ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರ ಮಹಿಳೆಯರಿಗೆ ಸಾಕಷ್ಟು ಉತ್ತಮ ಯೋಜನೆಗಳನ್ನು ಪರಿಚಯಿಸುವುದರ ಮೂಲಕ ಅವರ ಆರ್ಥಿಕ ಸ್ವಾವಲಂಬನೆಯನ್ನು ಉತ್ತಮಗೊಳಿಸಲಾಗಿದೆ. ಸಾಕಷ್ಟು ಮಹಿಳೆಯರು ಸ್ವಂತ ಉದ್ಯಮ ಆರಂಭಿಸುವುದರಿಂದ ಹಿಡಿದು ಮನೆ ನಿರ್ವಹಣೆಗೆ ಉಚಿತ ಹಣವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗಿದೆ. ಕೇಂದ್ರ ಸರ್ಕಾರ ಮಹಿಳೆಯರಿಗೆ 2 ಉಚಿತ ಗ್ಯಾಸ್ ಸಿಲಿಂಡರ್ ನೀಡುತ್ತಿದ್ದು, ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..
ಇದೀಗ ಕೇಂದ್ರ ಸರ್ಕಾರ ಪರಿಚಯಿಸಿರುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಮಹಿಳೆಯರು ಎರಡು ಗ್ಯಾಸ್ ಸಿಲೆಂಡರ್ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಗ್ಯಾಸ್ ಕನೆಕ್ಷನ್ ಕೂಡ ಉಚಿತವಾಗಿ ಸಿಗುತ್ತದೆ ಹಾಗೂ ಸಬ್ಸಿಡಿ ಲಭ್ಯವಿದ್ದು ಮಹಿಳೆಯರಿಗೆ ಹೆಚ್ಚು ಅನುಕೂಲಕರವಾಗಿದೆ ಎನ್ನಬಹುದು.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತವಾಗಿ ಗ್ಯಾಸ್ ಕನೆಕ್ಷನ್ ಪಡೆದುಕೊಂಡು ಮಹಿಳೆಯರು ಸೌದೆ ಒಲೆಯಿಂದ ಅಡುಗೆ ಮಾಡುವ ಕಷ್ಟದಿಂದ ಮುಕ್ತರಾಗಿದ್ದಾರೆ ಎನ್ನಬಹುದು. ಇಂದು ಕೋಟ್ಯಾಂತರ ಮಹಿಳೆಯರು ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿದ್ದಾರೆ. ಅಲ್ಲದೆ 300 ರೂಪಾಯಿಗಳ ಸಬ್ಸಿಡಿಯನ್ನು ಕೂಡ ಕೊಡಲಾಗಿದ್ದು ಪ್ರತಿ ಸಿಲಿಂಡರ್ ಗೆ ಕೇವಲ 603 ರೂಪಾಯಿಗಳನ್ನು ಮಾತ್ರ ಮಹಿಳೆಯರು ಪಾವತಿಸಬೇಕು.
ಇದೀಗ ಹೋಳಿ ಹಬ್ಬಕ್ಕೆ ಹೆಣ್ಣು ಮಕ್ಕಳ ಜೀವನದ ಬಣ್ಣವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಇನ್ನು ಮಹಿಳೆಯರು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಎರಡು ಉಚಿತ ಗ್ಯಾಸ್ ಸಿಲೆಂಡರ್ ಪಡೆಯಬಹುದು. ಆನ್ಲೈನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ಸೌಲಭ್ಯ ಪಡೆಯಬಹುದು.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ವಿಳಾಸ ಪುರಾವೆ
- ಬ್ಯಾಂಕ ಖಾತೆಯ ವಿವರ
- ಮೊಬೈಲ್ ಸಂಖ್ಯೆ
- ಇತ್ತೀಚಿನ ಭಾವಚಿತ್ರ
ವೋಟರ್ ಲಿಸ್ಟ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು : ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ
ಉಚಿತ ಎರಡು ಗ್ಯಾಸ್ ಸಿಲಿಂಡರ್ ಯಾರಿಗೆ ಸಿಗುತ್ತೆ?
- ಕಡ್ಡಾಯವಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕು.
- ಭಾರತೀಯ ಮಹಿಳೆ ಆಗಿರಬೇಕು.
- ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು 18 ವರ್ಷ ಮೀರಿರಬೇಕು.
- ಕುಟುಂಬದ ಆದಾಯ ಗ್ರಾಮೀಣ ಪ್ರದೇಶದಲ್ಲಿ ಒಂದು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಹಾಗೂ ನಗರ ಪ್ರದೇಶಗಳಲ್ಲಿ ಎರಡು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರಬೇಕು.
- ಈ ಹಿಂದೆ ಗ್ಯಾಸ್ ಸಂಪರ್ಕ ಪಡೆದಿರುವವರು ಅರ್ಜಿ ಸಲ್ಲಿಸುವಂತಿಲ್ಲ.
ಎರಡು ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ?
- https://www.pmuy.gov.in/index.aspx ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಈ ವೆಬ್ಸೈಟ್ ಲಿಂಕ್ ಮಾಡಿ.
- ನೀವು ಯಾವ ಗ್ಯಾಸ್ ವಿತರಕರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಉದಾಹರಣೆಗೆ HP, bhart gas, indane gas ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.
- ನಂತರ ಆಯಾ ವಿತರಕರ ವೆಬ್ಸೈಟ್ ಗೆ ನೇರವಾಗಿ ಪ್ರವೇಶ ಪಡೆಯುತ್ತೀರಿ. ಅಲ್ಲಿ ನಿಮ್ಮ ಅಗತ್ಯ ಇರುವ ಮಾಹಿತಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿದ್ರೆ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ.
- ಅರ್ಜಿ ಸಲ್ಲಿಕೆ ಆದ ನಂತರ ಪರಿಶೀಲನೆ ನಡೆಸಿ ನೀವು ಫಲಾನುಭವಿಗಳಾಗಿದ್ದರೆ ನಿಮಗೆ ಉಚಿತ ಎರಡು ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲು ಅವಕಾಶ ಇದೆ.
ಇತರೆ ವಿಷಯಗಳು:
ಸರ್ಕಾರದ ಹೊಸ ನಿರ್ಧಾರ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕಿದ್ದ ಎಲ್ಲರಿಗೂ ಭರ್ಜರಿ ಗುಡ್ ನ್ಯೂಸ್!
ಸರ್ಕಾರದಿಂದ ಮನೆ ಇಲ್ಲದವರಿಗೆ ಉಚಿತ ಮನೆಗಳ ಹಂಚಿಕೆ. ಅರ್ಜಿ ಬೇಗ ಸಲ್ಲಿಸಿ.