ನಮಸ್ಕಾರ ಸ್ನೇಹಿತರೇ ಕಾರ್ಮಿಕರಿಗಾಗಿ ವಿವಿಧ ರೀತಿಯ ಸೌಲಭ್ಯಗಳನ್ನು ಪ್ರಸ್ತುತ ದೇಶದಲ್ಲಿ ಕಾರ್ಮಿಕ ಕಲ್ಯಾಣ ಇಲಾಖೆಯು ನೀಡುತ್ತಿದೆ ಅದರಂತೆ ಅಗತ್ಯ ಸೌಲಭ್ಯವನ್ನು ನೀಡುವ ಉದ್ದೇಶದಿಂದ ಲೇಬರ್ ಕಾರ್ಡ್ ಅನ್ನು ಕೂಡ ಕಾರ್ಮಿಕರಿಗೆ ನೀಡಲಾಗುತ್ತಿದೆ. ಲೇಬರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಕಾರ್ಮಿಕರು ಕೂಡ ಸರ್ಕಾರ ಜಾರಿಗೊಳಿಸುವಂತಹ ಪ್ರತಿಯೊಂದು ಯೋಜನೆಗಳ ಸೌಲಭ್ಯವನ್ನು ಹೆಚ್ಚಿನದಾಗಿ ಪಡೆಯಬಹುದಾಗಿದೆ.
ಇದೀಗ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಾರ್ಮಿಕ ಕಾರ್ಡುದಾರರಿಗೆ ಅಥವಾ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಾರ್ಮಿಕರಿಗಾಗಿ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದೆ ಅದರಂತೆ ಮಹಿಳಾ ಕಾರ್ಮಿಕರಿಗೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಗುಡ್ ನ್ಯೂಸ್ ನೀಡಲಾಗಿದೆ.
ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಮಹಿಳಾ ಕಾರ್ಮಿಕರಿಗೆ ಸಿಹಿ ಸುದ್ದಿ :
ಕಾರ್ಮಿಕ ಕಾರ್ಡುದಾರರಿಗೆ ಅಥವಾ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯು ನೀಡುವಂತಹ ವಿವಿಧ ಸೌಲಭ್ಯಗಳಲ್ಲಿ ಹೆರಿಗೆ ಸೌಲಭ್ಯವು ಕೂಡ ಒಂದಾಗಿದ್ದು ಈ ಸೌಲಭ್ಯವನ್ನು ಲೇಬರ್ ಕಾರ್ಡ್ ಹೊಂದಿರುವ ಮಹಿಳೆಯರು ಪಡೆಯಬಹುದಾಗಿದೆ.
ಅಂದರೆ ತನ್ನ ಮೊದಲ ಎರಡು ಮಕ್ಕಳಿಗೆ ನಂದಾಯಿತ ಮಹಿಳೆಯು ಈ ಯೋಜನೆಯ ಮೂಲಕ ತಲಾ 30,000ಗಳ ಹಣವನ್ನು ಈ ಯೋಜನೆಯಿಂದ ಪಡೆಯಬಹುದು. ಇನ್ನು ಮುಂದೆ ಮಹಿಳಾ ಕಾರ್ಮಿಕರ ಹೆರಿಗೆ ಖರ್ಚು ಸರ್ಕಾರದ್ದಾಗಿದ್ದು ಮಹಿಳಾ ಕಾರ್ಮಿಕರಿಗೆ ಹೆರಿಗೆಯ ಸಂದರ್ಭದಲ್ಲಿ ಗಂಡು ಮಗು ಜನಿಸಿದರೆ 30,000 ಹಾಗೂ ಹೆಣ್ಣು ಮಗು ಜನಿಸಿದರೆ 30,000 ಹೆರಿಗೆ ಸೌಲಭ್ಯವನ್ನು ನೀಡಲಾಗುತ್ತದೆ.
ಮೊದಲ ಎರಡು ಹೆರಿಗೆಗೆ ನೊಂದಾಯಿತ ಮಹಿಳಾ ಫಲಾನುಭವಿಗೆ ಮಂಡಳಿಯ ಸಹಾಯವನ್ನು ನೀಡಲಾಗುತ್ತದೆ. ಮಗು ಹುಟ್ಟಿದ 6 ತಿಂಗಳ ಒಳಗಾಗಿ ಮಹಿಳಾ ಕಾರ್ಮಿಕರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಪ್ರಯೋಜನವನ್ನು ಪಡೆಯಬಹುದಾಗಿದ್ದು ಈಗಾಗಲೇ ನೊಂದಾಯಿತ ಕಾರ್ಮಿಕ ಮಹಿಳೆ ಇಬ್ಬರು ಮಕ್ಕಳನ್ನು ಹೊಂದಿದ್ದರೆ ಈ ಸೌಲಭ್ಯಕ್ಕೆ ಅವರು ಅರ್ಹರಾಗಿರುವುದಿಲ್ಲ.
ಇದನ್ನು ಓದಿ : ಆಧಾರ್ ಕಾರ್ಡಿನಲ್ಲಿ ಮಾಹಿತಿಗಳು ತಪ್ಪಾಗಿದ್ದರೆ 3 ವರ್ಷ ಜೈಲು ಶಿಕ್ಷೆ ತಪ್ಪದೆ ಈ ಕೆಲಸ ಮಾಡಿ
ಹೆರಿಗೆ ಸೌಲಭ್ಯ ಪಡೆಯಲು ಬೇಕಾಗುವ ದಾಖಲೆಗಳು :
ಕಾರ್ಮಿಕ ಮಂಡಳಿಯು ಮಹಿಳಾ ಕಾರ್ಮಿಕರಿಗೆ ನೀಡುತ್ತಿರುವ ಹೆರಿಗೆ ಸೌಲಭ್ಯದ ಪ್ರಯೋಜನವನ್ನು ಪಡೆಯಬೇಕಾದರೆ ಸರ್ಕಾರದ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿಯನ್ನು ಸಲ್ಲಿಸಲು ಕೆಲವೊಂದು ಪ್ರಮುಖ ದಾಖಲೆಗಳನ್ನು ಮಹಿಳಾ ಕಾರ್ಮಿಕರು ಹೊಂದಿರಬೇಕು ಆ ದಾಖಲೆಗಳು ಯಾವುವು ಎಂದು ನೋಡುವುದಾದರೆ,
- ಎರಡನೇ ಮಗುವಿನ ಹೆರಿಗೆಗೆ ಹಣ ಪಡೆಯಲು ಅಫಿಡವಿಟನ್ನು ಮಹಿಳಾ ಕಾರ್ಮಿಕರು ಹೊಂದಿರಬೇಕು.
- ಬ್ಯಾಂಕ್ ಪಾಸ್ ಬುಕ್
- ಮಕ್ಕಳ ಫೋಟೋ
- ಉದ್ಯೋಗದ ದೃಢೀಕರಣ ಪತ್ರ
- ಬೊಟ್ಟು ನೀಡಿದ ಗುರುತಿನ ಚೀಟಿ ಅಥವಾ ಕಾರ್ಮಿಕ ಕಾರ್ಡ್
- ಡಿಸ್ಚಾರ್ಜ್ ಸಾರಾಂಶ
- ಮಗುವಿನ ಜನನ ಪ್ರಮಾಣ ಪತ್ರ
- ಮಗುವಿನ ಜನನದ ಆರು ತಿಂಗಳ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.
ಹೀಗೆ ಮಹಿಳಾ ಕಾರ್ಮಿಕರಿಗೆ ಹಲವಾರು ರೀತಿಯ ಸೌಲಭ್ಯಗಳನ್ನು ಕಾರ್ಮಿಕ ಕಾರಣದ ಮೂಲಕ ಕಾರ್ಮಿಕ ಕಲ್ಯಾಣ ಮಂಡಳಿಯು ನೀಡುತ್ತಿದೆ.
ಒಟ್ಟಾರೆ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಇರುವಂತಹ ಮಹಿಳಾ ಕಾರ್ಮಿಕರಿಗೆ ಯಾವುದೇ ರೀತಿಯಾದ ತೊಂದರೆ ಆಗಬಾರದು ಎಂದು ದೇಶದಿಂದ ಕಾರ್ಮಿಕ ಕಾರಣದ ಮೂಲಕ ಕಾರ್ಮಿಕ ಕಲ್ಯಾಣ ಮಂಡಳಿ ವಿವಿಧ ಸೌಲಭ್ಯಗಳನ್ನು ನೀಡುತ್ತಿದ್ದು ಇದೀಗ ಹೆರಿಗೆ ಸೌಲಭ್ಯವನ್ನು ಕೂಡ ನೀಡಲು ಮುಂದಾಗಿದ್ದು ಈ ಯೋಜನೆಯ ಪ್ರಯೋಜನವನ್ನು ಅರ್ಹ ಮಹಿಳಾ ಕಾರ್ಮಿಕರು ಪಡೆಯಬಹುದಾಗಿದೆ.
ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರೇನಾದರೂ ಮಹಿಳಾ ಕಾರ್ಮಿಕರಾಗಿದ್ದಾರೆ ಹಾಗೂ ಇದೇ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡುತ್ತಿದ್ದಾರೆ ಅವರಿಗೆ ಈ ಮಾಹಿತಿಯು ಹೆಚ್ಚು ಸಹಾಯಕವಾಗಲಿದೆ. ಇದರಿಂದ ಕಾರ್ಮಿಕ ಕಾರ್ಡನ್ನು ಹೊಂದಿರುವ ಮಹಿಳಾ ಕಾರ್ಮಿಕರು ಸರ್ಕಾರದಿಂದ ಹೆರಿಗೆ ಸೌಲಭ್ಯವನ್ನು ಪಡೆದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
- ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ : ಹಾಗಾದ್ರೆ ಇಂದಿನ ಬೆಲೆ ಹೇಗಿದೆ
- 10ನೇ ತರಗತಿ ಪಾಸಾದವರಿಗೆ 63200 ವೇತನ ಸಿಗುವಂತಹ ಸುವರ್ಣ ಅವಕಾಶ ನೇರ ನೇಮಕಾತಿ