ನಮಸ್ಕಾರ ಸ್ನೇಹಿತರೆ ಬರ ಪರಿಹಾರ ಬಿಡುಗಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಿಕ್ಕಾಟದಿಂದ ತಟಸ್ಥವಾಗಿದ್ದ ಬರ ಪರಿಹಾರ ಇದೀಗ ಬರ ಪರಿಹಾರ ಬಿಡುಗಡೆಗೂ ಕೂಡ ಗಡುಗು ನಿಗದಿಯಾಗಿದ್ದು ರೈತರ ಬ್ಯಾಂಕ್ ಖಾತೆಗೆ ಒಂದು ವಾರದ ಒಳಗಾಗಿ ಜಮಾ ಆಗುವ ಭರವಸೆಯನ್ನು ಸುಪ್ರೀಂ ಕೋರ್ಟ್ ವಿಚಾರಣೆಯ ಮೂಲಕ ವ್ಯಕ್ತವಾಗಿದೆ. ಈ ಬಗ್ಗೆ ನಿನ್ನೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿದ್ದು ಕೇಂದ್ರ ಸರ್ಕಾರ ಏಪ್ರಿಲ್ 29 ರ ಒಳಗಾಗಿ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಹಣಕಾಸು ನೆರವು ತೀವ್ರ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕಕ್ಕೆ ಬಿಡುಗಡೆಗೆ ಕೇಂದ್ರ ಸರ್ಕಾರದ ವಿಳಂಬ ಪ್ರಶ್ನಿಸಿ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಕಾನೂನು ಹೋರಾಟದಲ್ಲಿ ಮುನ್ನಡೆ ಸಾಧಿಸಿದೆ. ಹಾಗಾದರೆ ಕೇಂದ್ರ ಸರ್ಕಾರದಿಂದ ಯಾವ ರೈತರಿಗೆ ಎಷ್ಟು ಬರ ಪರಿಹಾರದ ಹಣ ಬಿಡುಗಡೆಯಾಗಲಿದೆ ರೈತರ ಬ್ಯಾಂಕ್ ಖಾತೆಗೆ ಯಾವಾಗ ಜಮಾ ಆಗಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
ರೈತರ ಬ್ಯಾಂಕ್ ಖಾತೆಗೆ ಏಪ್ರಿಲ್ 29ರ ಒಳಗಾಗಿ ಹಣ ಜಮಾ :
ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹತ ಅವರಿದ್ದ ಪೀಠಕ್ಕೆ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಕೇಂದ್ರ ಸರ್ಕಾರದ ಪರ ಬರ ಪರಿಹಾರ ಬಿಡುಗಡೆ ಕುರಿತು ಮಾಹಿತಿ ನೀಡಿದ್ದಾರೆ. ಬರ ಪರಿಹಾರದ ಹಣವನ್ನು ಕರ್ನಾಟಕಕ್ಕೆ ಒದಗಿಸುವ ವಿಚಾರವನ್ನು ಚುನಾವಣಾ ಆಯೋಗವು ನಿರ್ವಹಿಸಲು ಅನುಮತಿಸಿದೆ ಈ ನಿಟ್ಟಿನಲ್ಲಿ ಏಪ್ರಿಲ್ 29ರ ಒಳಗಾಗಿ ಕೇಂದ್ರ ಸರ್ಕಾರ ಸೂಕ್ತ ಕ್ರಮವನ್ನು ಕೈಗೊಳ್ಳಲಿದೆ ಎಂದು ಅಟಾರ್ನಿ ಜನರಲ್ ರಾಜ್ಯದ ಜನತೆಗೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಬರ ಪರಿಹಾರದ ವಿಚಾರದಲ್ಲಿ ತಟಸ್ಥವಾಗಿದ್ದು ಇದೀಗ ಸುಪ್ರೀಂ ಕೋರ್ಟ್ ನ ವಿಚಾರಣೆಯ ಹಿನ್ನೆಲೆಯಲ್ಲಿ ಏಪ್ರಿಲ್ 29ರ ಒಳಗಾಗಿ ರೈತರ ಬ್ಯಾಂಕ್ ಖಾತೆಗೆ ಬರ ಪರಿಹಾರದ ಹಣ ಬಿಡುಗಡೆ ಮಾಡುವುದರ ಬಗ್ಗೆ ಮಾಹಿತಿಯನ್ನು ತಿಳಿಸಿದೆ. ಒಟ್ಟಾರೆ ರಾಜ್ಯ ಸರ್ಕಾರವು ಬರ ಪರಿಹಾರದ ವಿಚಾರವಾಗಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಮನವಿ ಇದೀಗ ಕರ್ನಾಟಕ ಸರ್ಕಾರದ ಪರವಾಗಿದೆ ಎಂದು ಹೇಳಬಹುದು.
ಇದನ್ನು ಓದಿ : 10 ರೂ ನೋಟು ದೇಶದಲ್ಲಿ ನಿಷೇಧ ಆಗಲಿದೆ.? ಇನ್ನು ಮುಂದೆ ನೋಟು ಲಭ್ಯವಿರುವುದಿಲ್ಲ .?
ಬರದಿಂದಾದ ನಷ್ಟ ರಾಜ್ಯದಲ್ಲಿ ಎಷ್ಟಾಗಿದೆ ?
ಕರ್ನಾಟಕ ರಾಜ್ಯದಲ್ಲಿ ಒಟ್ಟು 234 ತಾಲ್ಲೂಕುಗಳಲ್ಲಿ ಬರೋಬ್ಬರಿ 223 ತಾಲೂಕುಗಳನ್ನು ರಾಜ್ಯ ಸರ್ಕಾರ ಪರಪೀಡಿತ ಪ್ರದೇಶಗಳೆಂದು ಘೋಷಿಸಲ್ಪಟ್ಟಿದೆ ಇದರಲ್ಲಿ 196 ಎದುರಿಸುತ್ತಿವೆ ಎಂದು ಹೇಳಿದ್ದು ರಾಜ್ಯಾದ್ಯಂತ ಮಳೆಯ ಕೊರತೆಯಿಂದಾಗಿ ಒಟ್ಟಾರೆ 48.19 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿವೆ. ಸಣ್ಣ ಮತ್ತು ಅತಿ ಸಣ್ಣ ರೈತರು ಈ ನಷ್ಟದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಹೇಳಬಹುದು.
ಶೀಘ್ರದಲ್ಲಿಯೇ 18 ಸಾವಿರದ177.44 ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಹಣ ಬಿಡುಗಡೆ ಮಾಡಬೇಕೆಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು.
ರಾಜ್ಯ ಸರ್ಕಾರದ ಹೋರಾಟಕ್ಕೆ ಸಿಕ್ಕಿದೆ ಜಯ :
ರಾಜ್ಯ ಸರ್ಕಾರದ ಮಾರ್ಗಸೂಚಿಯ ಪ್ರಕಾರ ರಾಜ್ಯದಲ್ಲಿ ಬರ ಘೋಷಣೆಯಾದ ನಂತರ ಕೇಂದ್ರದ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸತತವಾಗಿ ಮನವಿ ಸಲ್ಲಿಸುತ್ತಾ ಬಂದಿದೆ ಈ ಸಂಬಂಧ ಮೊದಲಿಗೆ ರಾಜ್ಯ ಸರ್ಕಾರ ಕೇಂದ್ರದ ಜೊತೆ ಪತ್ರ ವ್ಯವಹಾರ ನಡೆಸಿತ್ತು.
ಹಣಕಾಸು ಸಚಿವರಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರ ಪರಿಹಾರದ ಹಣವನ್ನು ಕೋರಿ ವಿಸ್ತಾರವಾದಂತಹ ಪತ್ರ ಒಂದನ್ನು ಬರೆದಿದ್ದರು. ಮನವಿ ಪತ್ರಕ್ಕೆ ಯಾವುದೇ ರೀತಿಯ ಪ್ರತ್ಯುತ್ತರ ಬರೆದ ಕಾರಣದಿಂದಾಗಿ ರಾಜ್ಯ ಸಚಿವರ ನಿಯೋಗವು ಕೇಂದ್ರ ಸಚಿವರನ್ನು ಭೇಟಿ ಮಾಡಿದರು.
ರಾಜ್ಯ ಸರ್ಕಾರದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರವರಿಗೆ ಮನವಿಯನ್ನು ಕೂಡ ಸಲ್ಲಿಸಲಾಗಿತ್ತು ಇದಕ್ಕೂ ಕೂಡ ಸ್ಪಂದನೆ ಸಿಗದಿದ್ದಾಗ ರಾಜ್ಯ ಸರ್ಕಾರದ ಸಚಿವರು ಅಂತಿಮವಾಗಿ ಶಾಸಕರು ಸಾಮೂಹಿಕವಾಗಿ ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿಯನ್ನು ನಡೆಸಿ ದೇಶದ ಗಮನವನ್ನು ಸೆಳೆದರು. ಈ ಎಲ್ಲಾ ಕ್ರಮಗಳನ್ನು ಕೈಗೊಂಡ ನಂತರವೇ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ನ ಮೊರೆ ಹೋಯಿತು.
ಸುಪ್ರೀಂ ಕೋರ್ಟ್ನ ಮೊರೆ ಹೋದ ಸರ್ಕಾರ :
ರಾಜ್ಯ ಸರ್ಕಾರವು ನಿರಂತರ ಮನವಿ ವಿನಂತಿ ಧರಣಿಗಳ ನಂತರ ನಮಗೆ ನ್ಯಾಯವಾಗಿ ಸಲ್ಲಬೇಕಾದಂತಹ ಬರ ಪರಿಹಾರ ನೀಡಬೇಕೆಂದು ಕೋರಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ನ ಮೊರೆ ಹೋಗಿತ್ತು ಭರ್ತಿ 5 ತಿಂಗಳ ನಂತರ ಆರಂಭವಾಗಿರುವಂತಹ ಈ ಕಾನೂನು ಸಮರದಲ್ಲಿ ಕೊನೆಯದಾಗಿ ರಾಜ್ಯ ಸರ್ಕಾರಕ್ಕೆ ಜಯ ಸಿಕ್ಕಿದೆ ಎಂದು ಹೇಳಬಹುದು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಗ್ಗೆ ಸೌಹಾರ್ದತೆ ಅಗತ್ಯವನ್ನು ನ್ಯಾಯ ಪೀಠ ತುಂಬಾ ಗಂಭೀರವಾಗಿ ವಿಚಾರಣೆಯ ಸಂದರ್ಭದಲ್ಲಿ ಪ್ರತಿಪಾದಿಸಿದೆ. ಒಕ್ಕೂಟ ವ್ಯವಸ್ಥೆ ದೇಶದಲ್ಲಿ ಇದ್ದು ಈ ವಿಚಾರವನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ನ್ಯಾಯ ಪೀಠ ಕಿವಿಮಾತು ಹೇಳಿದೆ.
ಪರಿಹಾರದ ಹಣ :
ಯಾವ ರೈತರಿಗೆ ಎಷ್ಟು ಪರಿಹಾರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂಬುದನ್ನು ನೋಡುವುದಾದರೆ,
ಗರಿಷ್ಠ ಎರಡು ಹೆಕ್ಟೇರ್ಗೆ ಅಂದರೆ 5 ಎಕರೆಗೆ ಮಾತ್ರ ಕೇಂದ್ರದ ನೀತಿ ಪ್ರಕಾರ ಪರಿಹಾರ ನೀಡಲಾಗುತ್ತದೆ ನೀರಾವರಿ ಬೆಳೆ ಮಳೆಯ ಶ್ರೀತ ಬೆಳೆ ಹಾಗೂ ಬಹು ವಾರ್ಷಿಕ ತೋಟಗಾರಿಕಾ ಬೆಳೆಗಳಿಗೆ ಒಂದೊಂದು ರೀತಿಯ ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರದಿಂದ ನಿಗದಿ ಮಾಡಲಾಗಿದೆ. ಆ ಹೆಕ್ಟೇರ್ ವಾರು ಒತ್ತಡ ವಿವರವನ್ನು ನೋಡುವುದಾದರೆ,
- ಮಳೆಯ ಶ್ರೀತ ಜಮೀನಿಗೆ ಒಂದು ಹೆಕ್ಟರಿಗೆ 8500 ಎರಡು ಹೆಕ್ಟರ್ ಗೆ ಹದಿನೇಳು ಸಾವಿರ ರೂಪಾಯಿಗಳ ಪರಿಪರಿಹಾರವನ್ನು ಒಬ್ಬ ರೈತರಿಗೆ ನೀಡಲಾಗುತ್ತದೆ.
- 17000 ಹೆಕ್ಟೇರ್ಗೆ ಹಾಗೂ 2 ಹೆಕ್ಟೇರ್ಗೆ 34,000ಗಳಂತೆ ನೀರಾವರಿ ಜಮೀನಿಗೆ ಪರಿಹಾರ ನೀಡಲಾಗುತ್ತದೆ.
- ಪ್ರತಿ ಹೆಕ್ಟರಿಗೆ 22500 ಗಳಂತೆ ಎರಡು ಹೆಕ್ಟೇರ್ಗೆ 45,000ಗಳ ಪರಿಹಾರವನ್ನು ಬಹುವಾರ್ಷಿಕ ಬೆಳೆಯಾದ ತೋಟಗಾರಿಕೆ ಬೆಳೆಗಳಿಗೆ ನಿಗದಿಪಡಿಸಲಾಗಿದೆ.
ಹೀಗೆ ಕೇಂದ್ರ ನೀತಿ ಪ್ರಕಾರ ಗರಿಷ್ಠ ಎರಡು ಹೆಕ್ಟರಿಗೆ ಮಾತ್ರ ಪರಿಹಾರವನ್ನು ನೀಡಲಾಗುತ್ತಿದ್ದು ಮೇಲೆ ತಿಳಿಸಲಾದ ರೈತರಿಗೆ ಮಾತ್ರ ಜಮೀನಿಗೆ ಅನುಗುಣವಾಗಿ ಪರಿಹಾರದ ಹಣವನ್ನು ಕೇಂದ್ರ ಸರ್ಕಾರ ನೀಡುತ್ತದೆ.
ಒಟ್ಟಾರೆ ಕೇಂದ್ರ ಸರ್ಕಾರವು ಇದೀಗ ರಾಜ್ಯದ ರೈತರಿಗೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲು ಮುಂದಾಗಿದ್ದು ಸುಪ್ರೀಂ ಕೋರ್ಟ್ ನ ಈ ವಿಚಾರಣೆಯಲ್ಲಿ ರಾಜ್ಯ ಸರ್ಕಾರ ಗೆದ್ದಿದೆ ಎಂದು ಹೇಳಬಹುದು.
ಒಟ್ಟಾರೆ ಕೂಡ ರಾಜ್ಯದ ರೈತರಿಗೆ ಬರ ಪರಿಹಾರದ ಹಣ ಸಿಗುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು ಹಾಗಾಗಿ ಬರ ಪರಿಹಾರದ ಹಣ ಕೇಂದ್ರದಿಂದ ಏಪ್ರಿಲ್ 29ರ ಒಳಗಾಗಿ ರಾಜ್ಯದ ರೈತರಿಗೆ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.