಲ ಏಕೆಂದರೆ ಪ್ರಸ್ತುತ ದಿನಗಳಲ್ಲಿ ಹಲವಾರು ರಾಜ್ಯಗಳಿಂದ ನಮ್ಮ ಕರ್ನಾಟಕದಲ್ಲಿ ವಾಸ ಮಾಡುತ್ತಿರುವಂತಹ ಮಹಿಳೆಯರು ಕೂಡ ಇರುವುದರಿಂದ ಬೇರೆ ರಾಜ್ಯದ ಆಧಾರ್ ಕಾರ್ಡ್ ಗಳನ್ನು ಆ ವ್ಯಕ್ತಿಗಳು ಹೊಂದಿರುತ್ತಾರೆ.
ಆದರೆ ಆಧಾರ್ ಕಾರ್ಡ್ ಗಳನ್ನು ಅವರು ಕರ್ನಾಟಕದಲ್ಲಿ ಇರುವಂತೆ ಹೊಂದಿರುವುದಿಲ್ಲ. ಕೆಲವು ಮಹಿಳೆಯರು ಮಾತ್ರ ಕರ್ನಾಟಕದಲ್ಲಿಯೇ ಇದ್ದು ಆಧಾರ್ ಕಾರ್ಡ್ ಗಳನ್ನು ಕರ್ನಾಟಕದಲ್ಲಿರುವಂತೆ ಹೊಂದಿರುತ್ತಾರೆ. ಆ ಒಂದು ಆಧಾರ್ ಕಾರ್ಡ್ ಗಳಲ್ಲಿ ಅವರ ರಾಜ್ಯದ ಸ್ಥಳವನ್ನು ಕೂಡ ನೋಡಬಹುದಾಗಿದೆ ಅಂದರೆ ಯಾವ ರೀತಿ ಎಂದರೆ ಬೇರೆ ರಾಜ್ಯದಿಂದ ಬಂದು ನಮ್ಮ ಕರ್ನಾಟಕ ರಾಜ್ಯದಲ್ಲಿ ಅವರು ಆಧಾರ್ ಕಾರ್ಡ್ ಗಳನ್ನು ಪಡೆದಿದ್ದಾರೆ ಎಂದರೆ ಆ ಒಂದು ಸ್ಥಳದ ವಿಳಾಸವನ್ನು ಕೂಡ ಆ ಆಧಾರ್ ಕಾರ್ಡ್ ನಲ್ಲಿ ಕೊಡಬೇಕಾಗಿರುತ್ತದೆ.
ಆದರೆ ಅವರೇನಾದರೂ ಅವರ ಖಾಯಂ ಸ್ಥಳದ ವಿಳಾಸವನ್ನು ಆಧಾರ್ ಕಾರ್ಡ್ ನಲ್ಲಿ ನೀಡಿದ್ದರೆ ಉಚಿತವಾಗಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಮಾಡುವ ಅವಕಾಶ ಅಂತಹ ಮಹಿಳೆಯರಿಗೆ ಇರುವುದಿಲ್ಲ ಏಕೆಂದರೆ ಈ ಒಂದು ಯೋಜನೆ ಜಾರಿಯಾಗಿರುವುದು ಕೇವಲ ಕರ್ನಾಟಕದ ಜನರಿಗೆ ಮಾತ್ರ ಹಾಗಾಗಿ ಕರ್ನಾಟಕದಲ್ಲಿ ಇರುವಂತಹ ಮಹಿಳೆಯರು ಮಾತ್ರ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯ ಪೂಜಿತ ಪ್ರಯಾಣವನ್ನು ಮಾಡಬಹುದಾಗಿದೆ.
ಆದರೆ ನಮ್ಮ ಕರ್ನಾಟಕಕ್ಕೆ ಹಲವು ರಾಜ್ಯದಿಂದ ಹೊರಸೆ ಬಂದಿರುವಂತಹ ಮಹಿಳೆಯರು ಕೂಡ ಉಚಿತ ಪ್ರಯಾಣವನ್ನು ಸ್ಮಾರ್ಟ್ ಕಾರ್ಡ್ ಗಳನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ. ಎಲ್ಲಿ ಆ ಸ್ಮಾರ್ಟ್ ಕಾರ್ಡ್ಗಳನ್ನು ಪಡೆಯಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೋಡುವುದಾದರೆ.
ಸ್ಮಾರ್ಟ್ ಕಾರ್ಡ್ ಪಡೆಯುವ ವಿಧಾನ :
ರಾಜ್ಯ ಸರ್ಕಾರವು ಜಾರಿಗೊಳಿಸಿರುವಂತಹ ಶಕ್ತಿ ಯೋಜನೆಯ ಪ್ರಯೋಜನವನ್ನು ಹೊರರಾಜ್ಯದ ಮಹಿಳೆಯರೂ ಪಡೆದುಕೊಳ್ಳಬೇಕಾದರೆ ಅವರು ಸ್ಮಾರ್ಟ್ ಕಾರ್ಡ್ ಗಳನ್ನು ಹೊಂದಿರಬೇಕಾಗುತ್ತದೆ.
ಆ ಸ್ಮಾರ್ಟ್ ಕಾರ್ಡ್ಗಳನ್ನು ಪಡೆಯಲು ಮಹಿಳೆಯರು ಬಾಪೂಜಿ ಸೇವಾ ಕೇಂದ್ರ ಗ್ರಾಮವನ್ ಕೇಂದ್ರ ಹೀಗೆ ಇನ್ನಿತರ ಕೇಂದ್ರಗಳಿಗೆ ಭೇಟಿ ನೀಡುವುದರ ಮೂಲಕ ಸ್ಮಾರ್ಟ್ ಕಾರ್ಡ್ ಗಳನ್ನು ಆಧಾರ್ ಕಾರ್ಡ್ ನೀಡುವುದರ ಮೂಲಕ ಪಡೆದುಕೊಳ್ಳಬಹುದಾಗಿದೆ. ಈ ಒಂದು ಸ್ಮಾರ್ಟ್ ಕಾರ್ಡ್ ನ ಮೂಲಕ ಕರ್ನಾಟಕ ರಾಜ್ಯದಾದ್ಯಂತ ಉಚಿತವಾಗಿ ಶಕ್ತಿ ಯೋಜನೆಯ ಅಡಿಯಲ್ಲಿ ಪ್ರಯಾಣವನ್ನು ಮುಂದುವರಿಸಬಹುದು, ಈ ರೀತಿ ಸ್ಮಾರ್ಟ್ ಕಾರ್ಡ್ ಅನ್ನು ಪಡೆಯುವುದರ ಮೂಲಕ ಯಾವುದೇ ಸಮಸ್ಯೆಗಳಿಲ್ಲದೆ ಉಚಿತ ಪ್ರಯಾಣವನ್ನು ಮಾಡಬಹುದಾಗಿದೆ.
ಒಟ್ಟಾರೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಮೂಲಕ ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿರುವಂತಹ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಹೊಸ ನಿಯಮ ಜಾರಿಯಾಗಿದ್ದು ಈ ನಿಯಮ ಕೇವಲ ಹೊರರಾಜ್ಯದಿಂದ ಬಂದಿರುವಂತಹ ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತದೆ ಆದರೆ ಕರ್ನಾಟಕದಲ್ಲಿ ಇರುವಂತಹ ಸಾಮಾನ್ಯ ಮಹಿಳೆಯರಿಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಈ ನಿಯಮ ಅನ್ವಯವಾಗುವುದಿಲ್ಲ.
ಹೊರ ರಾಜ್ಯದ ಮಹಿಳೆಯರು ಕೂಡ ಕರ್ನಾಟಕ ರಾಜ್ಯದಲ್ಲಿ ಶಕ್ತಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಅವರು ಸ್ಮಾರ್ಟ್ ಕಾರ್ಡ್ ಗಳನ್ನು ಪಡೆಯಲೇಬೇಕು ಇದರಿಂದ ಅವರು ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣ ಮಾಡಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲಾ ಮಹಿಳೆಯರಿಗೂ ಶೇರ್ ಮಾಡುವ ಮೂಲಕ ಇನ್ನು ಮುಂದೆ ಶಕ್ತಿ ಯೋಜನೆಯ ಅಡಿಯಲ್ಲಿ ಹೊಸ ನಿಯಮ ಜಾರಿಯಾಗಲಿದೆ ಎಂದು ತಿಳಿಸಿ ಧನ್ಯವಾದಗಳು.