100 ಯೂನಿಟ್ ಗಿಂತ ಹೆಚ್ಚು ವಿದ್ಯುತ್‌ ಬಳಕೆ ಮಾಡೋರಿಗೆ ಹೊಸ ಸುದ್ದಿ

electricity price reduce

ಹಲೋ ಸ್ನೇಹಿತರೇ, ಬೆಲೆ ಏರಿಕೆಯ ಸಂಕಷ್ಟದಲ್ಲಿರುವ ಕರುನಾಡ ಜನತೆಗೆ ರಾಜ್ಯ ಸರ್ಕಾರವು ದರ ಇಳಿಕೆಯ ಸುದ್ದಿಯನ್ನು ನೀಡಿದೆ. ರಾಜ್ಯದಲ್ಲಿ 100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವ ಕುಟುಂಬಕ್ಕೆ ಈ ನೂತನ ಬೆಲೆ ಅನ್ವಯವಾಗಲಿದೆ, ನಿಯಮಗಳು & ನೂತನ ದರ ಯಾವಾಗಿನಿಂದ ಜಾರಿಯಾಗಲಿದೆ ಎಂದು ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

electricity price reduce

15 ವರ್ಷಗಳ ಬಳಿಕ ದರ ಇಳಿಕೆ ಆಗಿದೆ :-

6 ರಿಂದ 8 ತಿಂಗಳ ಹಿಂದೆ ವಿದ್ಯುತ್ ದರ ಏರಿಕೆಯಾಗಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಈಗ ರಾಜ್ಯದ ಜನತೆಗೆ ವಿದ್ಯುತ್ ದರ ಇಳಿಕೆ ಸುದ್ದಿ ತಿಳಿದಿದೆ. ಇಲ್ಲಿಯ ವರೆಗೂ 100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯೂನಿಟ್‌ಗೆ 7 ರೂ. ದರ ನಿಗದಿಯಾಗಿತ್ತು. ಆದರೆ ನೂತನ ದರ ಪಟ್ಟಿಯಲ್ಲಿ ಪ್ರತಿ ಯೂನಿಟ್ 1.10 ರೂ. ಕಡಿಮೆಯಾಗಲಿದೆ. ಅಂದರೆ ಗ್ರಾಹಕರ ಪ್ರತಿ ಯೂನಿಟ್ ಗೆ ಕೇವಲ 5.90 ರೂ. ನೀಡಬೇಕಾಗುತ್ತದೆ. ಕಳೆದ 15 ವರ್ಷಗಳಲ್ಲಿ ವಿದ್ಯುತ್ ದರ ಇಳಿಕೆಯಾಗಿರುವುದು ಇದೆ ಮೊದಲು ಎಂದು ಹೇಳಲಾಗುತ್ತಿದೆ..

100 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸಿದವರಿಗೆ ವಿದ್ಯುತ್ ದರ ಹೀಗಿದೆ :- 100 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸಿದವರಿಗೆ ವಿದ್ಯುತ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಈ ಹಿಂದೆ ಪ್ರತಿ ಯೂನಿಟ್ 4.75 ರೂ. ಪಾವತಿ ಮಾಡಬೇಕಿತ್ತು. ಅದರಂತೆ ಇನ್ನೂ ಮುಂದೂ ಅದೇ ದರವು ಇರುತ್ತದೆ

ಗೃಹಜ್ಯೋತಿ ಫಲಾನುಭವಿಗಳಿಗೆ ಇದು ಅನ್ವಯವಾಗುತ್ತದೆಯೇ?̲

ಗೃಹಜ್ಯೋತಿ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಉಚಿತ ವಿದ್ಯುತ್ ಪಡೆಯುವವರಿಗೆ ಈ ನೂತನ ದರವು ಅನ್ವಯವಾಗುವುದಿಲ್ಲ. ಗೃಹಜ್ಯೋತಿಯ ಫಲಾನುಭವಿಗಳು ಈ ಹಿಂದೆ ಹೇಗೆ ಹೆಚ್ಚಿನ ವಿದ್ಯುತ್ ಗೆ ಹಣ ಪಾವತಿ ಮಾಡುತ್ತಿದ್ದರೋ ಹಾಗೆಯೇ ಸರಾಸರಿ ಯೂನಿಟ್ ಗಿಂತ ಜಾಸ್ತಿ ಬಳಸಿದಲ್ಲಿ ಹಳೆಯ ಬೆಲೆಯು ಅನ್ವಯ ಹಣ ಪಾವತಿ ಮಾಡಬೇಕು.

ಸಿಹಿಸುದ್ದಿ ತುರ್ತು ಸಾಲ ಬೇಕಾ? (Emergency loan) ಇಲ್ಲಿಂದ ತಗೊಂಡ್ರೆ EMI ಕಟ್ಟೋದೇ ಬೇಡ

ನೂತನ ದರ ಪಟ್ಟಿ ಯಾವಾಗಿನಿಂದ ಜಾರಿಯಾಗಲಿದೆ?

ಇನ್ನೇನು ಮುಂದಿನ ತಿಂಗಳು ಲೋಕಸಭೆ ಚುನಾವಣೆ ಬರಲಿದೆ. ಅದರ ಬೆನ್ನಲ್ಲೇ ಈಗ ಎಲ್ಲ ವರ್ಗದ ವಿದ್ಯುತ್ ಬಳಕೆದಾರರಿಗೆ ಕರ್ನಾಟಕ ರಾಜ್ಯ ವಿದ್ಯುತ್ಚ್ಛಕ್ತಿ ನಿಯಂತ್ರಣ ಆಯೋಗ ನೂತನ ದರದ ಪಟ್ಟಿಯನ್ನು ಘೋಷಣೆ ಮಾಡಿದೆ. ಈ ದರವು 2024-25ನೇ ಸಾಲಿಗೆ ಅನ್ವಯವಾಗಲಿದೆ. ಈ ಪರಿಷ್ಕೃತ ದರವು ಏಪ್ರಿಲ್ 01 ರಿಂದಲೇ ಜಾರಿಯಾಗಲಿದೆ ನೂತನ ದರವನ್ನು ಎಲ್ಲಾ ಎಸ್ಕಾಂಗಳಿಗೆ ಈ ದರ ನಿಗದಿಯಾಗುವಂತೆ ಸೂಚನೆ ನೀಡಲಾಗಿದೆ. ಆದರೆ ನೀವು ಏಪ್ರಿಲ್ ತಿಂಗಳ ಕರೆಂಟ್ ಬಿಲ್‌ನಲ್ಲಿ ಈ ದರವನ್ನು ನೋಡಲಾಗುವುದಿಲ್ಲ. ಇದು ನಿಮ್ಮ ಮೇ ತಿಂಗಳ ಕರೆಂಟ್ ಬಿಲ್ ನಲ್ಲಿ ನೂತನ ದರ ಪಟ್ಟಿಯು ಅನ್ವಯವಾಗಲಿದೆರ.

ಈ ನೂತನ ದರವು ಚುನಾವಣಾ ಹೊಸ್ತಿಲಲ್ಲಿ ಹಲವು ಚರ್ಚೆಗೆ ಕಾರಣವಾಗುತ್ತದೆ. ಏನೇ ಆದರೂ ನೂತನ ದರದಿಂದ ಹಲವು ಗ್ರಾಹಕರಿಗೆ ಇದು ಉಪಯೋಗವಾಗಲಿದೆ. ಈಗಾಗಲೇ ಎಲ್ಲ ದಿನಸಿ , ಪೆಟ್ರೋಲ್, ಎಲ್ಲಾ ಬೆಲೆಯು ಏರಿಕೆಯಲ್ಲಿ ಇರುವುದರಿಂದ ದರ ಇಳಿಕೆ ಆಗಿರುವುದು ಕೊಂಚ ಮಟ್ಟಿಗೆ ಸಹಾಯ ಆಗಲಿದೆ.

ಇತರೆ ವಿಷಯಗಳು:

ಸರ್ಕಾರದ ಹೊಸ ನಿರ್ಧಾರ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕಿದ್ದ ಎಲ್ಲರಿಗೂ ಭರ್ಜರಿ ಗುಡ್ ನ್ಯೂಸ್!

ಸರ್ಕಾರದಿಂದ ಮನೆ ಇಲ್ಲದವರಿಗೆ ಉಚಿತ ಮನೆಗಳ ಹಂಚಿಕೆ. ಅರ್ಜಿ ಬೇಗ ಸಲ್ಲಿಸಿ.

Leave a Reply

Your email address will not be published. Required fields are marked *