ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಬಸ್ ಪಾಸ್ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ನೀಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಶಕ್ತಿ ಯೋಜನೆ ರಾಜ್ಯದಲ್ಲಿ ಜಾರಿಯಾದ ಪ್ರಾರಂಭದಿಂದಲೂ ಮಹಿಳೆಯರ ಸಂಖ್ಯೆ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸಿರುವವರದ್ದು ಹೆಚ್ಚಾಗಿದೆ ಅದರಲ್ಲಿಯೂ ಉಚಿತ ಬಸ್ ಆಗಿರುವ ಕಾರಣದಿಂದಾಗಿ ಶಕ್ತಿ ಯೋಜನೆ ದಿನನಿತ್ಯದ ಪ್ರಯಾಣದಲ್ಲಿ ಬಹಳಷ್ಟು ಮಹಿಳೆಯರಿಗೆ ಸಹಾಯ ಮಾಡಿದೆ ಎಂದು ಹೇಳಬಹುದು.
ಅದರಂತೆ ಇದೀಗ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕೆಂದು ಹಲವಾರು ಬೇಡಿಕೆಗಳು ಸರ್ಕಾರಕ್ಕೆ ಕೇಳಿ ಬಂದಿದ್ದು ಇದೀಗ ರಾಜ್ಯದ ಹಿರಿಯ ನಾಗರಿಕರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಒಂದು ಹೊರ ಬಿದ್ದಿದೆ.
ಹಿರಿಯ ನಾಗರಿಕರಿಂದ ಉಚಿತ ಬಸ್ ಪಾಸ್ ಗೆ ಅರ್ಜಿ ಆಹ್ವಾನ :
ಉಚಿತ ಬಸ್ ಪಾಸ್ಗೆ ಹಿರಿಯ ನಾಗರಿಕರಿಗೆ ಅರ್ಜಿಯನ್ನು ಸಲ್ಲಿಸಲು ರಾಜ್ಯ ಸರ್ಕಾರ ಇದೀಗ ಅವಕಾಶ ಕಲ್ಪಿಸಿದೆ. ಉಚಿತ ಬಸ್ ಪಾಸ್ಗೆ ಪ್ರತಿ ವರ್ಷ ಅರ್ಜಿ ಸಲ್ಲಿಸಲು ಹಿರಿಯ ನಾಗರೀಕರ ಹಾಗೂ ಅಂಗವಿಕಲರ ಸಬಲೀಕರಣ ಇಲಾಖೆಯು ತಿಳಿಸಿದ್ದು ಈ ಬಾರಿಯೂ ಕೂಡ ಉಚಿತ ಬಸ್ ಪಾಸ್ ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅದರಂತೆ ಉಚಿತ ಬಸ್ ಪಾಸ್ ಗೆ ಹೇಗೆ ಅರ್ಜಿ ಸಲ್ಲಿಸಬೇಕು ಕಾರ್ಯವಿಧಾನಗಳೇನು? ಹಾಗೂ ಹಿರಿಯ ನಾಗರಿಕರಿಗೆ ಸಂಬಂಧಿಸಿದಂತೆ ಉಚಿತ ಬಸ್ ಪಾಸ್ಗೆ, ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಎಂಬುದರ ಹೆಚ್ಚಿನ ವಿವರಗಳನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಬಹುದು.
ಇದನ್ನು ಓದಿ : ಸರ್ಕಾರದಿಂದ ಉಚಿತ ಗ್ಯಾಸ್ ಪಡೆಯಲು ಅರ್ಜಿ ಆರಂಭ : ಸುಲಭ ವಿಧಾನದ ಮೂಲಕ ಅರ್ಜಿ ಸಲ್ಲಿಸಿ
ಬಸ್ಗಳಲ್ಲಿ ಮೀಸಲಾತಿ :
ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಶೇಕಡ 25 ರಷ್ಟು ಮೀಸಲಾತಿಯನ್ನು ಬಹುತೇಕ ಎಲ್ಲಾ ಬಸ್ಗಳಲ್ಲಿ ನೋಡಬಹುದಾಗಿದೆ ಅದರಂತೆ ಉಚಿತ ಬಸ್ ಕಾರ್ಡ್ ಹೊಂದಿದ್ದರೆ ಹಿರಿಯ ನಾಗರೀಕರು ಕೆಎಸ್ಆರ್ಟಿಸಿ ಓಲೋ ಮತ್ತು ಬಿಎಂಟಿಸಿ ಯಲ್ಲಿ ಪ್ರಯಾಣಿಸಬಹುದಾಗಿದೆ. ಉಚಿತ ಪ್ರಯಾಣವನ್ನು ಕೆಲವು ಬಸ್ ಗಳು ನೀಡಿದರೆ ಇನ್ನೂ ಕೆಲವು ಬಸ್ಗಳಲ್ಲಿ ಕೆಲವು ರಿಯಾಯಿತಿಯ ದರದಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ.
ಉಚಿತ ಬಸ್ ಪಾಸ್ಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು :
ಹಿರಿಯ ನಾಗರಿಕರು ಉಚಿತ ಬಸ್ ಪಾಸ್ ಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಈ ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಆಗ ಮಾತ್ರ ಸುಲಭವಾಗಿ ಉಚಿತ ಬಸ್ ಪಾಸ್ಗೆ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುತ್ತದೆ.
- ಭಾರತೀಯ ರೆಸಿಡೆನ್ಸಿ ಪುರಾವೆ
- ಆಧಾರ್ ಕಾರ್ಡ್
- ವಯಸ್ಸಿನ ದೃಢೀಕರಣ ಪತ್ರ
- ಮೊಬೈಲ್ ನಂಬರ್
- ಪಾಸ್ಪೋರ್ಟ್ ಸೈಜ್ ಫೋಟೋ
ಹೀಗೆ ಈ ಅಗತ್ಯ ದಾಖಲೆಗಳನ್ನು ಹೊಂದುವುದರ ಮೂಲಕ ನಿಗದಿತ ದಿನಾಂಕದೊಳಗೆ ಹಿರಿಯ ನಾಗರಿಕರು ಉಚಿತ ಬಸ್ ಪಾಸ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಧಾನ :
ಹಿರಿಯ ನಾಗರಿಕರಿಗೆ ಉಚಿತ ಬಸ್ ಪಾಸ್ ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ಇದೀಗ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ತಮ್ಮ ಹತ್ತಿರದ ಗ್ರಾಮವನ್ ಕರ್ನಾಟಕ ಬಂದ್ ಮತ್ತು ಕಂಪ್ಯೂಟರ್ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಕೆಯಾದ ನಂತರ ಸಂಬಂಧಪಟ್ಟ ಇಲಾಖೆಯ ಅಧೀನಕ್ಕೆ ಆರ್ ಜಿ ಬರುತ್ತದೆ ಅದಾದ ನಂತರ ಅದರ ಪರಿಶೀಲನೆ ನಡೆಸಿ ಹಿರಿಯ ನಾಗರಿಕರಿಗೆ ಬಸ್ ಪಾಸ್ ಗಳನ್ನು ನೀಡಲಾಗುತ್ತದೆ.
ವಿಮಾನ ರೈಲ್ವೆ ಮತ್ತು ಬಸ್ಗಳಲ್ಲಿಯೂ ಕೂಡ ಹಿರಿಯ ನಾಗರಿಕರಿಗೆ ರಿಯಾಯಿತಿಗಳು ಲಭ್ಯವಿರುತ್ತದೆ. ಅದಷ್ಟೇ ಅಲ್ಲದೆ ಆದಾಯ ತೆರಿಗೆಯಿಂದಲೂ ಕೂಡ ಇದರಲ್ಲಿ ವಿನಾಯಿತಿ ಕಲ್ಪಿಸಲಾಗಿದ್ದು ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳುವಂತಹ ಕೌಶಲ್ಯ ಹಿರಿಯ ನಾಗರಿಕರು ಹೊಂದಿರಬೇಕು.
ಒಟ್ಟಾರೆ ರಾಜ್ಯ ಸರ್ಕಾರವು ಹಿರಿಯ ನಾಗರಿಕರಿಗೆ ಸಹಾಯವಾಗಬೇಕೆನ್ನುವ ಉದ್ದೇಶದಿಂದ ಉಚಿತ ಬಸ್ ಪಾಸ್ ಗಳನ್ನು ನೀಡುತ್ತಿದ್ದು ಈ ಉಚಿತ ಬಸ್ ಪಾಸ್ ಮೂಲಕ ಹೆಚ್ಚಿನ ಪ್ರಯೋಜನವನ್ನು ಹಿರಿಯ ನಾಗರಿಕರು ಪಡೆಯಬಹುದಾಗಿದೆ.
ಹಾಗಾಗಿ ಈ ಮಾಹಿತಿಯನ್ನು ನಿಮಗೆ ತಿಳಿದಿರುವ ಹಿರಿಯ ನಾಗರಿಕರಿಗೆ ಶೇರ್ ಮಾಡುವ ಮೂಲಕ ಉಚಿತ ಬಸ್ ಪಾಸ್ ಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ ಎಂದು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ರೇಷನ್ ಕಾರ್ಡ್ ನಂಬರ್ ಹಾಕಿ ಗೃಹಲಕ್ಷ್ಮಿ ಹಣ ಚೆಕ್ ಮಾಡಿ : 8ನೇ ಕಂತಿನ ಹಣ !
- ಗೃಹಜ್ಯೋತಿ ಉಚಿತ ಕರೆಂಟ್ ಕೆಲವರಿಗೆ ಇಲ್ಲ : ಸರ್ಕಾರದಿಂದ ಹೊಸ ಆದೇಶ ತಪ್ಪದೆ ನೋಡಿ !
ಯಾವ ರಾಜ್ಯದಲ್ಲಿ ಈ ಅವಕಾಶ ..?
ಕರ್ನಾಟಕ ರಾಜ್ಯದಲ್ಲಿ ಈ ಅವಕಾಶ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವುದು ..?
ಕೊನೆ ದಿನಾಂಕ ನಿಗದಿ ಆಗಿಲ್ಲ.