ನಮಸ್ಕಾರ ಸ್ನೇಹಿತರೇ, ನಾಗರಿಕರಿಗೆ ಅನೇಕ ರೀತಿ ದಾಖಲಾತಿಗಳನ್ನು ಭಾರತ ಸರ್ಕಾರವು ನೀಡಿದೆ , ಅವರಿಂದ ನಮ್ಮ ಸಾಕಷ್ಟು ಚಟುವಟಿಕೆಗಳು ಸುಲಭವಾಗಿದೆ ಎಂದು ಹೇಳಬಹುದು ಹೀಗೆ ಭಾರತ ಸರ್ಕಾರವು ನೀಡಿರುವ ಕೆಲವೊಂದು ಪ್ರಮುಖ ದಾಖಲಾತಿಗಳು ಎಂದರೆ ಆಧಾರ್ ಕಾರ್ಡ್ ವೋಟರ್ ಐಡಿ ಹಾಗೂ ಪಾನ್ ಕಾರ್ಡ್ ಗಳಾಗಿವೆ. ಒಂದು ವೇಳೆ ಈ ದಾಖಲಾತಿಗಳು ಇಲ್ಲದೆ ಹೋದರೆ ನಮ್ಮ ಸಾಕಷ್ಟು ಚಟುವಟಿಕೆಗಳು ಹಣದ ಲೇವಾದೇವಿಗಳು ಅರ್ಧಕ್ಕೆ ಸ್ಥಗಿತಗೊಳ್ಳುತ್ತವೆ ಎಂದು ಹೇಳಬಹುದು .
ಅದಲ್ಲದೆ ನಾವು ಆರ್ಥಿಕ ನಷ್ಟವನ್ನು ಕೂಡ ಅನುಭವಿಸಬೇಕಾಗುತ್ತದೆ. ಹೀಗೆ ನಮ್ಮ ಬಳಿ ಇರುವಂತಹ ಪ್ರಮುಖ ದಾಖಲಾತಿಗಳಲ್ಲಿ ಪಾನ್ ಕಾರ್ಡ್ ಕೂಡ ಒಂದಾಗಿದೆ. ಇನ್ಕಮ್ ಟ್ಯಾಕ್ಸ್ ಅಥವಾ ಬ್ಯಾಂಕಿನ ವಹಿವಾಟುಗಳನ್ನು ನಾವು ಪ್ಯಾನ್ ಕಾರ್ಡ್ ಇಲ್ಲದೆ ನಡೆಸಲು ಸಾಧ್ಯವಾಗಿರುವುದಿಲ್ಲ.
ಹೀಗಿರುವ ಸಂದರ್ಭದಲ್ಲಿ ನಮ್ಮ ಪಾನ್ ಕಾರ್ಡ್ ಏನಾದರೂ ಕಳೆದು ಹೋದರೆ ಅಥವಾ ಯಾರಾದರೂ ಅದನ್ನು ಕಳುವು ಮಾಡಿದರೆ ನಾವು ಮಾಡಬೇಕಾದಂತಹ ಮೊದಲ ಕೆಲಸವೇನು ಮತ್ತೊಂದು ಪಾನ್ ಕಾರ್ಡ್ ಅನ್ನು ಪಡೆಯುವ ಸೌಲಭ್ಯ ನಮಗೆ ಇದೆಯೇ ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.
ಡುಪ್ಲಿಕೇಟ್ ಪಾನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು :
ಭಾರತದಲ್ಲಿ ಇರುವಂತಹ ಸಾಕಷ್ಟು ಜನರಿಗೆ ತಮ್ಮ ಕಳೆದು ಹೋದಂತಹ ಪಾನ್ ಕಾರ್ಡ್ ಅನ್ನು ಮತ್ತೆ ಪಡೆಯುವ ಅವಕಾಶವಿದೆ ಎಂಬ ಮಾಹಿತಿಯು ತಿಳಿದೇ ಇರುವುದಿಲ್ಲ ಹೀಗೆ ನಮ್ಮ ಪಾನ್ ಕಾರ್ಡ್ ಏನಾದರೂ ಕಳೆದು ಹೋಗಿದ್ದರೆ ಅಥವಾ ಕಳ್ಳತನವಾಗಿದ್ದರೆ.
ಅದನ್ನು ಮತ್ತೆ ಪಡೆಯುವ ಅವಕಾಶ ನಮಗೆ ಇರುತ್ತದೆ ಅಲ್ಲದೆ ಈ ಅವಕಾಶ ಮನೆಯಲ್ಲಿಯೇ ಕುಳಿತು ನಮ್ಮ ಬಳಿ ಇರುವಂತಹ ಮೊಬೈಲ್ ಮೂಲಕವೇ ನಾವು ಮತ್ತೊಂದು ಪಾನ್ ಕಾರ್ಡ್ ಅನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಭಾರತ ಸರ್ಕಾರ ನೀಡಿದೆ. ಈ ರೀತಿಯಾಗಿ ಡುಪ್ಲಿಕೇಟ್ ಪಾನ್ ಕಾರ್ಡ್ ಅನ್ನು ನಾವು ಪಡೆದುಕೊಳ್ಳಬಹುದಾಗಿದೆ.
ಇದನ್ನು ಓದಿ : ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ : ಕೇಂದ್ರದಿಂದ ಹೊಸ ಯೋಜನೆ
ಡುಪ್ಲಿಕೇಟ್ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸುವ ವಿಧಾನ :
ನಮ್ಮ ಬಳಿ ಇರುವಂತಹ ಒರಿಜಿನಲ್ ಪಾನ್ ಕಾರ್ಡ್ ಏನಾದರೂ ಕಳೆದು ಹೋದರೆ ನಾವು ಡುಪ್ಲಿಕೇಟ್ ಪಾನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು ಎಂಬ ವಿಚಾರ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಅದರಂತೆ ನಾವು ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಡುಬ್ಲಿಕೇಟ್ ಪ್ಯಾನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು.
ನಮ್ಮ ಮೊಬೈಲ್ ಮೂಲಕ ಆನ್ಲೈನಲ್ಲಿ ಲಭ್ಯವಿರುವಂತಹ ಎನ್ ಎಸ್ ಡಿ ಎಲ್ ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ ಅದರಲ್ಲಿ ಕೇಳಲಾಗುವಂತಹ ಆಧಾರ ನಂಬರ್ ಪ್ಯಾನ್ ಕಾರ್ಡ್ ನಂಬರ್ ಹಾಗೂ ಇನ್ನೂ ಕೆಲವು ಮಾಹಿತಿಗಳನ್ನು ಸರಿಯಾಗಿ ವೆಬ್ಸೈಟ್ನಲ್ಲಿ ನಮೂದಿಸಿ ನಂತರ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆ ಮುಗಿದ ನಂತರ ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು ಅಲ್ಲದೆ ನಿಮ್ಮ ಕಳೆದುಹೋದ ಪಾನ್ ಕಾರ್ಡ್ ಕುರಿತಾದ ಎಲ್ಲಾ ಮಾಹಿತಿಗಳು ನಿಮಗೆ ಲಭ್ಯವಾಗುತ್ತದೆ.
ಈ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ನೀವು ರೂ.50 ಗಳ ಶುಲ್ಕವನ್ನು ಪ್ರೀತಿ ಮಾಡಿದರೆ ನಿಮಗೆ ಕೆಲವು ದಿನಗಳ ಒಳಗೆ ನಿಮ್ಮ ಮನೆ ಅಡ್ರೆಸ್ ಗೆ ಪಾನ್ ಕಾರ್ಡ್ ಪೋಸ್ಟ್ ಆಗುತ್ತದೆ. ಹೀಗೆ ಕೆಲವೊಂದು ದಾಖಲಾತಿಗಳನ್ನು ಹೊಂದುವುದರ ಮೂಲಕ ಮನೆಯಲ್ಲಿ ಕುಳಿತು ಡುಪ್ಲಿಕೇಟ್ ಪಾನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಡ್ಯೂಪ್ಲಿಕೇಟ್ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :
ನಿಮ್ಮ ಪಾನ್ ಕಾರ್ಡ್ ಏನಾದರೂ ಕಳೆದು ಹೋಗಿದ್ದರೆ ನೀವು ಡುಬ್ಲಿಕೇಟ್ ಪ್ಯಾನ್ ಕಾರ್ಡ್ ಅನ್ನು ಪಡೆದುಕೊಳ್ಳಲು ಯೋಚಿಸುತ್ತಿದ್ದರೆ ಮನೆಯಲ್ಲಿಯೇ ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಅದರಂತೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದಿರಬೇಕು.
- ಆಧಾರ್ ನಂಬರ್
- ಪಾನ್ ಕಾರ್ಡ್ ನಂಬರ್
- ಮೊಬೈಲ್ ನಂಬರ್
ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ವೆಬ್ಸೈಟ್ನಲ್ಲಿ ನಮೂದಿಸುವುದರ ಮೂಲಕ ಸುಲಭವಾಗಿ ಡುಪ್ಲಿಕೇಟ್ ಪ್ಯಾನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಪಾನ್ ಕಾರ್ಡ್ ನಂಬರ್ ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ :
ನಿಮ್ಮ ಹಳೆಯ ಪಾನ್ ಕಾರ್ಡ್ ಏನಾದರೂ ಕಳೆದುಕೊಂಡು ನೀವು ಹೊಸದಾಗಿ ಡೂಪ್ಲಿಕೇಟ್ ಪ್ಯಾನ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಿದರೆ ನಿಮ್ಮ ಪಾನ್ ಕಾರ್ಡ್ ನಂಬರ್ ನಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಅಂದರೆ ನಿಮ್ಮ ಕಳೆದು ಹೋಗಿರುವಂತಹ ಒರಿಜಿನಲ್ ಪ್ಯಾನ್ ಕಾರ್ಡ್ ನ ಡುಪ್ಲಿಕೇಟ್ ಕಾಪಿ ಆಗಿರುತ್ತದೆ.
ಇದನ್ನು ಹೊರತುಪಡಿಸಿ ಯಾವುದಾದರೂ ಸಣ್ಣ ಪುಟ್ಟ ಬದಲಾವಣೆಯನ್ನು ಮಾಡಲು ನೀವು ಪಾನ್ ಕಾರ್ಡ್ ನಲ್ಲಿ ಇಚ್ಚಿಸಿದ್ದರೆ ಎರಡನೇ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅದನ್ನು ಮಾಡುವಂತಹ ಅವಕಾಶ ನಿಮಗೆ ಇರುತ್ತದೆ. ಹೀಗೆ ನೀವು ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಡುಪ್ಲಿಕೇಟ್ ಪ್ಯಾನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿದರೆ ಅದರಲ್ಲಿ ಯಾವುದೇ ರೀತಿಯ ಬದಲಾವಣೆಗಳು ಇರುವುದಿಲ್ಲ ನಿಮ್ಮ ಹಳೆಯ ಪಾನ್ ಕಾರ್ಡ್ ರೀತಿಯಲ್ಲಿಯೇ ಡುಪ್ಲಿಕೇಟ್ ಪಾನ್ ಕಾರ್ಡ್ ನಿಮಗೆ ಲಭ್ಯವಾಗುತ್ತದೆ.
ಒಟ್ಟಾರೆ ಭಾರತ ಸರ್ಕಾರವು ನೀಡಿರುವಂತಹ ಪಾನ್ ಕಾರ್ಡ್ ಏನಾದರೂ ಕಳೆದು ಹೋದರೆ ಸುಲಭವಾಗಿ ಅದೇ ಮಾದರಿಯ ಡೂಪ್ಲಿಕೇಟ್ ಕಾಫಿಯನ್ನು ಅಂದರೆ ಡುಪ್ಲಿಕೇಟ್ ಪಾನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದಾಗಿದೆ.
ಹಾಗಾಗಿ ನಿಮಗೆ ತಿಳಿದಿರುವ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಅವರಿಗೆ ಪಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಮತ್ತೊಂದು ಪಾನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿ ಇದರಿಂದ ಅವರ ಪಾನ್ ಕಾರ್ಡ್ ಏನಾದರೂ ಕಳೆದು ಹೋದರೆ ಅಥವಾ ಕಳೆದು ಹೋಗಿದ್ದರೆ ಈ ಮಾಹಿತಿಯನ್ನು ತಿಳಿದುಕೊಂಡಿರುವುದರ ಮೂಲಕ ಅವರು ತಮ್ಮ ಡ್ಯೂಪ್ಲಿಕೇಟ್ ಪ್ಯಾನ್ ಕಾರ್ಡ್ ಅನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಧನ್ಯವಾದಗಳು.