ನಮಸ್ಕಾರ ಸ್ನೇಹಿತರೇ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಮುಖ್ಯವಾದ ಯೋಜನೆ ಎಂದರೆ ಅದು ಅನ್ನಭಾಗ್ಯ ಯೋಜನೆಯಾಗಿದೆ ಈ ಯೋಜನೆಯ ಬಡವರ್ಗದ ಜನತೆಗೆ ಹೆಚ್ಚು ನೆರವಾಗುತ್ತಿದೆ ಎಂದು ಹೇಳಬಹುದು. ಈ ಯೋಜನೆಯ ಮುಖ್ಯ ಉದ್ದೇಶ ಬಡವರ ಹಸಿವು ನೀಗಿಸಬೇಕೆಂಬುದಾಗಿದ್ದು ಆ ಉದ್ದೇಶದಿಂದಲೇ ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ -ಇಂದು ಮಾರ್ಚ್ ತಿಂಗಳ ಹಣ ಜಮೆ.
2013ರಲ್ಲಿ ಅನ್ನಭಾಗ್ಯ ಯೋಜನೆಯನ್ನು ರಾಜ್ಯ ಸರ್ಕಾರ ಪ್ರಾರಂಭಿಸಿತು ಈ ಯೋಜನೆಯ ಮೂಲಕ ಅಗತ್ಯ ಆಹಾರ ಧಾನ್ಯಗಳನ್ನು ಬಡವರಿಗೆ ಒದಗಿಸಬೇಕು ಮೂಲಭೂತ ಅವಶ್ಯಕತೆ ಆಹಾರ ಪದಾರ್ಥಗಳು ಎಲ್ಲಾ ಬಡವರಿಗೂ ಸಿಗಬೇಕೆ ಎನ್ನುವುದು ರಾಜ್ಯ ಸರ್ಕಾರದ ಆಶಯವಾಗಿದೆ.
ಆಹಾರ ಧಾನ್ಯದ ಜೊತೆಗೆ ಹಣವು ಕೂಡ ಜಮೆ :
ಇದೀಗ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹೆಚ್ಚುವರಿ ಅಕ್ಕಿಯ ಬದಲಾಗಿ ಹಣವನ್ನು ಕೂಡ ನೇರವಾಗಿ ಜಮಾ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರವು ಕಳೆದ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆ ಮೂಲಕ 10 ಕೆ.ಜಿ ಅಕ್ಕಿ ನೀಡುವ ಭರವಸೆ ನೀಡಿತ್ತು.
ಆದರೆ ಕೇಂದ್ರ ಸರ್ಕಾರದಿಂದ ಅಕ್ಕಿ ಕೊರತೆಯಿಂದಾಗಿ ಕೇವಲ 5 ಕೆಜಿ ಅಕ್ಕಿ ನೀಡುತ್ತಿದ್ದು ಹಿನ್ನಡೆದ 5 ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು ರಾಜ್ಯ ಸರ್ಕಾರ ನೀಡಲು ನಿರ್ಧರಿಸಿದೆ ಅದರಂತೆ ಇದೀಗ ಪ್ರತಿ ಕೆಜಿಗೆ 34 ರೂಪಾಯಿಗಳಂತೆ 170 ರೂಪಾಯಿಗಳ ಹಣವನ್ನು 5 ಕೆಜಿ ಅಕ್ಕಿಗೆ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೂ ನೀಡಲಾಗುತ್ತಿದೆ.
ಇದೀಗ ಅನ್ನಭಾಗ್ಯ ಯೋಜನೆಯ ಮಾರ್ಚ್ ತಿಂಗಳ ಹಣ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ತಿಳಿಯಬಹುದು.
ಇದನ್ನು ಓದಿ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನೇಮಕಾತಿಗೆ ಅಧಿಸೂಚನೆ : ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಅಹ್ವಾನ
ಮಾರ್ಚ್ ತಿಂಗಳ ಹಣ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆಯಾ ?
ಕೆಲವರಿಗೆ ಜನವರಿ ತಿಂಗಳವರೆಗೆ ಮಾತ್ರ ಇಲ್ಲಿಯವರೆಗೂ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದ್ದು ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಹಣ ಇನ್ನೂ ಕೂಡ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಬೇಕಾಗಿದೆ.
ಹೌದು ಕೆಲವರು ಬ್ಯಾಂಕ್ ಖಾತೆಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣವು ಜಮಾ ಆಗಿದ್ದು ಉಳಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಇದೆ ತಿಂಗಳ ಕೊನೆಯಲ್ಲಿ ಅನ್ನಭಾಗ್ಯ ಯೋಜನೆಯ ಹಣ ಜಮಾ ಮಾಡಲಾಗುತ್ತದೆ ಎಂದು ಆಹಾರ ಇಲಾಖೆಯು ರಾಜ್ಯದ ಜನತೆಗೆ ಸ್ಪಷ್ಟನೆ ನೀಡಿದೆ.
ಈ ಕಾರಣಗಳಿಂದಾಗಿ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆಯಾಗುತ್ತಿಲ್ಲ :
ಸಾಕಷ್ಟು ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯ ಹಣ ತಲುಪುತ್ತಿಲ್ಲ ಇದಕ್ಕೆ ಮುಖ್ಯ ಕಾರಣ ಏನೆಂದರೆ ಮನೆಯ ಹಿರಿಯ ಸದಸ್ಯರ ಅಲಭ್ಯತೆ ಪ್ರಮುಖ ಕಾರಣವಾಗಿದ್ದು ಅವರ ಆಧಾರ್ ಹಾಗೂ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳು ಇರುವ ಕಾರಣದಿಂದಾಗಿ ಕುಟುಂಬದ ಯಜಮಾನ ಲಭ್ಯವಿಲ್ಲದಿದ್ದರೆ ಸರ್ಕಾರವು ಪರ್ಯಾಯ ಮಾರ್ಗಕ್ಕೆ ಮುಂದಾಗಿದ್ದು ಕುಟುಂಬದ ಮುಖ್ಯಸ್ಥನ ನಂತರದ ವ್ಯಕ್ತಿಗೆ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮೊಬೈಲ್ ಮೂಲಕವೇ ಯೋಜನೆಯ ಹಣ ಚೆಕ್ ಮಾಡಬಹುದು :
- ನೀವೇನಾದರೂ ಅನ್ನ ಭಾಗ್ಯ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಮೊದಲು ಕರ್ನಾಟಕದ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- https://ahara.kar.nic.in/ಈ ವೆಬ್ ಸೈಟಿಗೆ ಭೇಟಿ ನೀಡಿದ ನಂತರ ಅದರಲ್ಲಿ ಈ ಸೇವೆಗಳು ಎಂಬ ಆಪ್ಷನ್ ಕಾಣಿಸುತ್ತದೆ.
- ಅದರಲ್ಲಿ ನೀವು ಡಿವಿಟಿ ಸ್ಟೇಟಸ್ ಎಂಬುದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ವರ್ಷ ತಿಂಗಳು ಯಾವುದೇ ಎಂಬುದನ್ನು ಆಯ್ಕೆ ಮಾಡಿದ ನಂತರ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಮತ್ತು ಕಂಟಿನ್ಯೂ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
- ಇದರಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರುವುದರ ಬಗ್ಗೆ ಮಾಹಿತಿಯನ್ನು ತಿಳಿಯಬಹುದಾಗಿದೆ.
ಹೀಗೆ ಅನ್ನಭಾಗ್ಯ ಯೋಜನೆಯ ಹಣ ಮಾರ್ಚ್ ತಿಂಗಳಲ್ಲಿ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದ್ದು ಇದೀಗ ಕೆಲವೇ ಜನರಿಗೆ ಮಾತ್ರ ಅನ್ನ ಭಾಗ್ಯ ಯೋಜನೆಯ ಹಣ ವರ್ಗಾವಣೆಯಾಗಬೇಕಾಗಿದೆ.
ಹಾಗಾಗಿ ಮಾರ್ಚ್ 31ರ ಒಳಗಾಗಿ ಸರ್ಕಾರವು ಎಲ್ಲಾ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲು ನಿರ್ಧರಿಸಿದೆ ಹಾಗಾಗಿ ಮಾರ್ಚ್ 31ರ ವರೆಗೆ ಫಲಾನುಭವಿಗಳಿಗೆ ಕಾಯಬೇಕೆಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಗೃಹಲಕ್ಷ್ಮಿ 7 ಕಂತಿನ ಹಣ ಜಮಾ : ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಿ ಇಲ್ಲಿದೆ ಲಿಂಕ್
- ಕೇಂದ್ರ ಸರ್ಕಾರದಿಂದ 11,000 ಉಚಿತ : ಮೋದಿ ಯಾರಿಗೆ ಹಣ ನೀಡುತ್ತಿದ್ದಾರೆ ತಿಳಿದುಕೊಳ್ಳಿ ಹಾಗೆ ಪಡೆದುಕೊಳ್ಳಿ
ಅನ್ನಭಾಗ್ಯ ಹಣ ಎಷ್ಟು ಬರುತ್ತೆ ..?
ಒಂದು ರೇಷನ್ ಕಾರ್ಡ ಜನರ ಸಂಖ್ಯೆ ಆಧಾರದಲ್ಲಿ ಹಣ ಜಮಾ ಆಗುತ್ತೆ.
ಅನ್ನಭಾಗ್ಯ ಹಣ ಯಾಕೆ ನೀಡುತ್ತಾರೆ ..?
ಅಕ್ಕಿ ನೀಡದ ಕಾರಣ ಅದರ ಬದಲು ಹಣ ನೀಡುತ್ತಾರೆ.