ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ಇವತ್ತಿನ ಲೇಖನದಲ್ಲಿ ಮಹತ್ವದ ವಿಷಯವನ್ನು ತಿಳಿಸಲಾಗುತ್ತಿದೆ. ಸಾಕಷ್ಟು ಜನರು ತಮ್ಮ ಆಧಾರ್ ಕಾರ್ಡ್ಗಳನ್ನು ಮಾಡಿಸಿ ಸುಮಾರು 10 ವರ್ಷಗಳು ಕಳೆದರೂ ಕೂಡ ಇದುವರೆಗೂ ಕೂಡ ಆಧಾರ ಅಪ್ಡೇಟ್ ಮಾಡಿಸಿರುವುದಿಲ್ಲ.
ಹಾಗಾಗಿ ಪ್ರತಿಯೊಬ್ಬರೂ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಬೇಕೆಂದು ಸರ್ಕಾರವೂ ಕೂಡ ಆದೇಶವನ್ನು ಹೊರಡಿಸಿದೆ. ನೀವೇನಾದರೂ 10 ವರ್ಷಗಳಿಗಿಂತ ಮೇಲ್ಪಟ್ಟ ಆಧಾರ್ ಕಾರ್ಡ್ ಅನ್ನು ಒಂದು ವೇಳೆ ಅಪ್ಡೇಟ್ ಮಾಡಿಸದೇ ಇದ್ದರೆ ಡಿಸೆಂಬರ್ 14ರ ಒಳಗಾಗಿ ನವೀಕರಿಸಬಹುದು ಆಧಾರ್ ಕಾರ್ಡ್ ಅನ್ನು ಡಿಸೆಂಬರ್ 14ರ ವರೆಗೆ ಉಚಿತವಾಗಿ ಅಪ್ಡೇಟ್ ಮಾಡಿ ಕೊಡಲಾಗುತ್ತದೆ.
ಹಾಗಾದರೆ ಆಧಾರ ಕಾರ್ಡನ್ನು ಎಲ್ಲಿ ಅಪ್ಡೇಟ್ ಮಾಡಿಸಬೇಕು ಆಪರೇಟ್ ಮಾಡಿಸಲು ಏನೆಲ್ಲ ದಾಖಲೆಗಳನ್ನು ಹೊಂದಬೇಕು ಹೇಗೆ ಅಪ್ಡೇಟ್ ಮಾಡಿಸಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಆಧಾರ್ ಕಾರ್ಡ್ ಅಪ್ಡೇಟ್ ಗೆ ಮತ್ತೆ ಕಾಲಾವಕಾಶ :
ಆಧಾರ್ ಕಾರ್ಡ್ ಸಂಬಂಧಿಸಿದ ವಿವರಗಳನ್ನು ಯುಐಡಿಎಐ ನವೀಕರಿಸಲು ಬಳಕೆದಾರರಿಗೆ ಕೋರಿಕೊಂಡಿದೆ. ಅಲ್ಲದೆ ಉಚಿತವಾಗಿ ಅಪ್ಡೇಟ್ ಮಾಡಲು ನೀಡಿದ್ದ ದಿನಾಂಕವನ್ನು ಕೂಡ ಇದೀಗ 2024 ಮಾರ್ಚ್ 14 ರಿಂದ ಜೂನ್ 14ರವರೆಗೆ ವಿಸ್ತರಿಸಲಾಗಿದೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಈ ಗಡುವನ್ನು ವಿಸ್ತರಿಸಿರುವುದು ಇದು ಮೂರನೇ ಬಾರಿಯಾಗಿದೆ.
- ಸೆಪ್ಟೆಂಬರ್ 14ರ ವರೆಗೂ ಮೊದಲ ಬಾರಿಗೆ ಗಡುವು ನೀಡಲಾಗಿತ್ತು
- ಅದಾದ ನಂತರ ಡಿಸೆಂಬರ್ 14ಕ್ಕೆ ಮತ್ತೆ ದಿನಾಂಕ ವಿಸ್ತರಣೆ ಮಾಡಲಾಯಿತು.
- ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಗಡುವನ್ನು ಜನರು ಉತ್ತಮವಾಗಿ ಸ್ಪಂದಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿಸಲಾಗಿದೆ ಎಂದು ಯುಐಡಿಎಐ ತಿಳಿಸಿದೆ. ಇದೀಗ ಮತ್ತೊಮ್ಮೆ ಜೂನ್ 14ರವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಇದರ ಗಡುವನ್ನು ವಿಸ್ತರಿಸಲಾಗಿದೆ.
ಹೀಗೆ ಈ ದಿನಾಂಕದೊಳಗೆ 10 ವರ್ಷ ಹಳೆಯ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ಯುಐಡಿಎಐ ದಿನಾಂಕವನ್ನು ವಿಸ್ತರಣೆ ಮಾಡುತ್ತಲೇ ಇದೆ.
ಆಧಾರ್ ತಿದ್ದುಪಡಿ ಮತ್ತು ನವೀಕರಣವನ್ನು ಉಚಿತವಾಗಿ ಮಾಡಿಕೊಳ್ಳಿ :
ಉಚಿತ ಆಧಾರ ನವೀಕರಣದ ಗಡುವನ್ನು ಯುಐಡಿಎಐ ಇನ್ನು ಮೂರು ತಿಂಗಳುಗಳ ಕಾಲ ವಿಸ್ತರಿಸಿದೆ. ಜೂನ್ 14ರವರೆಗೆ ಇದರ ಪ್ರಕಾರ ವಿಸ್ತರಿಸಲಾಗಿದ್ದು ಉಚಿತವಾಗಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ಅವಕಾಶ ನೀಡಲಾಗಿದೆ. ಸಾಕಷ್ಟು ಜನರು ತಮ್ಮ ಹಳೆಯ ಆಧಾರ್ ಕಾರ್ಡು 10 ವರ್ಷಗಳಾಗಿದ್ದರೂ ಕೂಡ ಅದನ್ನು ಅಪ್ಡೇಟ್ ಮಾಡಿಸಿರುವುದಿಲ್ಲ ಹಾಗಾಗಿ ಮತ್ತೊಮ್ಮೆ ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿರುವ ಕಾರಣ 10 ವರ್ಷಗಳಿಗಿಂತ ಮೇಲ್ಪಟ್ಟ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡಿಸಬಹುದಾಗಿದೆ.
ಆಧಾರ್ ಕಾರ್ಡ್ ನವೀಕರಣ ವಾಗಿ 50 ರೂಪಾಯಿಗಳ ಶುಲ್ಕವನ್ನು ಪಾವತಿಸಬೇಕು ಆದರೆ ಆಧಾರ್ ಕಾರ್ಡ್ ಅಧಿಕೃತ ವೆಬ್ಸೈಟ್ ಮೂಲಕ ಅಪ್ಡೇಟ್ ಮಾಡಿದರೆ ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಆನ್ಲೈನ್ ನಲ್ಲಿ ಅಪ್ ಡೇಟ್ ಮಾಡಲು ಕೇವಲ ಶುಲ್ಕವಿರುವುದಿಲ್ಲ ಆದರೆ ಸಾಮಾನ್ಯ ಸೇವ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಶುಲ್ಕ ಅನ್ವಯಿಸಲಾಗುತ್ತದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಈ ಬಗ್ಗೆ ಟ್ವೀಟ್ ಮಾಡಿದ್ದು ಆಧಾರ್ ಕೇಂದ್ರಗಳಿಗೆ ಗಡು, ಮೀರಿದ ನಂತರ ಭೇಟಿ ನೀಡಿ ಆಧಾರ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಬೇಕೆಂದರೆ 50 ರೂಪಾಯಿಯ ಶುಲ್ಕವನ್ನು ಪಾವತಿ ಮಾಡಬೇಕೆಂದು ಪ್ರಾಧಿಕಾರ ತಿಳಿಸಿದೆ. ಅದರ ಜೊತೆಗೆ ವಿಶೇಷ ಸೂಚನೆ ಏನೆಂದರೆ ಆಧಾರ್ ಕಾರ್ಡನ್ನು ನವೀಕರಿಸುವ ಸಂದರ್ಭದಲ್ಲಿ ನಿಮ್ಮ ಫೋಟೋವನ್ನು ಸಹ ನವೀಕರಿಸುವುದು ಅಗತ್ಯವಾಗಿದೆ.
ಇದನ್ನು ಓದಿ : BMTC Job : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನೇಮಕಾತಿ :ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ
ಆಧಾರ್ ಕಾರ್ಡ್ ಅಪ್ಡೇಟ್ ಯಾರಿಗೆಲ್ಲ ಅನ್ವಯವಾಗುತ್ತದೆ ?
ಹತ್ತು ವರ್ಷಗಳ ಆಧಾರ್ ಕಾರ್ಡನ್ನು ಮುಖ್ಯವಾಗಿ ಪೂರ್ಣಗೊಳಿಸಿದ ಬಳಕೆದಾರರು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದು ಮುಖ್ಯವಾಗಿರುತ್ತದೆ. ಅದರ ಜೊತೆಗೆ ಯುಐಡಿಎಐ ತಿಳಿಸಿದ ಪ್ರಕಾರ ದಾಖಲೆಗಳನ್ನು ಕೂಡ ಬಳಕೆದಾರರು ನವೀಕರಿಸಬೇಕು.
ಈ ರೀತಿಯ ಒಂದು ಹೊಸ ಬದಲಾವಣೆ ಮಾಡಿದರೆ ಸಾಕಷ್ಟು ಸಹಾಯವಾಗಲಿದೆ ಇನ್ನು ಮತದಾರರ ಗುರುತಿನ ಚೀಟಿ ಪಡಿತರ ಚೀಟಿ ಸರ್ಕಾರಿ ಗುರುತಿನ ಚೀಟಿಯಲ್ಲಿಯೂ ಕೂಡ ಇದೇ ವಿಳಾಸವಿದೆ ಆದರೆ ಪಾಸ್ಪೋರ್ಟ್ ಮತ್ತು ಐಡೆಂಟಿಟಿ ಕಾರ್ಡ್ ಹಾಗೂ ಗುರುತಿನ ಕಾರ್ಡಿನಲ್ಲಿ ಇದನ್ನೇ ಬಳಸುತ್ತೇವೆ.
ಅಲ್ಲದೆ ಶಾಲಾ ಪ್ರಮಾಣ ಪತ್ರದಲ್ಲಿಯೂ ಕೂಡ ಫೋಟೋ ಇದೇ ಆಗಿರುವ ಕಾರಣ ಸಮಯಕ್ಕೆ ಸರಿಯಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದು ಉತ್ತಮವಾಗಿರುತ್ತದೆ. ಅದರ ಜೊತೆಗೆ ಅದರಲ್ಲಿರುವ ಬಯೋಮೆಟ್ರಿಕ್ಸ್ ಕೂಡ ನೀಡಲಾಗಿದೆ ಎಂದು ತಿಳಿಸಲಾಗಿದ್ದು 10 ವರ್ಷಗಳ ನಂತರ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನ್ನ ಆಧಾರ್ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ.
ಮೈ ಆಧಾರ್ ಪೋರ್ಟಲ್ ನಲ್ಲಿ ಆಧಾರ್ ಕಾರ್ಡ್ ನ ಹೆಸರು ವಿಳಾಸ ಮತ್ತು ಹುಟ್ಟಿದ ದಿನಾಂಕವನ್ನು ಉಚಿತವಾಗಿ ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ನವೀಕರಿಸಬಹುದಾಗಿದೆ.
ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಬೇಕಾಗುವ ದಾಖಲೆಗಳು :
ಹತ್ತು ವರ್ಷ ಹಳೆಯ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಬೇಕಾದರೆ ಕೆಲವೊಂದು ದಾಖಲೆಗಳನ್ನು ಹೊಂದುವುದರ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕಾಗುತ್ತದೆ.
- ಪಡಿತರ ಚೀಟಿ
- ಬ್ಯಾಂಕ್ ಪಾಸ್ ಬುಕ್
- ಪಾಸ್ಪೋರ್ಟ್
- ಗುರುತಿನ ಚೀಟಿ
- ಜಾತಿ ಪ್ರಮಾಣ ಪತ್ರ
- ಮತದಾರರ ಗುರುತಿನ ಚೀಟಿ
- ಮದುವೆ ಪ್ರಮಾಣ ಪತ್ರ
ಹೀಗೆ ಕೆಲವೊಂದು ದಾಖಲೆಗಳನ್ನು ಹೊಂದುವುದರ ಮೂಲಕ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬಹುದಾಗಿದೆ.
ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ವಿಧಾನ :
ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಆಧಾರ ಕಾರ್ಡ್ ಅನ್ನು ಅಪ್ಡೇಟ್ ಮಾಡಬಹುದಾಗಿತ್ತು ಆಧಾರ್ ಕಾರ್ಡ್ ನಲ್ಲಿ ಇರುವಂತಹ ನಿಮ್ಮ ಜನ್ಮ ದಿನಾಂಕ ಹೆಸರು ವಿಳಾಸ ಹೀಗೆ ಎಲ್ಲದರ ತಿದ್ದುಪಡಿ ಯನ್ನು ಆನ್ಲೈನ್ ಮುಖಾಂತರ ಮಾಡಬಹುದಾಗಿದೆ. ಆನ್ಲೈನ್ ಮುಖಾಂತರ ಮಾಡಲು ಈ ಸರಳ ವಿಧಾನವನ್ನು ಅನುಸರಿಸಬಹುದು.
- ಆನ್ಲೈನ್ ಮುಖಾಂತರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಮೊದಲು ಮೈ ಆಧಾರ್ ವೆಬ್ಸೈಟ್ ಗೆ ಭೇಟಿ ನೀಡಬೇಕು.
- https://myaadhaar.uidai.gov.in/
- ಈ ವೆಬ್ ಸೈಟ್ ಗೆ ಭೇಟಿ ನೀಡಿ ಲಾಗಿನ್ ಆದ ನಂತರ ಅದರಲ್ಲಿ ಆಧಾರ್ ಕಾರ್ಡ್ ನಂಬರ್ ಹಾಗೂ ಕ್ಯಾಪ್ಚ ಕೋಡ್ ಅನ್ನು ಎಂಟರ್ ಮಾಡಬೇಕು.
- ಅದಾದ ನಂತರ ಸೆಂಡ್ ಒಟಿಪಿ ಎಂಬುದರ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರಿಜಿಸ್ಟರ್ ಫೋನ್ ನಂಬರ್ ಗೆ ಓಟಿಪಿ ಬರುತ್ತದೆ ಅದಾದ ನಂತರ ಓಟಿಪಿ ಅನ್ನು ಎಂಟರ್ ಮಾಡಿ ಲಾಗಿನ್ ಆಗಬೇಕು.
- ನೀವು ಆಧಾರ್ ಕಾರ್ಡ್ ನಲ್ಲಿ ಯಾವ ರೀತಿಯ ಮಾಹಿತಿಯನ್ನು ನವೀಕರಿಸಬೇಕು ಅದನ್ನು ಆಯ್ಕೆ ಮಾಡಿ ಅಡ್ರೆಸ್ ಎಂಬ ಆಯ್ಕೆಯನ್ನು ಉದಾಹರಣೆಗೆ ಮಾಡಬೇಕಾಗುತ್ತದೆ.
- ಅದಾದ ನಂತರ ವಿಳಾಸ ದೃಢೀಕರಣ ದಾಖಲೆಯ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಿದ ನಂತರ ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಗೆ ಅಪ್ಡೇಟ್ ರಿಕ್ವೆಸ್ಟ್ ಸಂಖ್ಯೆ ಬರುತ್ತದೆ.
- ನಿಮ್ಮ ವಿಳಾಸ ಅಥವಾ ಇತರ ಯಾವುದೇ ಮಾಹಿತಿ ಆಧಾರದಲ್ಲಿ 15 ದಿನದೊಳಗಾಗಿ ಅಪ್ ಡೇಟ್ ಆಗುತ್ತದೆ.
ಹೀಗೆ ಆನ್ಲೈನ್ ಮೂಲಕ ಆಧಾರ್ ಕಾರ್ಡ್ ನಲ್ಲಿ ಯಾವ ರೀತಿಯ ಮಾಹಿತಿಯನ್ನು ನೀವು ಅಪ್ಡೇಟ್ ಮಾಡಲು ಬಯಸುತ್ತೀರೋ ಆ ಎಲ್ಲಾ ಮಾಹಿತಿಯನ್ನು ಅಪ್ಡೇಟ್ ಮಾಡಬಹುದಾಗಿದೆ.
ಒಟ್ಟಾರೆ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ನ ಮಾಹಿತಿಯನ್ನು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಲು ತಿಳಿಸಿದ್ದು ಇದೀಗ ಜೂನ್ 14ರ ವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಉಚಿತವಾಗಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಯುಐಡಿಎಐ ಪ್ರಾಧಿಕಾರವು ಆಧಾರ್ ಕಾರ್ಡ್ ಅಪ್ಡೇಟ್ ನ ಅವಧಿಯನ್ನು ವಿಸ್ತರಿಸಿದೆ ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಹೆಣ್ಣು ಮಗುವಿಗೆ ಸಿಗಲಿದೆ 70 ಲಕ್ಷ : ಮಗುವಿನ ಹೆಸರಿನಲ್ಲಿ ಈ ಖಾತೆ ತೆರೆಯಿರಿ.! ಕೇಂದ್ರ ಸರ್ಕಾರ
- ರೈಲ್ವೆ ಇಲಾಖೆ ಉದ್ಯೋಗ : ಒಟ್ಟು 9,144 ಹುದ್ದೆಗಳಿಗೆ ಅರ್ಜಿ ಆಹ್ವಾನ SSLC ಪಾಸ್ ಆದವರು ಅರ್ಜಿ ಸಲ್ಲಿಸಿ
ಆಧಾರ್ ಕಾರ್ಡ್ ತಿದ್ದುಪಡಿಗೆ ಎಷ್ಟು ದಿನ ವಿಸ್ತರಣೆ ..?
3 ತಿಂಗಳುಗಳ ಕಾಲ ವಿಸ್ತರಿಸಿದೆ.
ಕೊನೆ ದಿನಾಂಕ ಯಾವುದು ..?
ಇದೀಗ ಜೂನ್ 14ರ ವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಇದೆ.