ನಮಸ್ಕಾರ ಸ್ನೇಹಿತರೆ ಯಾವುದೇ ಉದ್ಯಮವನ್ನು ಆರಂಭಿಸುವುದಕ್ಕೆ ನೀವು ಬ್ಯಾಂಕಿನಲ್ಲಿ ಅಥವಾ ಫೈನಾನ್ಸ್ ಕಂಪನಿಗಳಲ್ಲಿ ಅಥವಾ ತುರ್ತು ಪರಿಸ್ಥಿತಿಯಲ್ಲಿ ಸಾಲವನ್ನು ಮಾಡುವುದು ಸಹಜವಾಗಿದೆ ಆದರೆ ನೀವು ಸಾಲ ಮಾಡಿದಾಗ ಯಾವುದೇ ಬೇರೆ ಬ್ಯಾಂಕುಗಳಲ್ಲಿ ಅದಕ್ಕೆ ಅತಿ ಹೆಚ್ಚು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಇದು ಎಷ್ಟೋ ಬಾರಿ ಸಾಲ ತೆಗೆದುಕೊಂಡಿರುವುದಕ್ಕಿಂತ ಹೆಚ್ಚಿನ ಮತದಾಗಿರುತ್ತದೆ.
ಇದೇ ಕಾರಣಕ್ಕಾಗಿ ಮಹಿಳೆಯರು ಸ್ವಂತ ಉದ್ಯಮವನ್ನು ಮಾಡುವಂತಹ ಆಸೆಯನ್ನು ಕೈಬಿಟ್ಟಿದ್ದಾರೆ ಎಂದು ಹೇಳಬಹುದು. ಆದರೆ ಇದೀಗ ಮಹಿಳೆಯರು ಯಾವುದೇ ರೀತಿಯ ಚಿಂತಿಸುವ ಅಗತ್ಯವಿಲ್ಲ ಇದೀಗ ಮಹಿಳೆಯರು ಕೂಡ ಸ್ವಂತ ಉದ್ಯಮವನ್ನು ಮಾಡಿ ಕೈ ತುಂಬಾ ಆದಾಯವನ್ನು ಪಡೆಯಬಹುದಾಗಿದೆ.
ಮಹಿಳೆಯರು ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಸರ್ಕಾರ ಇದೀಗ ಆರ್ಥಿಕ ನೆರವು ನೀಡಲಿದ್ದು ಒಂದು ರೂಪಾಯಿಗಳ ಬಡ್ಡಿಯನ್ನು ಪಾವತಿಸದೆ ಒಂದರಿಂದ ಐದು ಲಕ್ಷ ರೂಪಾಯಿಗಳವರೆಗೆ ಮಹಿಳೆಯರು ಕೇಂದ್ರ ಸರ್ಕಾರದಿಂದ ಸಾಲವನ್ನು ಪಡೆಯಬಹುದಾಗಿದೆ. ಹಾಗಾದರೆ ಮಹಿಳೆಯರು ಯಾವ ಯೋಜನೆ ಮೂಲಕ ಕೇಂದ್ರ ಸರ್ಕಾರದಿಂದ ಸಾಲ ಸೌಲಭ್ಯವನ್ನು ಪಡೆಯಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
ಪ್ರಧಾನಮಂತ್ರಿ ಲಕ್ಪತಿ ದೀದಿ ಯೋಜನೆ :
ಕೇಂದ್ರ ಸರ್ಕಾರವು ಇದೀಗ ಮಹಿಳೆಯರಿಗೆ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಒಂದು ರೂಪಾಯಿ ಬಡ್ಡಿಯನ್ನು ನೀಡದೆ ಒಂದರಿಂದ ಐದು ಲಕ್ಷಗಳವರೆಗೆ ಸಾಲವನ್ನು ಒದಗಿಸಲು ಮುಂದಾಗಿದೆ. ಈ ಯೋಜನೆ ಮೂಲಕ ಸಾಲವನ್ನು ಪಡೆಯಬೇಕಾದರೆ ಮಹಿಳೆಯರು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು ಅಂತಹ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಿ. ಕೇಂದ್ರ ಸರ್ಕಾರದಿಂದ ಸಾಲ ಪಡೆಯಬಹುದು.
ಇದನ್ನು ಓದಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇರ ನೇಮಕಾತಿ : ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ
ಅರ್ಹತೆಗಳು :
ಕೇಂದ್ರ ಸರ್ಕಾರದ ಈ ಯೋಜನೆ ಮೂಲಕ ಮಹಿಳೆಯರು ಬಡ್ಡಿ ಇಲ್ಲದೆ ಸಾಲವನ್ನು ಪಡೆಯಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು.
- ಈ ಯೋಜನೆಗೆ 18 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
- ಸುಮಾರು 90 ಕೋಟಿ ಮಹಿಳೆಯರು ದೇಶದಲ್ಲಿ ಇರುವಂತಹ 83 ಲಕ್ಷ ಸ್ವ ಸಹಾಯ ಸಂಘಗಳಲ್ಲಿ ಸದಸ್ಯರಾಗಿದ್ದು ಕೇವಲ ಸ್ವಸಹಾಯ ಸಂಘಗಳಲ್ಲಿ ಸದಸ್ಯರಾಗಿರುವ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
- ಯಾವುದೇ ವಸ್ತುವನ್ನು ಸ್ವಸಹಾಯ ಸಂಘದಲ್ಲಿ ಮಹಿಳೆಯರು ತಯಾರಿಸಿ ದೇಶದ ಪ್ರತಿಷ್ಠಿತ ಎಕ್ಸಿಬಿಷನ್ ಗಳಲ್ಲಿ ಮತ್ತು ಮಾಲ್ಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲು ಈ ಯೋಜನೆ ಮೂಲಕ ಅವಕಾಶ ನೀಡಲಾಗಿದೆ.
- ಬಡ್ಡಿ ರಹಿತವಾಗಿ ಒಂದರಿಂದ ಐದು ಲಕ್ಷ ರೂಪಾಯಿಗಳವರೆಗೆ ಈ ಯೋಜನೆ ಮೂಲಕ ಸಾಲ ಪಡೆಯಬಹುದು.
- ಕೇಂದ್ರ ಸರ್ಕಾರದ ಈ ಯೋಜನೆ ಮುಖ್ಯ ಉದ್ದೇಶ ಮಹಿಳೆಯರ ಆರ್ಥಿಕ ಸಬಲೀಕರಣ ಉತ್ತೇಜಿಸುವುದಾಗಿದೆ.
ಹೀಗೆ ಕೆಲವೊಂದು ಅರ್ಹತೆಗಳನ್ನು ಹೊಂದುವುದರ ಮೂಲಕ ಮಹಿಳೆಯರು ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಬಡ್ಡಿ ಇಲ್ಲದೆ ಸಾಲವನ್ನು ೫ ಲಕ್ಷದವರೆಗೆ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳು :
ಕೇಂದ್ರ ಸರ್ಕಾರದ ಲಕ್ಪತಿ ದೀದಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಮಹಿಳೆಯರು ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದಿರಬೇಕು.
- ಸ್ವಸಹಾಯ ಸಂಘದ ಸದಸ್ಯ ಪಡೆದುಕೊಂಡಿರಬೇಕಾಗುತ್ತದೆ
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರಗಳು
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
ಹೀಗೆ ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದುವುದರ ಮೂಲಕ ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಧಾನ :
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಲಕ್ಪತಿ ದೀದಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ https://www.india.gov.in/spotlight/lakhpati-didi-portal ಭೇಟಿ ನೀಡಿ ಅದರಲ್ಲಿ ಅಗತ್ಯ ಇರುವಂತಹ ಮಾಹಿತಿ ಹಾಗೂ ದಾಖಲೆಗಳನ್ನು ನೀಡುವುದರ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಿ ಸರ್ಕಾರದಿಂದ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಅರ್ಜಿ ಒಪ್ಪಿಗೆ ಯಾದರೆ 5 ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿದೆ. ಇದರಿಂದ ಸುಲಭವಾಗಿ ಮಹಿಳೆಯರು ತಮ್ಮ ಆರ್ಥಿಕ ಸ್ವಾವಲಂಬಿ ಬದುಕನ್ನು ಬದುಕಬಹುದಾಗಿದೆ.
ಒಟ್ಟಾರೆ ಕೇಂದ್ರ ಸರ್ಕಾರವು ಮಹಿಳೆಯರ ಸ್ವಾವಲಂಬಿ ಬದುಕನ್ನು ಉತ್ತೇಜಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದು ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಕೈತುಂಬಾ ಆದಾಯವನ್ನು ಗಳಿಸಬಹುದಾಗಿದೆ.
ಹಾಗಾಗಿ ಪ್ರತಿಯೊಬ್ಬರಿಗೂ ಈ ಯೋಜನೆ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರೇನಾದರೂ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ ಕೇಂದ್ರ ಸರ್ಕಾರದ ಈ ಯೋಜನೆಯ ಸದುಪಯೋಗವನ್ನು ಪಡಿಸಿಕೊಳ್ಳುವಂತೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಈ ಕೆಲಸ ಮಾರ್ಚ್ 31ರ ಒಳಗಾಗಿ ಮಾಡಬೇಕು : ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದಿಲ್ಲ!
- ಕೇಂದ್ರ ಸರ್ಕಾರದಿಂದ 11,000 ಉಚಿತ : ಮೋದಿ ಯಾರಿಗೆ ಹಣ ನೀಡುತ್ತಿದ್ದಾರೆ ತಿಳಿದುಕೊಳ್ಳಿ ಹಾಗೆ ಪಡೆದುಕೊಳ್ಳಿ
ಯೋಜನೆ ಯಾವ ಸರ್ಕಾರ ಜಾರಿಗೆ ತಂದಿದೆ ..?
ಕೇಂದ್ರ ಸರ್ಕಾರ ತಂದಿದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವುದು ..?
ಕೊನೆ ದಿನಾಂಕ ನಿಗದಿ ಪಡಿಸಿಲ್ಲ.