ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಒಂದು ಹೊಸ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಯೋಜನೆಯನ್ನು ಜಾರಿಗೆ ತಂದಿದ್ದು ದೇಶದ ಲಕ್ಷಾಂತರ ಜನರು ಪೋಸ್ಟ್ ಆಫೀಸ್ನಲ್ಲಿ ಈ ಯೋಜನೆಯ ಅಡಿಯಲ್ಲಿ ತಮ್ಮ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆಗಳನ್ನು ತೆರೆದು ಹೂಡಿಕೆ ಮಾಡುತ್ತಿದ್ದಾರೆ.
ಈ ರೀತಿ ಹೂಡಿಕೆ ಮಾಡುವುದರಿಂದ ಪೋಷಕರು ತಮ್ಮ ಹೆಣ್ಣು ಮಕ್ಕಳ ಭವಿಷ್ಯ ಉಜ್ವಲ ಗೊಳಿಸುವ ಆಸೆಯನ್ನು ಹೊತ್ತುಕೊಂಡಿದ್ದಾರೆ ಎಂದು ಹೇಳಬಹುದು. ಅದರಂತೆ ಸುಕನ್ಯ ಸಮೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರವು ಯಾವಾಗ ಪ್ರಾರಂಭ ಮಾಡಿದ್ದು ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಈ ಯೋಜನೆಯಿಂದ ಸಿಗುವ ಲಾಭವೇನು? ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.
ಕೇಂದ್ರದ ಸುಕನ್ಯ ಸಮೃದ್ಧಿ ಯೋಜನೆ :
ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಅರ್ಜಿದಾರರು ಹೂಡಿಕೆ ಮಾಡಲು ಪ್ರಾರಂಭಿಸಿದ ನಂತರ ತಮ್ಮ ಮಗಳಿಗೆ 18 ವರ್ಷ ತುಂಬಿದಾಗ ಉತ್ತಮ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ನೀಡಲು ಆ ಖಾತೆಯಿಂದ ಸರ್ಕಾರವು 50 ಪ್ರತಿಶತದ ಹಣವನ್ನು ಹಿಂಪಡೆಯಲು ಅವಕಾಶ ನೀಡುತ್ತದೆ. ಕಡಿಮೆ ಹೂಡಿಕೆಯಲ್ಲಿ ಯೋಜನೆಯ ಅಡಿಯಲ್ಲಿ ಲಕ್ಷ ಮೊತ್ತದ ಲಾಭವನ್ನು ಪಡೆಯುವ ಅವಕಾಶ ನೀಡಲಾಗಿದ್ದು. ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಎಸ್ ಎಸ್ ವೈ ಖಾತೆಯನ್ನು ತೆರೆಯಲು ಹೆಚ್ಚಿಸಿದರೆ ಈ ಒಂದು ಯೋಜನೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು.
ಯೋಜನೆ ಲಿಂಕ್ : https://www.nsiindia.gov.in/
ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆಯ ಮಿತಿ :
ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಅವರ ಶಿಕ್ಷಣಕ್ಕಾಗಿ ಹಾಗೂ ವಿವಾಹಕ್ಕಾಗಿ ಆರ್ಥಿಕ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಸುಖನ್ಯ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಿದೆ. ಮಗಳ ಹೆಸರಿನಲ್ಲಿ ಈ ಯೋಜನೆಯಲ್ಲಿ ಆಕೆಯ ಪೋಷಕರು ಖಾತೆಯನ್ನು ತೆರೆಯಬಹುದಾಗಿದೆ ಆದರೆ ಮಿತಿಗಳನ್ನು ಸಹ ಈ ಹೂಡಿಕೆಯ ಯೋಜನೆಯಲ್ಲಿ ಹೂಡಿಕೆ ಮಾಡಲು ನಿಗದಿಪಡಿಸಲಾಗಿದೆ.
ಸುಕನ್ಯ ಸಮೃದ್ಧಿ ಯೋಜನೆ ಯಲ್ಲಿ ಹುಡುಗಿಯ ಮಿತಿಯನ್ನು ಅಂಚೆ ಇಲಾಖೆಯು ನಿಗದಿಪಡಿಸಿದ್ದು ಹೂಡಿಕೆಯ ಮಿತಿಯನ್ನು ವಾರ್ಷಿಕ ಆಧಾರದ ಮೇಲೆ ಈ ಯೋಜನೆಯಲ್ಲಿ ನಿಗದಿಪಡಿಸಲಾಗಿದೆ. ಮಗಳ ಖಾತೆಯಲ್ಲಿ ಪ್ರತಿವರ್ಷ ಕನಿಷ್ಠ 250 ರೂಪಾಯಿಗಳನ್ನು ಹೂಡಿಕೆ ಮಾಡುವುದು ಕಡ್ಡಾಯಗೊಳಿಸಲಾಗಿದ್ದು ಗರಿಷ್ಠ ಒಂದು ಲಕ್ಷದಿಂದ 50,000ಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ.
ಇದನ್ನು ಓದಿ : ರೈಲ್ವೆ ಇಲಾಖೆ ಉದ್ಯೋಗ : ಒಟ್ಟು 9,144 ಹುದ್ದೆಗಳಿಗೆ ಅರ್ಜಿ ಆಹ್ವಾನ SSLC ಪಾಸ್ ಆದವರು ಅರ್ಜಿ ಸಲ್ಲಿಸಿ
ಸುಕನ್ಯಾ ಸಮೃದ್ಧಿ ಯೋಜನೆಯ ನಿಯಮಗಳು :
ಪೋಷಕರು ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅವುಗಳೆಂದರೆ,
- ಸುಕನ್ಯ ಸಮೃದ್ಧಿ ಯೋಜನೆ ಯಲ್ಲಿ ಮಗಳ ಹೆಸರಿನಲ್ಲಿ ಹೂಡಿಕೆ ಮಾಡಲು 15 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ.
- ಈ ಯೋಜನೆಯ ಮುಕ್ತಾಯವು ಆರು ವರ್ಷಗಳ ನಂತರ 21ನೇ ವರ್ಷಕ್ಕೆ ಬರುತ್ತದೆ.
- ಅಂದರೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು 15 ವರ್ಷಗಳವರೆಗೆ ತಮ್ಮ ಮಗಳ ಹೆಸರಿನಲ್ಲಿ ಹೂಡಿಕೆ ಮಾಡಬೇಕಾಗುತ್ತದೆ ಮತ್ತು 21 ವರ್ಷಗಳ ವರೆಗೆ ಬಡ್ಡಿ ದರಗಳ ಲಾಭವನ್ನು ಈ ಯೋಜನೆಯಲ್ಲಿ ಪಡೆಯಬಹುದಾಗಿದೆ.
- ಅಂಚೆ ಇಲಾಖೆಯು ನಡೆಸುವ ಈ ಸುಖನ್ಯ ಸಮೃದ್ಧಿ ಯೋಜನೆ ಯಲ್ಲಿ ಶೇಕಡ 8.2ರ ಬಡ್ಡಿ ದರಗಳ ಲಾಭವನ್ನು ಅಂಚೇಕಚೇರಿಯು ನೀಡುತ್ತದೆ.
- ಇನ್ನು ಮಗುವಿಗೆ ಹತ್ತು ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆಯನ್ನು ತೆರೆಯಬಹುದಾಗಿದೆ.
- ಇದಷ್ಟೇ ಅಲ್ಲದೆ ಪೋಸ್ಟ್ ಆಫೀಸ್ನ ಸುಕನ್ಯ ಸಮೃದ್ಧಿ ಯೋಜನೆಯ ಅಡಿಯಲ್ಲಿ ಒಂದು ಕುಟುಂಬದ ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆಯ ಅಡಿಯಲ್ಲಿ ಸವಲತ್ತುಗಳನ್ನು ಸರ್ಕಾರದಿಂದ ನೀಡಲಾಗುತ್ತದೆ.
ಹೀಗೆ ಸುಕನ್ಯ ಸಮೃದ್ಧಿ ಯೋಜನೆ ಅಡಿಯಲ್ಲಿ ಸಾಕಷ್ಟು ಪ್ರಯೋಜನಗಳು ಲಭ್ಯವಿದ್ದು ಹೂಡಿಕೆಯ ಸಂದರ್ಭದಲ್ಲಿ ಕೆಲವೊಂದಿಷ್ಟು ನಿಯಮಗಳನ್ನು ಅನುಸರಿಸುವುದು ಮುಖ್ಯವಾಗಿರುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಸಿಗಲಿದೆ 70 ಲಕ್ಷ ರೂಪಾಯಿ :
ಪ್ರತಿ ತಿಂಗಳು ಒಂದು ಲಕ್ಷ 50,000ಗಳನ್ನು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಸುಕನ್ಯ ಸಮೃದ್ಧಿ ಯೋಜನೆ ಅಡಿಯಲ್ಲಿ ಪ್ರತಿ ವರ್ಷ 15 ವರ್ಷಗಳವರೆಗೆ ಈ ಹೂಡಿಕೆಯನ್ನು ಮಾಡಿದ ನಂತರ 15 ವರ್ಷಗಳ ನಿರಂತರ ಹೂಡಿಕೆಯ ಮೇಲೆ 21 ವರ್ಷ ಮಗಳಿಗೆ ತುಂಬಿದಾಗ ಆಕೆಗೆ 69 ಲಕ್ಷದ 27,2578 ರೂಪಾಯಿಗಳ ಮೆಚುರಿಟಿಯ ಮೊತ್ತವನ್ನು ಪೋಸ್ಟ್ ಆಫೀಸ್ ನಿಂದ ನೀಡಲಾಗುತ್ತದೆ. ಇದರಿಂದ ಪೋಷಕರು ತಮ್ಮ ಮಗಳ ಮದುವೆ ವಿದ್ಯಾಭ್ಯಾಸ ಉದ್ಯೋಗ ಯಾವುದೇ ಉದ್ದೇಶಕ್ಕಾದರೂ ಈ ಯೋಜನೆಯ ಹಣವನ್ನು ಬಳಸಿಕೊಳ್ಳಬಹುದಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆಗೆ ಬೇಕಾಗುವ ದಾಖಲೆಗಳು :
ಕೇಂದ್ರ ಸರ್ಕಾರದ ಸುಕನ್ಯ ಸಮೃದ್ಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಅರ್ಜಿದಾರರು ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದಿ ಪೋಸ್ಟ್ ಆಫೀಸ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಮಗುವಿನ ಆಧಾರ್ ಕಾರ್ಡ್.
- ಪೋಷಕರ ಆಧಾರ್ ಕಾರ್ಡ್.
- ಪೋಷಕರ ಗುರುತಿನ ಚೀಟಿ.
- ಪೋಷಕರ ಪಾನ್ ಕಾರ್ಡ್.
- ರೇಷನ್ ಕಾರ್ಡ್.
ಹೀಗೆ ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದುವುದರ ಮೂಲಕ ಸುಖನ್ಯ ಸಮೃದ್ಧಿ ಯೋಜನೆ ಯಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದಾಗಿದೆ.
ಒಟ್ಟಾರೆ ಕೇಂದ್ರ ಸರ್ಕಾರವು ರಾಜ್ಯದಲ್ಲಿರುವ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನಗಳು ಸಿಗಬೇಕೆ ಎನ್ನುವ ಉದ್ದೇಶದಿಂದ ತಮ್ಮ ಹೆಣ್ಣು ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆಗಳನ್ನು ತೆರೆದು ಹೂಡಿಕೆ ಮಾಡಬಹುದಾಗಿದೆ.
ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರೇನಾದರೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ 21 ವರ್ಷಗಳ ನಂತರ ಆ ಹೆಣ್ಣು ಮಗುವಿಗೆ ಹೆಚ್ಚಿನ ಆರ್ಥಿಕ ನೆರವನ್ನು ನೀಡಬಹುದು ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ರೈಲ್ವೆ ಇಲಾಖೆ ಉದ್ಯೋಗ : ಒಟ್ಟು 9,144 ಹುದ್ದೆಗಳಿಗೆ ಅರ್ಜಿ ಆಹ್ವಾನ SSLC ಪಾಸ್ ಆದವರು ಅರ್ಜಿ ಸಲ್ಲಿಸಿ
- BMTC Job : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನೇಮಕಾತಿ :ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ
ಹಣ ಎಲ್ಲಿ ಹೂಡಿಕೆ ಮಾಡಬೇಕು …?
ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಬೇಕು.
ಯೋಜನೆಯಲ್ಲಿ ಎಷ್ಟು ಹಣ ಸಿಗುತ್ತೆ ..?
ಹೆಣ್ಣು ಮಗುವಿಗೆ 70 ಲಕ್ಷ ರೂಪಾಯಿ .