ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಹೊಸ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಮಾಹಿತಿಯನ್ನು ತಿಳಿಸಲಾಗುತ್ತಿದ್ದು ರಾಜ್ಯ ಸರ್ಕಾರ ಇದೀಗ ಹೊಸ ಬಿಪಿಎಲ್ ಎಪಿಎಲ್ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಪ್ರಾರಂಭ ಮಾಡುತ್ತದೆ ಹಾಗೂ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳು ಅಂದರೆ ಬಾಕಿ ಉಳಿದಿರುವ ಅರ್ಜಿ ವಿಲೇವಾರಿಗೆ ಆಹಾರ ಇಲಾಖೆಯು ತಯಾರಿ ನಡೆಸಿದೆ.
ಈಗಾಗಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸಭೆ ನಡೆಸಿ ಚರ್ಚಿಸಿದ್ದು ಬಹುತೇಕ ಜೂನ್ ಮೊದಲ ವಾರದಲ್ಲಿ ರೇಷನ್ ಕಾರ್ಡ್ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅದರಂತೆ ಯಾವ ದಿನದಂದು ಅರ್ಜಿಗಳು ವಿಲೇವಾರಿಯಾಗಲಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಪ್ರಕ್ರಿಯೆ ಪ್ರಾರಂಭ :
ಹೊಸ ಪಡಿತರ ಚೀಟಿಗೆ ಕಳೆದ ಏಪ್ರಿಲ್ ಒಂದರಿಂದಲೇ ಅರ್ಜಿ ಪ್ರಕ್ರಿಯೆ ಹಾಗೂ ಬಾಕಿ ಉಳಿದಿರುವ ಅರ್ಜಿ ವಿಲೇವಾರಿ ಪ್ರಕ್ರಿಯೆಗೆ ಈ ಹಿಂದೆ ಚಾನಲ್ ನೀಡುವುದಾಗಿ ಆಹಾರ ಸಚಿವರಾದ ಕೆಎಚ್ ಮುನಿಯಪ್ಪ ರವರು ತಿಳಿಸಿದ್ದರು. ಆದರೆ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು.
ಕಳೆದ ಮ್ಯಾಚ್ 16ರಂದು ಲೋಕಸಭಾ ಚುನಾವಣೆ ದೇಶದಾದ್ಯಂತ ಘೋಷಣೆಯಾಗಿದ್ದು ರಾಜ್ಯದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ ಹಂತದಲ್ಲಿ ಹಾಗೂ ಉಳಿದ 14 ಕ್ಷೇತ್ರಗಳಿಗೆ ಮೇ 7ರಂದು ಎರಡನೇ ಹಂತದಲ್ಲಿ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದೆ ಆದರೆ ಮತದಾನ ಮುಗಿ ದರು ಕೂಡ ಮತ ಎಣಿಕೆ ಮತ್ತು ಫಲಿತಾಂಶಕ್ಕಾಗಿ ಜೂನ್ 4 ರವರಿಗೆ ಕಾಯಲೇಬೇಕು.
ಚುನಾವಣಾ ನೀತಿ ಸಂಹಿತೆ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ತನಕ ಮುಂದುವರೆಯಲಿದ್ದು ನೀತಿ ಸಂಹಿತೆ ನಿರ್ಬಂಧ ಜೂನ್ ಆರರ ನಂತರ ವಸ್ತೆ ತೆರವುಗೊಳ್ಳಲಿದೆ ಅದಾದ ತಕ್ಷಣವೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಲಿ ಸಾಧ್ಯತೆ ಹೆಚ್ಚಾಗಿದೆ.
ಇದನ್ನು ಓದಿ : ಗೃಹಲಕ್ಷ್ಮಿ 10ನೇ ಕoತಿನ ಹಣವನ್ನು ಬಿಡುಗಡೆ ಮಾಡಿದ ರಾಜ್ಯ ಸರ್ಕಾರ : ಫಲಾನುಭವಿಗಳಿಗೆ ಸಿಹಿ ಸುದ್ದಿ
2,95,986 ಅರ್ಜಿಗಳು ವಿಲೇವಾರಿ :
2,95,986 ಅರ್ಜಿಗಳು ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ಕೋರಿ ಸಲ್ಲಿಕೆಯಾಗಿದ್ದು ಇವೆಲ್ಲವೂ ಕೂಡ ಇದೀಗ ಬಾಕಿ ಉಳಿದಿವೆ ಒಂದು ವೇಳೆ ಸರ್ಕಾರ ಏನಾದರೂ ಅನುಮತಿ ಕೊಟ್ಟರೆ ಅನರ್ಹರನ್ನು ಪತ್ತೆ ಮಾಡಿ ಅದಾದ ನಂತರ ಪಡಿತರ ಚೀಟಿಯನ್ನು ವಿತರಣೆ ಮಾಡುವ ಕೆಲಸ ಪ್ರಾರಂಭವಾಗುತ್ತದೆ ಎಂಬ ಸೂತ್ರ ಅಳವಡಿಸಿಕೊಂಡು ಆಹಾರ ಇಲಾಖೆಯ ಪಡಿತರ ಚೀಟಿಯ ಅರ್ಜಿಗಳನ್ನು ವಿಲೇವಾರಿ ಮಾಡಲಿದೆ.
ರೇಷನ್ ಕಾರ್ಡ್ ನಲ್ಲಿ ಈಗಾಗಲೇ ಹೆಸರು ಬದಲಾವಣೆ ಹೊಸ ಹೆಸರು ಸೇರ್ಪಡೆ ಮೃತಪಟ್ಟವರ ಹೆಸರು ತೆಗೆದು ಹಾಕುವುದು ವಿಳಾಸ ಪರಿಷ್ಕರಣೆ ಹಾಗೂ ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಸೇರಿದಂತೆ ಹಲವಾರು ತಿದ್ದುಪಡಿಗೆ ರಾಜ್ಯದ ಆಹಾರ ಇಲಾಖೆಯ ಅವಕಾಶ ಕಲ್ಪಿಸಿದೆ ಆದರೆ ಈಗ ಅದನ್ನು ಕೂಡ ಸಹಿತ ಮಾಡಲಾಗಿದ್ದು ಎಲ್ಲವೂ ಕೂಡ ಜೂನ್ ಮೊದಲ ವಾರದಲ್ಲಿ ಪುನರ್ ಆರಂಭವಾಗಲಿವೆ ಎಂದು ಹೇಳಲಾಗುತ್ತಿದೆ.
ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳು :
ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಆನ್ ಲೈನ್ ಮುಖಾಂತರ ಅವಕಾಶ ಕಲ್ಪಿಸಲಾಗಿದ್ದು ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಕೆಳಗಿನ ದಾಖಲೆಗಳನ್ನು ಹೊಂದಿರಬೇಕು.
- ವೋಟರ್ ಐಡಿ
- ಡ್ರೈವಿಂಗ್ ಲೈಸೆನ್ಸ್
- ಆಧಾರ್ ಕಾರ್ಡ್
- ಕುಟುಂಬದ ಆದಾಯ ಪ್ರಮಾಣ ಪತ್ರ
- ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ
- ಮೊಬೈಲ್ ನಂಬರ್
- ಇಮೇಲ್ ಐಡಿ
- ವರ್ಲ್ಡ್ ಕೌನ್ಸಿಲರ್ ನೀಡಿದಂತಹ ಸ್ವಯಂ ಘೋಷಣೆ ಪ್ರಮಾಣ ಪತ್ರ.
ಅರ್ಜಿ ಸಲ್ಲಿಸುವ ವಿಧಾನ :
ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. https://www.ahara.kar.nic.in ಈ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ಅಗತ್ಯ ದಾಖಲಾತಿಗಳೊಂದಿಗೆ ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟಾರೆ ರಾಜ್ಯ ಸರ್ಕಾರವು ಇದೀಗ ಚುನಾವಣೆ ಫಲಿತಾಂಶ ಬಿಡುಗಡೆಯಾದ ನಂತರವೇ ಅಂದರೆ ಜೂನ್ 6 ರ ನಂತರ ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಬಹುದು ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವರೇನಾದರು ಬಯಸುತ್ತಿದ್ದರೆ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.